More

    15ರ ವರೆಗೆ ಕಟೀಲು, ಧರ್ಮಸ್ಥಳ, ಕುಕ್ಕೆಯಲ್ಲಿ ಕೋವಿಡ್ ನಿರ್ಬಂಧ

    ಮಂಗಳೂರು: ಜಿಲ್ಲೆಯಲ್ಲಿ ಇನ್ನೂ ಕೋವಿಡ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಆ.5ರಿಂದ 15ರ ವರೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಅದರಂತೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರವೇ ದೇವಸ್ಥಾನಗಳು ತೆರೆದಿರುತ್ತವೆ. ಅಲ್ಲದೆ ವಾರಾಂತ್ಯಗಳಲ್ಲಿ ಶನಿವಾರ, ಭಾನುವಾರ ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ವಸತಿ ಗೃಹದಲ್ಲಿ ತಂಗುವುದಕ್ಕೂ ಅವಕಾಶ ಇಲ್ಲ, ಅಲ್ಲದೆ ದೇವರ ದರ್ಶನಕ್ಕೂ ಅವಕಾಶವಿಲ್ಲ. ಶನಿವಾರ, ಭಾನುವಾರ ಎಲ್ಲಾ ರೀತಿಯ ಉತ್ಸವ, ಸೇವೆ, ತೀರ್ಥ, ಪ್ರಸಾದ, ಮುಡಿಸೇವೆ, ವಸತಿಗಳನ್ನು ನಿರ್ಬಂಧಿಸಿ ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರವೇ ಅವಕಾಶ ಕಲ್ಪಿಸಿದೆ.

    ಉಳಿದ ದಿನಗಳಲ್ಲಿ ವಸತಿಗೃಹದಲ್ಲಿ ತಂಗುವವರು 72 ಗಂಟೆಯೊಳಗೆ ಆರ್‌ಟಿ ಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಕೊವಿಡ್ ಶಿಷ್ಟಾಚಾರ ಪಾಲಿಸುವ ದೃಷ್ಟಿಯಿಂದ ಕೊಠಡಿಗಳಲ್ಲಿ ಹೆಚ್ಚುವರಿ ವ್ಯಕ್ತಿಗಳು ಅವಕಾಶವಿಲ್ಲ. ಎಲ್ಲಾ ಕೊಠಡಿಗಳನ್ನೂ ವಾಸ್ತವ್ಯಕ್ಕೆ ಮುಂಚೆ ಸ್ಯಾನಿಟೈಸ್ ಮಾಡಬೇಕು ಹಾಗೂ ಭಕ್ತಾದಿಗಳು ಮಾಸ್ಕ್ ಧರಿಸಿರಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts