More

    ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಪ್ರಮಾಣ ಹೆಚ್ಚಳ: ವೈದ್ಯರು ಸೂಚಿಸಿದ ಪರಿಹಾರವೇನು?

    ಬೆಂಗಳೂರು: ದೇಶಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಕಾಯಿಲೆ ಪ್ರಮಾಣವು ಹೆಚ್ಚಾಗುತ್ತಿದೆ ಎಂದು ಸಂಪ್ರದ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ತಜ್ಞ ಡಾ. ಇಂತೆಝಾರ ಮೇಹ್ಲಿ ಅವರು ಕಳವಳ ವ್ಯಕ್ತಪಡಿಸಿದರು.

    ಮಕ್ಕಳ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ 10 ಲಕ್ಷ ಮಕ್ಕಳಲ್ಲಿ 38ರಿಂದ 124 ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ದೇಶಾದ್ಯಂತ ಸುಮಾರು 50 ಸಾವಿರ ಮಕ್ಕಳು ರೋಗದಿಂದ ಬಳಲುತ್ತಿದ್ದಾರೆ ಎಂದರು.

    ಮಕ್ಕಳಲ್ಲಿ ಉಂಟಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಿಗೆ ಮೂಲ ಅಥವಾ ಕಾರಣವೇನೆಂದು ಇನ್ನೂ ಪತ್ತೆಯಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಅನುವಂಶೀಯತೆ, ಪರಿಸರ ಮತ್ತು ಸೋಂಕುಗಳು ಹರಡಿರುವುದು ಈ ರೋಗಕ್ಕೆ ಕಾರಣವಾಗಿದೆ. ಖುಷಿಯ ವಿಚಾರವೆಂದರೆ, ರೋಗದ ಲಕ್ಷಣ ವ್ಯತ್ಯಾಸವಿರುವ ಕಾರಣ ವಯಸ್ಕರ ಕ್ಯಾನ್ಸರ್‌ಗಿಂತ ಮಕ್ಕಳಲ್ಲಿ ಗುಣಮುಖರಾಗುವ ಪ್ರಮಾಣ ಹೆಚ್ಚಾಗಿದೆ ಎಂದರು.

    ಪಾಶ್ಚಾತ್ಯ ದೇಶಗಳಲ್ಲಿ ಶೇ.80-85 ಮಕ್ಕಳು ಈ ರೋಗದಿಂದ ಗುಣಮುಖರಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಗುಣಮುಖರಾಗುವ ಪ್ರಮಾಣ ಸುಧಾರಣೆಯಾಗುತ್ತಿದೆ. ಇನ್ನೂ ಉತ್ತಮ ಲಿತಾಂಶ ಬರಬೇಕೆಂದರೆ, ರೋಗವನ್ನು ಆರಂಭದಲ್ಲಿಯೇ ಪತ್ತೆ ಮಾಡಿ ಸುಲಭ ಮಾರ್ಗದಲ್ಲಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

    ಎಡಬಿಡದೇ ಜ್ವರ ಬರುವುದು, ತೂಕ ಕಡಿಮೆಯಾಗುವುದು, ರಾತ್ರಿ ವೇಳೆ ಬೆವರುವುದು, ಕುತ್ತಿಗೆ ಅಥವಾ ತೊಡೆ ಸಂದುಗಳಲ್ಲಿ ಗಂಟು ಕಾಣಿಸಿಕೊಳ್ಳುವುದು, ತಲೆ ನೋವು, ವಾಂತಿ ಮತ್ತು ಅನಾರೋಗ್ಯಕ್ಕೆ ತುತ್ತಾಗುವುದು, ಊತ ಮತ್ತು ರಕ್ತಸ್ರಾವ ಆಗುವುದರ ಬಗ್ಗೆ ಪಾಲಕರು ಗಮನಹರಿಸಬೇಕು. ಈ ಎಲ್ಲ ಲಕ್ಷಣಗಳು ಕಾಯಿಲೆಯ ಲಕ್ಷಣಗಳಾಗಿರುತ್ತವೆ. ಲಕ್ಷಣಗಳು ಗೊತ್ತಾದ ತಕ್ಷಣ ಸೂಕ್ತ ಚಿಕಿತ್ಸೆ ಆರಂಭಿಸುವುದು ಉತ್ತಮ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts