More

    ಯುನೈಟೆಡ್​ ಕಿಂಗ್​ಡಮ್​ನ ನೂತನ ಆರ್ಥಿಕ ಸಚಿವರಾಗಿ ಇನ್ಫೋಸಿಸ್​ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ನೇಮಕ

    ಲಂಡನ್​: ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಹಾಗೂ ಭಾರತ ಮೂಲದ ರಾಜಕಾರಣಿ ರಿಷಿ ಸುನಕ್​ ಅವರು ಯುನೈಟೆಡ್​ ಕಿಂಗ್​ಡಮ್​ನ ನೂತನ ಆರ್ಥಿಕ ಸಚಿವರಾಗಿ ನೇಮಕವಾಗಿದ್ದಾರೆ.

    ಪ್ರಧಾನಿ ಬೋರಿಸ್​ ಜಾನ್ಸನ್​ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಪುನಾರಚನೆಯಲ್ಲಿ ಸುನಕ್​ ಆರ್ಥಿಕ ಸಚಿವರಾಗಿ ಬಡ್ತಿ ಪಡೆದಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕ​ ಬೋರಿಸ್​, ಸರ್ಕಾರದ ಉನ್ನತ ಸಚಿವರುಗಳಲ್ಲಿ ಒಬ್ಬರಾಗಿದ್ದಾರೆ. ಮತ್ತೊಬ್ಬ ಭಾರತೀಯ ಮೂಲದ ಪ್ರೀತಿ ಪಟೇಲ್ ಸಹ ಗೃಹ ಕಾರ್ಯದರ್ಶಿಯಾಗಿದ್ದು, ಅವರೊಟ್ಟಿಗೆ ಸುನಕ್​ ಕೂಡ ಒಳ್ಳೆಯ ಸ್ಥಾನವನ್ನು ಅಲಂಕರಿಸಿದ್ದಾರೆ.

    ಇದಕ್ಕೂ ಮುನ್ನ ಪಾಕಿಸ್ತಾನದ ಮೂಲದ ಸಾಜಿದ್​ ಜಾವಿದ್​ ಅವರು ಚಾನ್ಸಲರ್(ಆರ್ಥಿಕ ಸಚಿವ)​ ಸ್ಥಾನಕ್ಕ ರಾಜೀನಾಮೆ ನೀಡಿದ್ದರು. 2019 ಡಿಸೆಂಬರ್​ ಚುನಾವಣೆಯಲ್ಲಿ ಬೋರಿಸ್​ ಜಾನ್ಸನ್​ ಅವರು ಬಹುಮತದೊಂದಿಗೆ ಆಯ್ಕೆಯಾದ ಬಳಿಕ ನಡೆದ ಬಹುದೊಡ್ಡ ರಾಜಕೀಯ ಬೆಳವಣಿಗೆ ಇದಾಗಿದೆ.

    ಇದೀಗ ಜಾವೀದ್​ ಸ್ಥಾನಕ್ಕೆ ಭಾರತೀಯನ ಪ್ರವೇಶವಾಗಿದೆ. ಇದಕ್ಕೂ ಮುನ್ನ ಜಾವೀದ್​ ಅವರ ಜ್ಯೂನಿಯರ್​ ಆಗಿದ್ದ, ಸುನಕ್​ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

    39 ವರ್ಷದ ಸುನಕ್​ ಅವರು ಸರ್ಕಾರದಲ್ಲಿ ಎರಡನೇ ಪ್ರಮುಖ ಆಡಳಿತವಾಗಿರುವ ಹಣಕಾಸು ಇಲಾಖೆಯ ಚುಕ್ಕಾಣಿ ಹಿಡಿದ್ದಿದ್ದಾರೆ. ಅಂದಹಾಗೆ ಸುನಕ್​, ಯಾರ್ಕ್​​ಶೈರ್​ನ ರಿಚ್​ಮಂಡ್​ ಕ್ಷೇತ್ರದ ಸಂಸದರಾಗಿದ್ದಾರೆ. ಇವರು 2015ರಲ್ಲಿ ಮೊದಲ ಬಾರಿಗೆ ಯುಕೆ ಸಂಸತ್ತಿಗೆ ಪ್ರವೇಶ ಪಡೆದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts