More

    ಗೆಳತಿ ಇಶಾ ನೇಗಿಯೊಂದಿಗಿನ ಫೋಟೋ ಶೇರ್​ ಮಾಡಿ ವದಂತಿಗೆ ಬ್ರೇಕ್​ ಹಾಕಿದ ರಿಷಭ್​ ಪಂತ್​!

    ನವದೆಹಲಿ: ಟೀಮ್​ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್​ ಅವರು ತಮ್ಮ ಗೆಳತಿ ಇಶಾ ನೇಗಿಯೊಂದಿಗೆ ಹೊಸ ವರ್ಷ ಆಚರಿಸಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಈವರೆಗೂ ಹರಿದಾಡುತ್ತಿದ್ದ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.

    ಹಿಮಚಾದಿತ ಬೆಟ್ಟವೊಂದರಲ್ಲಿ ಇಶಾ ನೇಗಿಯೊಂದಿಗೆ ರಿಷಭ್​ ಕ್ಯಾಮರಾಗೆ ಪೋಸ್​ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ, ನಾನು ನಿನ್ನೊಂದಿಗೆ ಇದ್ದಾಗ ನನ್ನನ್ನು ನಾನು ಇಷ್ಟಪಡುತ್ತೇನೆ ಎಂದು ರಿಷಭ್​ ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಇಶಾ ನೇಗಿ ಕೂಡ ಪೋಟೋ ಪೋಸ್ಟ್​ ಮಾಡಿ, ತಮ್ಮ ಗೆಳೆತನ ಐದು ವರ್ಷ ಪೂರೈಸಿರುವುದನ್ನು ಬಹಿರಂಗಪಡಿಸಿದ್ದಾರೆ.

    ಇನ್ನು ಕಳೆದ ಜನವರಿಯಲ್ಲಿ ರಿಷಭ್​ ಪಂತ್​ ತಮ್ಮ ಅಭಿಮಾನಿಗಳಿಗೆ ಇಶಾ ಅವರ ದರ್ಶನ ಮಾಡಿಸಿದ್ದರು. ಮೊದಲ ಬಾರಿಗೆ ಇಶಾ ಜತೆಗಿನ ಫೋಟೋ ಪೋಸ್ಟ್​ ಮಾಡು ನಿನ್ನನ್ನು ಸಂತೋಷದಿಂದಿಡಲು ಬಯಸುತ್ತೇನೆ. ಏಕೆಂದರೆ ನಾನು ಸಂತೋಷವಾಗಿರಲು ನೀನೆ ಕಾರಣ ಎಂದು ಬರೆದು ಪರಿಚಯಿಸಿದ್ದರು. ಬಳಿಕ ರಿಷಭ್​ ಪಂತ್​ ಬಗ್ಗೆ ಪ್ರೀತಿ ಕುರಿತಾದ ಸಾಕಷ್ಟು ವದಂತಿಗಳು ಹರಡಲಾರಂಭಿಸಿತ್ತು. ಆದರೆ, ಯಾವುದಕ್ಕೂ ಪಂತ್​ ಪ್ರತಿಕ್ರಿಯೆ ನೀಡಿರಲಿಲ್ಲ.

    ಇಶಾ ನೇಗಿ ಇಂಟೀರಿಯರ್​ ಡಿಸೈನರ್​ ಆಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ರಿಷಭ್​ ಜತೆಗಿನ ಸಾಕಷ್ಟು ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿರುವುದು ಅವರಿಬ್ಬರ ನಡುವಿನ ಪ್ರೀತಿಗೆ ಸಾಕ್ಷಿಯಾಗಿದೆ.​

    ಇನ್ನು ಪಂತ್​ ವಿಚಾರಕ್ಕೆ ಬಂದರೆ ಗುವಾಹಟಿಯಲ್ಲಿ ಭಾನುವಾರದಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಮೂರು ಟಿ20 ಸರಣಿಯ ಪಂದ್ಯದಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಲು ಸಜ್ಜಾಗಿದ್ದಾರೆ. (ಏಜೆನ್ಸೀಸ್​)

    https://www.instagram.com/p/B61BHcuAyQ-/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts