More

    VIDEO | ಐಸಿಸಿ ನಿಯಮದ ದೋಷದಿಂದಾಗಿ ರಿಷಭ್ ಪಂತ್‌ಗೆ 4 ರನ್ ನಷ್ಟ!

    ಪುಣೆ: ‘ಅಂಪೈರ್ಸ್‌ ಕಾಲ್’ ಮತ್ತು ‘ಸ್‌ಟಾ ಸಿಗ್ನಲ್’ ಬಳಿಕ ಐಸಿಸಿ ನಿಯಮದಲ್ಲಿನ ಮತ್ತೊಂದು ದೋಷ ಶುಕ್ರವಾರ ಬೆಳಕಿಗೆ ಬಂದಿದ್ದು, ರಿಷಭ್ ಪಂತ್ ಮತ್ತು ಭಾರತ ತಂಡಕ್ಕೆ ಇದು 4 ರನ್ ನಷ್ಟವನ್ನೂ ತಂದಿದೆ! ಭಾರತ ಇನ್ನೂ 39 ಎಸೆತ ಬಾಕಿ ಇರುವಂತೆಯೇ ಸೋತಿದ್ದರಿಂದ ಈ ರನ್‌ಗಳು ಭಾರತಕ್ಕೆ ಹೆಚ್ಚಿನ ನಷ್ಟ ತರಲಿಲ್ಲ ಎನ್ನಬಹುದು. ಆದರೆ ರೋಚಕ ಪಂದ್ಯಗಳಲ್ಲಿ ಈ ರನ್‌ಗಳೇ ನಿರ್ಣಾಯಕವೆನಿಸಿದರೆ ಗತಿ ಎಂಬ ಪ್ರಶ್ನೆಯೂ ಎದ್ದಿದೆ.

    ಟಾಮ್ ಕರ‌್ರನ್ ಎಸೆದ ಪಂದ್ಯದ 2ನೇ ಏಕದಿನ ಪಂದ್ಯದ 40ನೇ ಓವರ್‌ನ ಕೊನೇ ಎಸೆತದಲ್ಲಿ ಪಂತ್ ರಿವರ್ಸ್ ಸ್ವೀಪ್ ಮಾಡಿದರು. ಬ್ಯಾಟ್ ಎಡ್ಜ್ ಆದ ಚೆಂಡು ಫೈನ್‌ಲೆಗ್‌ನಲ್ಲಿ ಬೌಂಡರಿ ಗೆರೆ ದಾಟಿತು. ಆದರೆ ಈ ನಡುವೆ ಕರ‌್ರನ್ ಮನವಿ ಪುರಸ್ಕರಿಸಿದ ಅಂಪೈರ್, ಪಂತ್ ವಿರುದ್ಧ ಎಲ್‌ಬಿಡಬ್ಲ್ಯು ತೀರ್ಪು ನೀಡಿದರು. ಈ ವೇಳೆ ಪಂತ್ ಡಿಆರ್‌ಎಸ್ ಮೊರೆ ಹೋದರು.

    ಇದನ್ನೂ ಓದಿ: ಕನ್ನಡಿಗ ಕೆಎಲ್ ರಾಹುಲ್ ಶತಕ ವ್ಯರ್ಥ, 2ನೇ ಏಕದಿನದಲ್ಲಿ ಭಾರತಕ್ಕೆ ಸೋಲು

    ಟಿವಿ ಮರುಪ್ರಸಾರದಲ್ಲಿ ಚೆಂಡು ಬ್ಯಾಟ್ ಸ್ಪರ್ಶಿಸಿದ್ದು ಸ್ಪಷ್ಟವಾಗಿತ್ತು. ಇದರಿಂದ ಪಂತ್ ‘ನಾಟೌಟ್’ ಆದರೂ, ಅವರಿಗೆ ಆ ಬೌಂಡರಿ ಸಿಗಲಿಲ್ಲ. ಐಸಿಸಿ ನಿಯಮದಂತೆ ಅದನ್ನು ‘ಡೆಡ್‌ಬಾಲ್’ ಎಂದು ಹೇಳಲಾಯಿತು. ಆದರೆ ಮರುಎಸೆತವೂ ಇರದೆ ಓವರ್ ಮುಕ್ತಾಯಗೊಂಡಿತು. ಗಾಯಗೊಂಡು ಸರಣಿಯಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ಸ್ಥಾನವನ್ನು ರಿಷಭ್ ಪಂತ್ ತುಂಬಿದರು. ಜತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಕೆಎಲ್ ರಾಹುಲ್ ಅವರಿಂದ ಕಸಿದುಕೊಂಡರು.

    ಈ ನಡುವೆ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಟೆಸ್ಟ್, ಟಿ20 ಕ್ರಿಕೆಟ್‌ನ ಭರ್ಜರಿ ಾರ್ಮ್ ಅನ್ನು ಏಕದಿನ ಕ್ರಿಕೆಟ್‌ಗೂ ವಿಸ್ತರಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕಿಳಿದ ಪಂತ್, ಸ್ಟೋಕ್ಸ್ ಎಸೆದ ಪಂದ್ಯದ 41ನೇ ಓವರ್‌ನಲ್ಲಿ ಸತತ 2 ಸಿಕ್ಸರ್ ಸಿಡಿಸಿ 28 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದು ಏಕದಿನದಲ್ಲಿ ಅವರ 2ನೇ ಅರ್ಧಶತಕವಾಗಿದೆ. ರಾಹುಲ್ ನಿರ್ಗಮನದ ಬಳಿಕ ಹಾರ್ದಿಕ್ ಪಾಂಡ್ಯ (35 ರನ್, 16 ಎಸೆತ, 1 ಬೌಂಡರಿ, 4 ಸಿಕ್ಸರ್) ಪಂತ್ ಬಿರುಸಿನ ಆಟಕ್ಕೆ ಸಮರ್ಥ ಸಾಥ್ ನೀಡಿದರು. ಇದರಿಂದ ಭಾರತ ಕೊನೇ 10 ಓವರ್‌ಗಳಲ್ಲಿ 126 ರನ್ ದೋಚಿತು.

    ಕೆಎಲ್ ರಾಹುಲ್ ಶತಕ ಪೂರೈಸಿದ ಬಳಿಕ ಕಿವಿ ಮುಚ್ಚಿಕೊಂಡಿದ್ದು ಯಾಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts