More

    ಐಪಿಎಲ್‌ಗೆ ಪಂತ್ ಫಿಟ್: ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ವಿಶ್ವಾಸ

    ಮೆಲ್ಬೋರ್ನ್: ಕಾರು ಅಪಘಾತದಿಂದ ಗಾಯಕ್ಕೆ ತುತ್ತಾಗಿ ಒಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮುಂಬರುವ ಐಪಿಎಲ್ ಟೂರ್ನಿಗೆ ಫಿಟ್ ಆಗುವ ನಿರೀಕ್ಷೆ ಇದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂತ್ ಸಂಪೂರ್ಣವಾಗಿ ಫಿಟ್ ಆದರೂ, ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

    ರಿಷಭ್ ಅವರು ಐಪಿಎಲ್ ಆಡಲು ಫಿಟ್ ಆಗುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಬ್ಯಾಟರ್ ಅಥವಾ ವಿಕೆಟ್ ಕೀಪರ್ ಆಗಿ ಸಂಪೂರ್ಣ ಸಾಮರ್ಥ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬುದರ ಬಗ್ಗೆ ಖಚಿತವಿಲ್ಲ. ಕೆಲ ವೈರಲ್ ವಿಡಿಯೊಗಳಲ್ಲಿ ನೀವು ಗಮನಿಸಿರಬಹುದು, ಪಂತ್ ಚೆನ್ನಾಗಿ ಓಡುತ್ತಿದ್ದಾರೆ. ಆದರೆ ನಾವು ಮೊದಲ ಪಂದ್ಯದಿಂದ ಕೇವಲ ಆರು ವಾರಗಳ ದೂರದಲ್ಲಿದ್ದೇವೆ. ಪಂತ್ ಕಂಬ್ಯಾಕ್ ಬಗ್ಗೆ ನಾವೂ ಕಾತುರರಾಗಿದ್ದು, 14 ಪಂದ್ಯಗಳಲ್ಲಿ ಕನಿಷ್ಠ 10 ಪಂದ್ಯದಲ್ಲಿ ಅವರು ವಿಕೆಟ್ ಕೀಪಿಂಗ್ ನಿರ್ವಹಿಸಿದರೆ ತಂಡಕ್ಕೆ ಬೋನಸ್ ಆಗಿರಲಿದೆ ಅಥವಾ ಅವರನ್ನು ಇಂಪ್ಯಾಕ್ಟೃ್ ಪ್ಲೇಯರ್ ಆಗಿ ಕಣಕ್ಕಿಳಿಸುವ ಯೋಚನೆಯೂ ್ರಾಂಚೈಸಿ ಮುಂದೆ ಇದೆ. ಕಳೆದ 12-13 ತಿಂಗಳುಗಳ ಪ್ರಯಾಣ ಭಯಾನಕ ಘಟನೆಯಾಗಿದೆ. ಅವರು ಬದುಕುಳಿದಿರುವುದು ಅದೃಷ್ಟ ಎಂದು ಪಾಂಟಿಂಗ್ ತಿಳಿಸಿದ್ದಾರೆ.

    ಒಂದು ವೇಳೆ ರಿಷಭ್ ಪಂತ್ ಮುಂಬರುವ ಐಪಿಎಲ್‌ನಲ್ಲಿ ಕಣಕ್ಕಿಳಿದರೆ ಟೀಮ್ ಇಂಡಿಯಾ ಪಾಲಿಗೂ ಇದು ವರದಾನವಾಗಲಿದ್ದು, ಜೂನ್‌ನನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್‌ನಲ್ಲಿ ಪಂತ್ ಆಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಪಂತ್ ಐಪಿಎಲ್‌ಗೆ ಗೈರಾದರೆ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts