More

    ಹಕ್ಕು ಚಲಾಯಿಸಿದ ಮತದಾರ

    ಬೈಲಹೊಂಗಲ: ತಾಲೂಕಿನ 34 ಗ್ರಾಪಂ ಪೈಕಿ 33 ಗ್ರಾಪಂಗಳಿಗೆ ಮಂಗಳವಾರ ಮತದಾನ ಪ್ರಕ್ರಿಯೆ ನಡೆಯಿತು. ಮೋಡ ಕವಿದ ವಾತಾವರಣದ ಮಧ್ಯೆ ಆರಂಭವಾದ ಮತದಾನ ಪ್ರಕ್ರಿಯೆ ಬೆಳಗ್ಗೆ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನ ಮನೆಯಿಂದ ಹೊರಬಂದ ಹೆಚ್ಚಿನ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಕುಟುಂಬಸ್ಥರ ಸಹಾಯದಿಂದ ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಬಂದು ಸಾಂವಿಧಾನಿಕ ಹಕ್ಕು ಚಲಾಯಿಸಿದರು. ಒಟ್ಟು 238 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.

    ಎಲ್ಲ ಮತಗಟ್ಟೆಗಳಲ್ಲಿ ಅನಾರೋಗ್ಯಕ್ಕೆ ಒಳಗಾದವರು, ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿರುವುದು ಕಂಡುಬಂತು. ಶೇ.80 ಮತದಾನವಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

    ಉಳ್ಳಾಗಡ್ಡಿ-ಖಾನಾಪುರ ವರದಿ: ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ಬಹುತೇಕ ಶಾಂತಿಯಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು. ಬೆಳಗ್ಗೆ 7 ರಿಂದ 10 ಗಂಟೆಯವರೆಗೂ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ನಂತರ ವೇಗ ಪಡೆದುಕೊಂಡಿತು. ಉಳ್ಳಾಗಡ್ಡಿ-ಖಾನಾಪುರ, ಚಿಕಾಲಗುಡ್ಡ, ಯಮಕನಮರಡಿ, ಕೋಚರಿ, ಹಂಚಿನಾಳ, ಗೋಟೂರ, ಹತ್ತರಗಿ, ಗ್ರಾಮಗಳಲ್ಲಿತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಹಿತಕರ ಘಟನೆ ಜರುಗದಂತೆ ಎಚ್ಚರ ವಹಿಸಲಾಗಿತ್ತು.

    ಶೇ.81ರಷ್ಟು ಮತದಾನ: ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯಲ್ಲಿ ಮೂಡಲಗಿ ತಾಲೂಕು ವ್ಯಾಪ್ತಿಯ 20 ಗ್ರಾಪಂಗಳಲ್ಲಿ ಒಟ್ಟು 98219 ಮತದಾರರಿದ್ದು, 41,260 ಪುರುಷ, 39,489 ಮಹಿಳೆಯರು ಸೇರಿ ಒಟ್ಟು 80,749 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು ಶೇ. 82.21 ಮತದಾನವಾಗಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.

    ಜನರನ್ನು ಚದುರಿಸಿದ ಪೊಲೀಸರು

    ಆನಿಗೋಳ ಮತಗಟ್ಟೆ ಎದುರು ಕಿಕ್ಕಿರಿದು ಜಮಾಯಿಸಿದ್ದ ಜನರನ್ನು ಪೊಲೀಸರು ಚದುರಿಸಿದರು. ಮತಗಟ್ಟೆಗೆ ಭೇಟಿ ನೀಡಿದ ಎಎಸ್ಪಿ ಪ್ರದೀಪ ಗುಂಟೆ, ಮತಗಟ್ಟೆ ಸುತ್ತಲೂ ಗುಂಪು, ಗುಂಪಾಗಿ ಜನರು ನಿಲ್ಲದಂತೆ ತಾಕೀತು ಮಾಡಿದರು. ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿದರು. ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಚುನಾವಣಾಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts