More

    ಪ್ರಣಯ್​​ ಹತ್ಯೆ ಕತೆಯನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿಗೆ ನೆಟ್ಟಿಗರ ಛೀಮಾರಿ!

    ಮುಂಬೈ: ಸದಾ ವಿವಾದಗಳಿಂದ ಸುದ್ದಿಯಾಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 2018ರಲ್ಲಿ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆ ಆಧಾರಿತ ಸಿನಿಮಾ ಪೋಸ್ಟರ್​ ಅನ್ನು ವರ್ಮಾ ಅವರು ಬಿಡುಗಡೆ ಮಾಡಿದ್ದು, ಪೋಸ್ಟರ್​ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

    ಭಾನುವಾರ ತಾನೇ “ಮರ್ಡರ್​” ಹೆಸರಿನ ಮುಂದಿನ ಚಿತ್ರದ ಪೋಸ್ಟರ್​ ಅನ್ನು ತಮ್ಮ ಟ್ವಿಟರ್​ನಲ್ಲಿ ವರ್ಮಾ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ವರ್ಮಾ, ಅಮೃತಾ ರಾವ್​ ಹಾಗೂ ಮಾರುತಿ ರಾವ್​ ಜೀವನಾಧಾರಿತ ಚಿತ್ರವು ಒಂದು ಮನಕಲಕುವ ಕತೆಯಾಗಲಿದೆ. ಮಗಳನ್ನು ತುಂಬಾ ಪ್ರೀತಿಸುವ ತಂದೆಯ ಅಪಾಯಕಾರ ಸಾಹಸಗಳು ಪ್ರೇಕ್ಷಕರ ಹೃದಯವನ್ನು ತಟ್ಟಲಿದೆ ಎಂದು ಅಪ್ಪಂದಿರ ದಿನದಂದೇ ಪೋಸ್ಟರ್​ ಬಿಡುಗಡೆ ಮಾಡಿ, ಸ್ಯಾಡ್​ ಫಾದರ್ಸ್​ ಡೇ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ಇದೊಂದು ನೈಜ ಘಟನೆಯ ಕುಟುಂಬ ಆಧಾರಿತ ಚಿತ್ರವಾಗಿದೆ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದ್ದು, ತಂದೆ ಮಗಳ ಪಾತ್ರಗಳನ್ನು ಪರಿಚಯಿಸಲಾಗಿದೆ. ಇದು ಅಮೃತಾ ಮತ್ತು ಮಾರುತಿ ರಾವ್​ ನಿಜ ಜೀವನಾಧಾರಿತ ಚಿತ್ರವಾಗಿದ್ದು, ಇದರಲ್ಲಿ ಮಾರುತಿ ರಾವ್, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ತನ್ನ ಮಗಳ ಪತಿ ಪ್ರಣಯ್​ನನ್ನು ಕೊಲ್ಲಲು ಸುಪಾರಿ ನೀಡಿದ ಆಧಾರದ ಮೇಲೆ ಚಿತ್ರಕತೆ ಸಾಗಲಿದೆ.

    ಮಗಳ ಮೇಲಿನಾ ಅತಿಯಾದ ಪ್ರೀತಿಯೇ ಕೊಲೆಗೆ ಕಾರಣ ಎಂದು ವರ್ಮಾ ಹೇಳಿರುವುದೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಮಗಳ ಸೊಕ್ಕಿನ ವರ್ತನೆಯೇ ಕೊಲೆಗೆ ಪುಷ್ಠಿ ನೀಡಿದೆ ಎಂದು ವರ್ಮಾ ಸಮರ್ಥನೆ ನೀಡಿರುವುದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

    ನೆಟ್ಟಿಗರೊಬ್ಬರು ಟ್ವೀಟ್​ ಮಾಡಿ, ಮರ್ಯಾದೆ ಹತ್ಯೆಯ ಸ್ಟೋರಿಯನ್ನು ಅಪ್ಪ-ಮಗಳ ಪ್ರೀತಿಯ ಸಂಬಂಧವೆಂದು ಹೇಳಲು ವರ್ಮಾ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಮತ್ತೊರ್ವ ನೆಟ್ಟಿಗ, ಇದೊಂದು ಮರ್ಯಾದೆ ಹತ್ಯೆ, ಸ್ಟೋರಿಯ ಎಳೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇನ್ನು ಸಿನಿಮಾ ವಿಮರ್ಶಕ ಸಂಕೀರ್ತನ ವರ್ಮಾ ಅವರು ಟ್ವೀಟ್​ ಮಾಡಿ, ಇದು ಖಂಡಿತ ಪ್ರೀತಿಯಲ್ಲ. ಇದೊಂದು ಜಾತಿಯ ವ್ಯಾಮೋಹದಿಂದ ಆದ ಮರ್ಯಾದೆ ಹತ್ಯೆ. ಇದೊಂದು ಪೂರ್ವ ನಿಯೋಜಿತ ರಕ್ತಸಿಕ್ತ ಕೊಲೆ. ಪ್ರಣಯ್ ವ್ಯಕ್ತಿತ್ವವನ್ನು ಕೊಲ್ಲಲು ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಮೃತಾ ತಂದೆಯೊಂದಿಗಿನ ಸಂಬಂಧವನ್ನು ಬಹಿರಂಗವಾಗಿ ಕಡಿದ ನಂತರವೂ. ನೀವು ತಂದೆ-ಮಗಳ ನಡುವಿನ ಪ್ರೀತಿಯ ಬಗ್ಗೆ ಹೇಳ ಹೊರಟಿರುವುದು ನಾಚಿಕೆಗೇಡು ಎಂದು ಜರಿದಿದ್ದಾರೆ. ಹೀಗೆ ಸಾಕಷ್ಟು ಕಾಮೆಂಟ್​ಗಳು ವರ್ಮಾ ವಿರುದ್ಧ ಕೇಳಿಬಂದಿವೆ. ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!

    ಪ್ರಣಯ್​ ಹತ್ಯೆ ಹಿನ್ನೆಲೆ
    ಪ್ರಣಯ್​ ದಲಿತ ಸಮುದಾಯದವನಾಗಿದ್ದ, ಅಮೃತಾ ಪ್ರಭಾವಿ ವೈಶ್ಯ ಸಮುದಾಯವಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ಮಾರುತಿ ರಾವ್​ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿದೆ. ಸೆಪ್ಟೆಂಬರ್​ 14, 2018ರಂದು ಗರ್ಭಿಣಿ ಪತ್ನಿಯ ಮುಂದೆ ಪ್ರಣಯ್​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. (ಏಜೆನ್ಸೀಸ್​)

    ತೆಲಂಗಾಣ ಮರ್ಯಾದೆ ಹತ್ಯೆಯ ಪ್ರಮುಖ ಆರೋಪಿ, ಅಮೃತಾ ರಾವ್​ ತಂದೆ ಮಾರುತಿ ರಾವ್​ ಶವವಾಗಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts