More

    ನಿರ್ದೇಶಕ ರಾಮ್​ ಗೋಪಾಲ್ ವರ್ಮಾರ ‘ವಿವಿಧ ಬಗೆಯ ಹೆಂಡತಿಯರು’: ಇಲ್ಲಿದೆ ವಿಡಿಯೋ..

    ಹೈದರಾಬಾದ್​: ಹೆಣ್ಣು ಹೆಂಡತಿಯಾದಾಗ ಮಾತ್ರ ಆಕೆಯ ನಿಜವಾದ ವರ್ತನೆ ತಿಳಿಯಲಿದೆ. ಮದುವೆಯ ಬಳಿಕ ತಮ್ಮ ವಿಶ್ವರೂಪವನ್ನು ತಾಳುತ್ತಾರೆ ಎಂದು ನಿರ್ದೇಶಕ ರಾಮ್ ಗೋಪಾಲ್​ ವರ್ಮಾ ಹೇಳಿದ್ದಾರೆ. ಈ ಕುರಿತ ವೆಬ್​​ ಸಿರೀಸ್​ ಮಾಡಲು ಟೀಮ್​ವೊಂದನ್ನು ಸಿದ್ಧಪಡಿಸಿಕೊಂಡಿರುವ ಅವರು, ಹೆಂಡತಿಯರು ಅವರಲ್ಲಿನ ವಿಧಗಳು ಎಂಬ ಕಾನ್ಸೆಪ್ಟ್​ನೊಂದಿಗೆ ​ ವೆಬ್​​ ಸಿರೀಸ್​ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್​ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದ ವೆಬ್​ ಸಿರೀಸ್​​ ”30 ವೆಡ್ಸ್ 21” ಫೇಮ್​ ಚೈತನ್ಯ, ತಮ್ಮ ಮುಂದಿನ ಪ್ರಾಜೆಕ್ಟ್​​ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪೋಸ್ಟ್​​ ಶೇರ್​ ಮಾಡಿದ್ದಾರೆ.

    ಇದನ್ನೂ ಓದಿ: ಬಿಎಸ್‌ವೈ ಚೆನ್ನಾಗಿ ಕೆಲಸ ಮಾಡ್ತಿದಾರೆ, ಬದಲಿಸುತ್ತೇವೆ ಅನ್ನೋದು ನಿಮ್ಮ ಊಹೆ: ನಡ್ಡಾ ಅಚ್ಚರಿಯ ಹೇಳಿಕೆ

    ಎಷ್ಟೋ ಮಂದಿ ಕವಿಗಳು ಸ್ತ್ರೀಯರ ಸ್ವರೂಪವನ್ನು ತಮ್ಮದೇ ಶೈಲಿಯಲ್ಲಿ ವರ್ಣಿಸಿದ್ದಾರೆ. ಆದರೆ ಕಾಲ ಮುಂದುವರಿದಂತೆಲ್ಲಾ ಎಷ್ಟೋ ಬಗೆಯ ಸ್ತ್ರೀಯರು ಉದ್ಭವಿಸುತ್ತಾರೆ ಎಂಬ ವಿಷಯವನ್ನು ಅವರು ಗ್ರಹಿಸಿಲ್ಲ. ಈಗಿನ ಕಾಲದ ಹೆಂಡತಿಯರ ಕುರಿತು ತಿಳಿಸುತ್ತಾ ” ವಿವಿಧ ಬಗೆಯ ಹೆಂಡತಿಯರು” ಎಂಬ ಶೀರ್ಷಿಕೆಯಡಿ ವೆಬ್​ ಸಿರೀಸ್​ ಮಾಡುತ್ತಿರುವುದಾಗಿ ಹೇಳಿದ್ದಾರೆ. ಒಂದೊಂದು ಎಪಿಸೋಡ್​ನಲ್ಲೂ ಒಂದೊಂದು ಬಗೆಯ ಹೆಂಡತಿಯನ್ನು ತೋರಿಸುವುದಾಗಿ ಹೇಳಿದ್ದಾರೆ.

    ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಜಿ. ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ರು: ಕಟೀಲ್

    ಸಂಜಯ್ ದತ್ ಹುಟ್ಟುಹಬ್ಬಕ್ಕೆ ಅಧೀರನ ಟೀಸರ್?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts