More

    ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆ ಮುಗಿದ 24 ಗಂಟೆಗಳಲ್ಲೇ ಫಲಿತಾಂಶ; ಪಾಸಾದವರಿಗಿಂತ ಫೇಲಾದವರೇ ಹೆಚ್ಚು

    ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್) ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆ ಮುಗಿದ 24 ಗಂಟೆಗಳಲ್ಲೇ ಲಿತಾಂಶ ಪ್ರಕಟಿಸಿದೆ.

    ಆದರೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಫಲಿತಾಂಶದ ಬೇಸರ ತಂದಿದೆ. ಏಕೆಂದರೆ, ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ರಾಜೀವ್ ಗಾಂಧಿ ವಿವಿಯ ಮೌಲ್ಯಮಾಪನದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಉತ್ತಮವಾಗಿ ಪರೀಕ್ಷೆ ಬರೆದಿದ್ದ ಸಾಕಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದಕ್ಕೆ ವಿವಿಯೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    1 ಮತ್ತು 3ನೇ ವರ್ಷದ ಬಿ.ಎಸ್ಸಿ.ನರ್ಸಿಂಗ್ ಥಿಯರಿ ಪರೀಕ್ಷೆಗಳನ್ನು ಫೆ.8ರಿಂದ 22ರವರೆಗೆ ನಡೆಸಲಾಗಿತ್ತು. ಪ್ರಾಯೋಗಿಕ ಪರೀಕ್ಷೆಗಳು ಫೆ.26ರಿಂದ ಮಾ.9ರವರೆಗೆ ನಡೆದಿವೆ.

    ಮೊದಲ ವರ್ಷದ ನರ್ಸಿಂಗ್‌ಗೆ 23,676 ವಿದ್ಯಾರ್ಥಿಗಳು ಮತ್ತು ತೃತೀಯ ವರ್ಷಕ್ಕೆ 10,526 ವಿದ್ಯಾರ್ಥಿಗಳು ಥಿಯರಿ ಪರೀಕ್ಷೆ ತೆಗೆದುಕೊಂಡಿದ್ದರು. ಒಟ್ಟಾರೆ 4,77,701 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದೆ. ಮಾ.10ರಂದು ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಒಟ್ಟಾರೆ ಪ್ರಾಯೋಗಿಕ ಪರೀಕ್ಷೆ ಮುಗಿದ 24 ಗಂಟಗಳಲ್ಲೇ ಫಲಿತಾಂಶ ನೀಡಲಾಗಿಗೆ ಎಂದು ರಾಜೀವ್ ಗಾಂಧಿ ವಿವಿಯ ಪ್ರಕಟಣೆ ತಿಳಿಸಿದೆ.

    ವಿವಿ ಹೇಳೋದೇನು?
    ಈ ಬಾರಿಯಿಂದ ಅರ್ಹತೆಯ ಮಾನದಂಡ ಬದಲಾಗಿದೆ. ಮೊದಲು ಪ್ರಾಯೋಗಿಕ ಮತ್ತು ಥಿಯರಿ ಎರಡು ಪರೀಕ್ಷೆಗಳಲ್ಲಿ ಕನಿಷ್ಠ ಶೇ.50 ಅಂಕ ಗಳಿಸಬೇಕಾಗಿತ್ತು. ಈ ಬಾರಿಯಿಂದ ಥಿಯರಿ ಶೇ.50 ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಶೇ.50 ಅಂಕಗಳಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪ್ರತಿ ಬಾರಿ ಶೇ.60ರಿಂದ 70 ಫಲಿತಾಂಶ ಬರುತ್ತಿತ್ತು, ಈ ಬಾರಿ ನಿಯಮ ಬದಲಾವಣೆ ಹಿನ್ನೆಲೆಯಲ್ಲಿ ಶೇ.30ಕ್ಕೆ ಇಳಿದಿದೆ. ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್‌ನಲ್ಲೇ ಪೂರಕ ಪರೀಕ್ಷೆ ನಡೆಸಲಿದ್ದು, ಪರೀಕ್ಷೆ ಬರೆದು ಉತೀರ್ಣರಾಗಬಹುದಾಗಿದೆ ಎಂದು ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಎಸ್.ಸಚ್ಚಿದಾನಂದ ಹೇಳಿದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮೀನು ಹುಟ್ಟಿದ್ದು ಹೇಗೆ ಗೊತ್ತಾ? ಅಬ್ಬಬ್ಬಾ.. ಮೀನಿನ ಇತಿಹಾಸ ಹೇಗಿದೆ ನೋಡಿ…

    ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts