More

    ಇಯರ್ ಸೈನ್ಸ್ ಸೆಂಟರ್​ನಲ್ಲಿ ಎಸಿಟಿ ಪರೀಕ್ಷೆ

    ಹುಬ್ಬಳ್ಳಿ: ನಗರದ ಇಯರ್ ಸೈನ್ಸ್ ಸೆಂಟರ್ ಕ್ರಾಂತಿಕಾರಿಯಾದ ಆಡಿಬಲ್ ಕಾಂಟ್ರಾಸ್ಟ್ ಥ್ರೆಶೋಲ್ಡ್ (ಎಸಿಟಿ) ಪರೀಕ್ಷೆಯನ್ನು ಅಳವಡಿಸಿಕೊಂಡಿದೆ.

    ಶ್ರವಣ ನಷ್ಟದ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ಈ ಪರೀಕ್ಷೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಆಡಿಯೊಲಾಜಿಕಲ್ ಮೌಲ್ಯಮಾಪನದಲ್ಲಿ ಇದು ಹೊಸ ಮಾನದಂಡವನ್ನು ಹೊಂದಿದೆ. ಈ ವಿಧಾನವು ರೋಗ ನಿರ್ಣಯ ನಿಖರತೆಯನ್ನು ಹೆಚ್ಚಿಸುವುದಲ್ಲದೆ ಸುಧಾರಿತ ಶ್ರವಣ ಸಾಮರ್ಥ್ಯಗಳನ್ನು ಬಯಸುವ ವ್ಯಕ್ತಿಗಳಿಗೆ ಹೆಚ್ಚು ಆಪ್ತವಾಗಲಿವೆ ಎಂದು ಸೆಂಟರ್ ಹೇಳಿದೆ.

    ಡೆನ್ಮಾರ್ಕ್​ನ ಈ ಉಪಕರಣವು ಶ್ರವಣ ನಷ್ಟವನ್ನು ನಿಖರವಾಗಿ ಪತ್ತೆ ಮಾಡುವಲ್ಲಿ ಗಮನಾರ್ಹ ಸಾಧನವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಉಪಕರಣವನ್ನು ನಿರ್ದಿಷ್ಟವಾಗಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಿತಿಯ ವ್ಯಕ್ತಿಗಳಲ್ಲಿ ಶ್ರವಣ ನಷ್ಟವನ್ನು ನಿರ್ಣಯಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts