More

    ಹೋಟೆಲ್ ಉದ್ಯಮ ಪುನಶ್ಚೇತನಗೊಳಿಸಿ: ಉಮೇಶ್

    ಸಾಗರ: ಸರ್ಕಾರ ಹೋಟೆಲ್ ಉದ್ಯಮಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಎಚ್.ಎನ್.ಉಮೇಶ್ ಒತ್ತಾಯಿಸಿದರು.

    ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಲೆನಾಡು ಸಿರಿ ಸಭಾಂಗಣದಲ್ಲಿ ಬುಧವಾರ ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸರ್ಕಾರ ಯಾವುದೇ ಹೊಸ ಯೋಜನೆ ಜಾರಿಗೆ ತಂದರೂ ಅದರ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣ ಸಂದರ್ಭದಲ್ಲಿ ಹೋಟೆಲ್ ಉದ್ಯಮದ ಮೇಲೆ ಹೊರೆ ಹೇರುತ್ತಿದೆ. ಬೇರೆ ಬೇರೆ ವಸ್ತುಗಳ ಬೆಲೆ ಏರಿಕೆಯ ಬಿಸಿ ಹೋಟೆಲ್ ಉದ್ಯಮಕ್ಕೂ ತಟ್ಟುತ್ತಿದೆ. ರಾಜ್ಯದ ಹೋಟೆಲ್ ಉದ್ಯಮದ ಹಿತಕಾಯುವ ನಿಟ್ಟಿನಲ್ಲಿ ರಾಜ್ಯ ಸಂಘ ಸರ್ಕಾರದ ಜತೆ ಚರ್ಚೆ ನಡೆಸಲಿದೆ ಎಂದರು.
    ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಪ್ರಸಾದ್ ಮಾತನಾಡಿ, ಬೇರೆ ಬೇರೆ ಕಾನೂನುಗಳಿಂದ ಹೋಟೆಲ್ ಉದ್ಯಮ ಬೆಳವಣಿಗೆಗೆ ತೊಡಕುಂಟಾಗಿದೆ. ಬಾಲ ಕಾರ್ಮಿಕರನ್ನು ನಾವು ನೇಮಕ ಮಾಡಿಕೊಳ್ಳದಿದ್ದರೂ ಕೆಲ ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಇದಕ್ಕೊಂದು ಸೂಕ್ತ ಕಾನೂನು ರಚಿಸಬೇಕು ಎಂದು ಆಗ್ರಹಿಸಿದರು.
    ಯು.ಜಿ.ಶ್ರೀಧರ್, ಭಾಸ್ಕರ ಶೆಟ್ಟಿ, ದೀಪಾ ನಾಯ್ಕ, ಶ್ರೀನಿವಾಸ್ ಶೆಟ್ಟಿ, ಮುರಳೀಧರ ಹತ್ವಾರ್, ಕಾಳಿಂಗ ಸೊರಬ, ಸುಧೀರ್ ನಾಯ್ಕ ಆನಂದಪುರ, ನಾಗೇಶ್ ಕುಲಾಲ್, ಗಣಪತಿ ಪಂಡಿತ್, ಎಂ.ನಾಗರಾಜ್, ದತ್ತಾತ್ರೇಯ ಪುರಾಣಿಕ್, ಪವನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts