More

    ಮತಪಟ್ಟಿ ಪರಿಷ್ಕರಣೆ ಕೆಲಸದಲ್ಲಿ ಇರಲಿ ಜಾಗೃತಿ,ಜಾಫರ್

    ಚಿತ್ರದುರ್ಗ:  ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ‌್ಯದೆಡೆ ತೀವ್ರ ಎಚ್ಚರಿಕೆ ವಹಿಸುವಂತೆ,ತಹಸೀಲ್ದಾರ್‌ಗಳು ಹಾಗೂ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಡಾ.ಪಿ.ಸಿ.ಜಾಫರ್ ಸೂಚಿಸಿದರು.

    ಜಿಪಂ ಕಚೇರಿಯಲ್ಲಿ ಶುಕ್ರವಾರ ಮತಪಟ್ಟಿ ಪ ರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ,ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಪರಿಷ್ಕರಣೆ ಕಡೆ ಎಲ್ಲರ ನಿಗಾ ಇರುತ್ತದೆ.

    ತಹಸೀಲ್ದಾರರು ತಮ್ಮ ಹೊಣೆಯನ್ನು ಗ್ರಾಮ ಲೆಕ್ಕಿಗರು,ಕಂದಾಯ ನಿರೀಕ್ಷಕರ ಮೇಲೆ ಹಾಕವಂತಿಲ್ಲ. ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಾಗ,ನಿಯಮಗಳ ಪಾಲನೆ ಸರಿಯಾಗಿರಬೇಕು. ಬೂತ್‌ಮಟ್ಟದ ಅಧಿಕಾರಿಗಳು ಡಿಲೀಟ್ ಪಟ್ಟಿ ಕೊಟ್ಟ ಕೂಡಲೇ ತೆಗೆದು ಹಾ ಕುವಂತಿಲ್ಲ,ಪ್ರತಿಯೊಂದಕ್ಕೂ ದಾಖಲೆಗಳಿರಬೇಕು. ಮತದಾರರು ಸ್ಥಳದಲ್ಲಿ ಇರುವ ಅಥವಾ ಇಲ್ಲದಿರುವುದರ ಬಗ್ಗೆ ಮತ್ತೊಮ್ಮೆ ಪರಿಶೀ ಲಿಸಿ,ನಿರ್ಧಾರ ಕೈಗೊಳ್ಳಬೇಕು.

    ಚುನಾವಣೆ ಘೋಷಣೆ ಬಳಿಕ ಅನ್ಯ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಸ್ಪರ್ಧಿಸುವ ಸಂಭವವಿದೆ. ಆದ್ದರಿಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಅಂದಾಜು 40 ಸಾವಿರ ಯುವ ಮತದಾರರನ್ನು ಪಟ್ಟಿಗೆ ಸೇರಿಸುವ ಗುರಿ ಇದೆ. ಪ್ರತಿ ಕಾಲೇ ಜು,ಪಾಲಿಟೆಕ್ನಿಕ್,ಐಟಿಐ,ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳು,ಸೇರಿದಂತೆ ಎಲ್ಲ ಬಗೆ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿ ಕೊಂ ಡು,ಅರ್ಹ ವಿದ್ಯಾರ್ಥಿಗಳ ಹಾಗೂ ಅಂಗವಿಕಲರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕೆಂದರು.

    ಡಿಸಿ ಜಿಆರ್‌ಜೆ ದಿವ್ಯಾಪ್ರಭು ಮಾತನಾಡಿ,ಪರಿಷ್ಕರಣೆ ಪ್ರಗತಿ ವಿವರಿಸಿದರು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 08194-222176 ಸ್ಥಾಪಿಸಲಾಗಿದೆ. 15 ಸಾವಿರ ವಿದ್ಯಾರ್ಥಿಗಳ ಹೆಸರು ಸೇರಿಸಲಾಗುತ್ತಿದೆ. ಮತಚೀಟಿ ಹಾಗೂ ಆಧಾರ್ ಸಂಖ್ಯೆ ಜೋಡಣೆ ಕಾರ‌್ಯ ಶೇ. 81 ಆಗಿದೆ ಎಂದ ಡಿಸಿ,ಪಟ್ಟಿಗೆ ಸೇರಿಸಲು ಸ್ವೀಕೃತಗೊಳ್ಳುವ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸುವಂತಿಲ್ಲವೆಂದು ಅಧಿಕಾರಿಗಳಿಗೆ ತಿಳಿಸಿ ದರು. ಜಿ.ಪಂ.ಸಿಇಒ ಎಂ.ಎಸ್.ದಿವಾಕರ್,ಎಡಿಸಿ ಇ.ಬಾಲಕೃಷ್ಣ,ಎಸಿ ಆರ್.ಚಂದ್ರಯ್ಯ,ಉಪಕಾರ‌್ಯದರ್ಶಿ ಡಾ. ರಂಗಸ್ವಾಮಿ,ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts