More

    ವಿ. ಅನ್ಬುಕುಮಾರ ಸೂಚನೆ; ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ದೋಷ ಸಲ್ಲದು

    ಧಾರವಾಡ: ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕಾರ್ಯ ಶಿಸ್ತುಬದ್ದವಾಗಿ ಮತ್ತು ನಿಯಮಾನುಸಾರ ನಡೆಯುತ್ತಿದೆ. ಅಽಕಾರಿ ಮತ್ತು ಸಿಬ್ಬಂದಿ ಮತದಾರ ಪಟ್ಟಿಯಲ್ಲಿ ತಿದ್ದುಪಡಿ, ಹೆಸರು ತೆಗೆದು ಹಾಕುವುದು, ವರ್ಗಾವಣೆ ಮತ್ತು ಸೇರ್ಪಡೆ ಕಾರ್ಯದಲ್ಲಿ ದೋಷಗಳಾಗದಂತೆ ಜಾಗ್ರತೆ ವಹಿಸಬೇಕು ಎಂದು ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರ ಪಟ್ಟಿ ವೀಕ್ಷಕ ವಿ. ಅನ್ಬುಕುಮಾರ ಹೇಳಿದರು.
    ನಗರದ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣೆ ಶಾಖೆಗಳ ನಿರ್ವಾಹಕ ಸಭೆಯಲ್ಲಿ ಅವರು ಮಾತನಾಡಿದರು.
    ಜಿಲ್ಲೆಯಲ್ಲಿ ೨೦೧೧ರ ಜನಗಣತಿಯಂತೆ ೧೮,೪೭,೦೨೩ ಜನಸಂಖ್ಯೆ ಇದೆ.೨೦೨೩ರ ಅ. ೨೭ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ೭ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ೭,೭೧,೭೧೯ ಪುರುಷ ಹಾಗೂ ೭,೬೬,೭೯೮ ಮಹಿಳಾ ಹಾಗೂ ೮೬ ಇತರರು ಸೇರಿ ೧೫,೩೮,೬೦೩ ಮತದಾರರಿದ್ದರು. ಜ. ೧೨ರವರೆಗಿನ ಪರಿಷ್ಕರಣೆಯ ನಂತರ ೭,೮೦,೭೦೯ ಪುರುಷ ಹಾಗೂ ೭,೭೯,೩೪೨ ಮಹಿಳಾ ಹಾಗೂ ೯೦ ಇತರೆ ಸೇರಿ ೧೫,೬೦,೧೪೧ ಮತದಾರರಾಗಿದ್ದಾರೆ ಎಂದರು.
    ಮತದಾರ ಪಟ್ಟಿಯ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಮತದಾರ ಪಟ್ಟಿ ಸಿದ್ಧಗೊಳಿಸಲಾಗುವುದು. ಅರ್ಹ ನಾಗರಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
    ಜಿಲ್ಲಾ ಅಪರ ಚುನಾವಣಾಽಕಾರಿ ಹಾಗೂ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ, ಉಪ ವಿಭಾಗಾಽಕಾರಿ ಶಾಲಂ ಹುಸೇನ್, ತಹಸೀಲ್ದಾರರು, ಮತದಾರ ನೋಂದಣಿ ಅಽಕಾರಿಗಳು, ಸಹಾಯಕ ಮತದಾರ ನೋಂದಣಿ ಅಽಕಾರಿಗಳು, ಚುನಾವಣಾ ಶಾಖೆ ಅಽಕಾರಿ, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts