More

    ಪತ್ನಿ ಮೇಲಿನ ಕೋಪಕ್ಕೆ ಅತ್ತೆ, ಬಾಮೈದನ ಮೇಲೆ ಹಲ್ಲೆ: ಕೊಲೆಗೆ ಯತ್ನಿಸಿದ್ದವನಿಗೆ 7 ವರ್ಷ ಜೈಲು

    ಮೈಸೂರು: ಸಂಬಳ ಹಣ ಕೊಡದ ಪತ್ನಿಯ ಮೇಲಿನ ಸಿಟ್ಟಿಗೆ ಅತ್ತೆ ಮತ್ತು ಬಾಮೈದನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ವ್ಯಕ್ತಿಗೆ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.


    ಎಚ್.ಡಿ.ಕೋಟೆಯ ಯರಹಳ್ಳಿಯ ಎಂ.ಕೆಂಡಗಣ್ಣ ಶಿಕ್ಷೆಗೆ ಗುರಿಯಾದ ಅಪರಾಧಿ. ಗ್ರಾಮ ಲೆಕ್ಕಾಧಿಕಾರಿ ತನುಜಾ ಅವರೊಂದಿಗೆ ಈತನ ಮದುವೆಯಾಗಿತ್ತು. ಆರಂಭದ 2-3 ವರ್ಷ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆಗ ಪ್ರತಿ ತಿಂಗಳು ಸಂಬಳವನ್ನು ತನುಜಾ ತಮ್ಮ ತವರು ಮನೆಗೆ ಕೊಡುತ್ತಿದ್ದರು. ಇದರಿಂದ ಕೆರಳಿದ ಕೆಂಡಗಣ್ಣ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದ.


    ಇದೇ ವಿಷಯವಾಗಿ 2020ರ ಜ.29ರಂದು ಮನೆಯಲ್ಲಿ ಗಲಾಟೆ ನಡೆದಿದ್ದು, ಮಚ್ಚಿನಿಂದ ಬಾಮೈದ ಪ್ರಮೋದ ಮತ್ತು ಅತ್ತೆ ಹೇಮಾವತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ.


    ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಕೆಂಡಗಣ್ಣನಿಗೆ 7 ವರ್ಷ ಶಿಕ್ಷೆಯೊಂದಿಗೆ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಬಿ.ಈ.ಯೋಗೇಶ್ವರ ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts