More

    ಚೆಪಾಕ್​ನಲ್ಲಿ ಇಂದು ಸೂಪರ್​ಕಿಂಗ್ಸ್​-ಸೂಪರ್​ಜೈಂಟ್ಸ್​ ಕಾದಾಟ; ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿ ಋತುರಾಜ್​ ಬಳಗ

    ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಲಖನೌ ಸೂಪರ್​ಜೈಂಟ್ಸ್​ ತಂಡಗಳು ಐಪಿಎಲ್​-17ರಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ಚೆಪಾಕ್​ನಲ್ಲಿ ಇದುವರೆಗೆ ಆಡಿರುವ 3 ಪಂದ್ಯಗಳಲ್ಲೂ ಗೆದ್ದಿರುವ ಋತುರಾಜ್​ ಗಾಯಕ್ವಾಡ್​ ಪಡೆ ತವರಿನ ಪ್ರಾಬಲ್ಯ ಮುಂದುವರಿಸುವ ಹಂಬಲದಲ್ಲಿದ್ದರೆ, ಕೆಎಲ್​ ರಾಹುಲ್​ ಪಡೆ ಲಖನೌ ನಂತರದಲ್ಲಿ ಚೆನ್ನೆ$ನಲ್ಲೂ ಹಾಲಿ ಚಾಂಪಿಯನ್ಸ್​ ಎದುರು ಗೆದ್ದು ಬೀಗುವ ತವಕದಲ್ಲಿದೆ.
    ಮೂರು ದಿನಗಳ ಹಿಂದೆಯಷ್ಟೇ ಉಭಯ ತಂಡಗಳು ಲಖನೌದಲ್ಲಿ ಮುಖಾಮುಖಿ ಆಗಿದ್ದವು. ಆ ಪಂದ್ಯದಲ್ಲಿ ಸೂಪರ್​ಜೈಂಟ್ಸ್​ ಸುಲಭ ಜಯ ಸಾಧಿಸಿತ್ತು. ಅದಕ್ಕೀಗ ತನ್ನ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಸಿಎಸ್​ಕೆ ಪ್ರಯತ್ನಿಸಲಿದೆ.

    ಇದುವರೆಗೆ ಆಡಿರುವ 7 ಲೀಗ್​ ಪಂದ್ಯಗಳಲ್ಲಿ ಉಭಯ ತಂಡಗಳು ಒಂದೇ ರೀತಿಯ ಲಿತಾಂಶ ಕಂಡಿವೆ. ಅಂದರೆ ತಲಾ 4ರಲ್ಲಿ ಗೆದ್ದು, 3ರಲ್ಲಿ ಸೋತಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಬಡ್ತಿ ಸಂಪಾದಿಸಲು ಮತ್ತು ಪ್ಲೇಆ್​ ಆಸೆ ವೃದ್ಧಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯ ಪ್ರಮುಖವೆನಿಸಿದೆ.

    ಸಿಎಸ್​ಕೆಗೆ ಬ್ಯಾಟಿಂಗ್​ ಚಿಂತೆ
    ಸಿಎಸ್​ಕೆ ಬೌಲರ್​ಗಳು ಸಂಟಿತ ನಿರ್ವಹಣೆ ತೋರುತ್ತಿದ್ದರೂ, ಬ್ಯಾಟರ್​ಗಳ ವೈಫಲ್ಯ ಹಿನ್ನಡೆ ತಂದಿದೆ. ನಾಯಕ ಋತುರಾಜ್​ ಮತ್ತು ಶಿವಂ ದುಬೆ ಹೊರತುಪಡಿಸಿ ಇತರ ಬ್ಯಾಟರ್​ಗಳು ಸ್ಥಿರ ನಿರ್ವಹಣೆ ತೋರಿಲ್ಲ. ಪ್ರಮುಖವಾಗಿ ಎಡಗೈ ಆರಂಭಿಕ ರಚಿನ್​ ರವೀಂದ್ರ ರನ್​ಬರ ಎದುರಿಸಿದ್ದು, ಅಜಿಂಕ್ಯ ರಹಾನೆಗೆ ಆರಂಭಿಕರಾಗಿ ಬಡ್ತಿ ನೀಡಿರುವ ಕ್ರಮವೂ ಫಲಿಸಿಲ್ಲ. 3ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದುಕೊಂಡಿರುವ ಋತುರಾಜ್​ ಮತ್ತೆ ಆರಂಭಿಕರಾಗುವ ಸಾಧ್ಯತೆಗಳಿವೆ. ರವೀಂದ್ರ ಜಡೇಜಾ, ಮೊಯಿನ್​ ಅಲಿ ಮತ್ತು ಎಂಎಸ್​ ಧೋನಿ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದರೂ, ಅದು ಗೆಲುವಿಗೆ ಸಾಕಾಗಿರಲಿಲ್ಲ. ಇನ್ನು ವೇಗದ ಬೌಲರ್​ಗಳ ಬಿಗಿ ದಾಳಿಯ ನಡುವೆ ರವೀಂದ್ರ ಜಡೇಜಾ ಸ್ಪಿನ್​ ಬೌಲಿಂಗ್​ ಪರಿಣಾಮಕಾರಿ ಎನಿಸಿಲ್ಲ. 7 ಪಂದ್ಯಗಳಲ್ಲಿ ಇದುವರೆಗೆ 4 ವಿಕೆಟ್​ ಮಾತ್ರ ಕಬಳಿಸಿದ್ದಾರೆ.

    ಲಖನೌಗೆ ಆಲ್ರೌಂಡ್​ ಬಲ
    ಲಖನೌ ತಂಡದ ಬೌಲಿಂಗ್​ ವಿಭಾಗ ಟೂರ್ನಿಯಲ್ಲಿ ಇದುವರೆಗೆ ಭಾರಿ ಸದ್ದು ಮಾಡುತ್ತಿತ್ತು. ಕಳೆದ ಪಂದ್ಯದಲ್ಲಿ ಕೆಎಲ್​ ರಾಹುಲ್​&ಕ್ವಿಂಟನ್​ ಡಿಕಾಕ್​ ಒದಗಿಸಿರುವ ಭರ್ಜರಿ ಆರಂಭ ಬ್ಯಾಟಿಂಗ್​ ವಿಭಾಗಕ್ಕೂ ಹುರುಪು ತುಂಬಿದೆ. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್​ ಪೂರನ್​ ಪ್ರಮುಖ ಬಲ ಎನಿಸಿದ್ದಾರೆ. ಉರಿ ವೇಗದ ದಾಳಿಯಿಂದ ಎಲ್ಲರ ಗಮನಸೆಳೆದಿರುವ ಯುವ ವೇಗಿ ಮಯಾಂಕ್​ ಯಾದವ್​ ಗಾಯದಿಂದಾಗಿ ಕಳೆದೆರಡು ಪಂದ್ಯ ತಪ್ಪಿಸಿಕೊಂಡಿದ್ದು, ಈ ಬಾರಿ ಚೆನ್ನೈನಲ್ಲಿ ಮರಳಿ ಕಣಕ್ಕಿಳಿಯುವ ನಿರೀೆ ಇದೆ. ಯಶ್​ ಠಾಕೂರ್​ ಮತ್ತು ಮೊಹ್ಸಿನ್​ ಖಾನ್​ ಜತೆಗೆ ಮಯಾಂಕ್​ ಸಿಎಸ್​ಕೆಗೆ ಇನ್ನಷ್ಟು ಅಪಾಯಕಾರಿ ಎನಿಸಬಲ್ಲರು. ರವಿ ಬಿಷ್ಣೋಯಿ ಮತ್ತು ಕೃನಾಲ್​ ಪಾಂಡ್ಯ ಒಳಗೊಂಡ ಎಲ್​ಎಸ್​ಜಿಯ ಸ್ಪಿನ್​ ವಿಭಾಗವೂ ಬಲಿಷ್ಠವಾಗಿದೆ.

    ಮುಖಾಮುಖಿ: 4
    ಲಖನೌ: 2
    ಸಿಎಸ್​ಕೆ: 1
    ರದ್ದು: 1
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

    IPL 2024: ಆರ್​ಸಿಬಿ ಸೋಲಿನ ನಡುವೆ ವಿಶಿಷ್ಟ ದಾಖಲೆ ಬರೆದ ವಿರಾಟ್​ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts