More

    ಮತಕಟ್ಟೆ ಕೇಂದ್ರಗಳಿಗೆ ಚುನಾವಣೆ ಅಧಿಕಾರಿಗಳ ಭೇಟಿ

    ರೇವತಗಾಂವ: ರೇವತಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಬರುವ 10 ಮತಕಟ್ಟೆ ಕೇಂದ್ರಗಳಿಗೆ ಚುನಾವಣೆ ಅಧಿಕಾರಿ ಡಾ. ಎಂ.ಎಸ್. ಮಾಗಣಗೇರಿ, ಸಹಾಯಕ ಚುನಾವಣೆ ಅಧಿಕಾರಿ ಎಸ್.ಐ. ಗಚ್ಚಿನಕಟ್ಟಿ, ಪಿಡಿಒ ಎಚ್. ವಿ. ರಜಪೂತ್, ಕಾರ್ಯದರ್ಶಿ ಬಿ.ಕೆ. ಕುಂಬಾರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

    ಚುನಾವಣೆ ಆದೇಶದಂತೆ ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.

    ನಂತರ ರೇವತಗಾಂವದ 4 ಮತಕಟ್ಟೆ, ಶಿರಾಡೋಣದ 4 ಹಾಗೂ ಹಾಲಳ್ಳಿಯ 2 ಮತಕಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು.

    ನಂತರ ಮಾತನಾಡಿದ ತಹಸೀಲ್ದಾರ್ ಸುರೇಶ ಚವಲರ, ಹೊಸ ತಾಲೂಕು ರಚನೆ ನಂತರ ಮೊದಲ ಗ್ರಾಪಂ ಚುನಾವಣೆಯನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಡಚಣ ವ್ಯಾಪ್ತಿಯಲ್ಲಿ 13 ಗ್ರಾಪಂಗಳಿದ್ದು, 130 ಮತಗಟ್ಟೆಗಳಲ್ಲಿ 46710 ಪುರುಷ, 42629 ಮಹಿಳಾ ಹಾಗೂ 3 ತೃತೀಯ ಲಿಂಗ ಸೇರಿ ಒಟ್ಟು 89342 ಮತದಾರಿದ್ದಾರೆ. 31 ಸೂಕ್ಷ್ಮ, 19 ಅತೀ ಸೂಕ್ಷ್ಮ, 80 ಸಾಧಾರಣ ಮತಕಟ್ಟೆಗಳಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಎಸ್‌ಓಪಿ ಮಾರ್ಗಸೂಚಿ ಪ್ರಕಾರ ಮುಂಜಾಗ್ರತ ಕ್ರಮ ಕೈಗೊಳ್ಳಾಗಿದೆ. ಮತಕಟ್ಟೆಯಲ್ಲಿ ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ ಎಂದು ತಿಳಿಸಿದರು.

    ಚುನಾವಣೆ ಅಧಿಸೂಚನೆಯಂತೆ 2ನೇ ಹಂತದ ಗ್ರಾಪಂ ಚುನಾವಣೆಗೆ ಡಿ.11ರಿಂದ ಡಿ.16ರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.17ರ ನಾಮಪತ್ರ ಪರಿಶೀಲನೆ, ಡಿ.19ರ ನಾಮಪತ್ರ ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ. ಡಿ.27ರಂದು ಚುನಾವಣೆ ನಡೆಯಲಿದೆ. ಅಗತ್ಯವಿದ್ದರೆ ಡಿ.29 ರಂದು ಚನಾವಣೆ ನಡೆಯಲಿದೆ. ಡಿ.30ರಂದು ಚಡಚಣದ ಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts