More

    ದೇವಾಲಯ ಜೀರ್ಣೋದ್ಧಾರಕ್ಕೆ ದೇಣಿಗೆ

    ರೇವತಗಾಂವ: ಮನುಷ್ಯನ ಜೀವನದಲ್ಲಿ ಯಾವುದು ಶಾಶ್ವತವಲ್ಲ. ನಾವು ಮಾಡುವ ದಾನ-ಧರ್ಮ ಮಾತ್ರ ಶಾಶ್ವತ ಎಂದು ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು ಹೇಳಿದರು.
    ಗ್ರಾಮದ ಮಲಕಾರಸಿದ್ಧ ದೇವಾಲಯದ ಜೀರ್ಣೋದ್ಧಾರಕ್ಕೆ ತುಮಕೂರು ಜಿಲ್ಲೆಯ ಪಾವಗಢ ತಾಲೂಕಿನ ಮಂಗಳವೇಡ ಗ್ರಾಮದ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಕುಮಾರ ಜಾಬಗೊಂಡೆ ಅವರು ವೈಯಕ್ತಿಕವಾಗಿ 1ಲಕ್ಷ ರೂ. ದೇಣಿಗೆ ಹಸ್ತಾಂತರಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಮೂಲತಃ ರೇವತಗಾಂವ ಗ್ರಾಮದವರಾದ ರವಿಕುಮಾರ ಜಾಬಗೊಂಡೆ ವಿವಿಧ ಗ್ರಾಮಗಳ ದೇವಾಲಯದ ಅಭಿವೃದ್ಧಿಗೆ ಹಾಗೂ ಬಡಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ಅಮಸಿದ್ದ ಪೂಜಾರಿ ಮಾತನಾಡಿ, ಹತ್ತಳ್ಳಿಯ ಹಿರೇಮಠಕ್ಕೆ 51 ಸಾವಿರ ರೂ., ಬೀರಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ 51 ಸಾವಿರ ರೂ.ಹಾಗೂ ಜಕರಾಯ ದೇವಾಸ್ಥಾನಕ್ಕೆ 25 ಸಾವಿರ ರೂ. ದೇಣಿಗೆ ನೀಡಿದ ರವಿಕುಮಾರ ಅವರು, ಬಡಮಕ್ಕಳ ಶಿಕ್ಷಣಕ್ಕಾಗಿ ತಮ್ಮ ವೇತನದ ಶೇ.10 ಭಾಗವನ್ನು ಮೀಸಲಿರಿಸಿದ್ದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರುತ್ತದೆ ಎಂದು ಹೇಳಿದರು.
    ಕಾಮೇಶ ಪಾಟೀಲ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ವಿವಿಧ ಗ್ರಾಮಗಳ 350 ಕುಟುಂಬಗಳಿಗೆ 10 ಕೆಜಿ ಗೋಧಿ, 10 ಕೆಜಿ ಜೋಳದ ಕಿಟ್ ವಿತರಿಸಿರುವುದು ಅವರ ಮಾನವೀಯ ಮೌಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
    ಶಿವಾನಂದ ಜಾಬಗೊಂಡೆ, ರಮೇಶ ಮೇತ್ರೆ, ಸುರೇಶ ಬಗಲಿ, ಮದಗೊಂಡ ನಡಗೇರಿ, ಹಣಮಂತ ಪೂಜಾರಿ, ಶಿವಪ್ಪ ಪೂಜಾರಿ, ರೇವಪ್ಪ ತೇಲಿ, ಪ್ರಕಾಶ ಬಿರಾದಾರ, ಪಿಂಟು ಜಾಬಗೊಂಡೆ, ಮಲ್ಲಿಕಾರ್ಜುನ ಜಾಬಗೊಂಡೆ, ಮಲ್ಲು ಮಾನೆ, ಮನೋಜ ಕೋಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts