More

    ರೇವತಗಾಂವದಲ್ಲಿ ಸಂತೆ ನೆಡೆಸಲು ಸೂಕ್ತ ಜಾಗ ಕಲ್ಪಿಸಿ

    ರೇವತಗಾಂವ: ಗ್ರಾಮದಲ್ಲಿ ತರಕಾರಿ ವ್ಯಾಪಾರಸ್ಥರು ಸೋಮವಾರ ಜಿಟಿ ಜಿಟಿ ಮಳೆಯಿಂದಾಗಿ ಕೆಸರಿನಲ್ಲಿಯೇ ಕುಳಿತು ವ್ಯಾಪಾರ ಮಾಡಿದರು.
    ಪ್ರತಿಸಲ ಮಳೆ ಬಂದಾಗ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ದೇವಾಸ್ಥಾನ ಮುಂಭಾಗ ನೀರು ನಿಂತು ಕೆಸರು ಗದ್ದೆಯಂತಾಗುತ್ತದೆ. ಇದರಿಂದ ತರಕಾರಿ ವ್ಯಾಪಾರ ಮಾಡಲು ಬರುವ ವ್ಯಾಪಾರಸ್ಥರಿಗೂ ಹಾಗೂ ಖರೀದಿಸುವವರು ತೀವ್ರ ತೊಂದರೆ ಅನುಭವಿಸುವಂತಾಗುತ್ತಿದೆ. ಈ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದಾಗ ಕೆಲವು ಬಾರಿ ಸ್ವಲ್ಪಮಟ್ಟಿನ ಗರಸನ್ನು ಹಾಕಿ ಸಂತೆ ನಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ರೀತಿ ಮೇಲಿಂದ ಮೇಲೆ ತೊಂದರೆ ಆಗುತ್ತಿರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಇದರಿಂದ ಬೇರೆಡೆ ಸಂತೆ ನಡೆಸಲು ಅವಕಾಶ ಕಲ್ಪಿಸುವುದು ಸೂಕ್ತ ಎಂದು ಕೆಲ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

    ಬಸ್ ಸಂಚಾರಕ್ಕೂ ತೊಂದರೆ

    ಸಂತೆಯಿಂದಾಗಿ ಚಡಚಣದಿಂದ ರೇವತಗಾಂವ ಮಾರ್ಗವಾಗಿ ಉಮರಜ ಹಾಗೂ ದಸೂರ ಗ್ರಾಮಗಳಿಗೆ ತೆರಳುವ ಬಸ್ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ, ಬೈಕ್ ಸವಾರರೂ ಬೇಕಾಬಿಟ್ಟಿಯಾಗಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

    ತರಕಾರಿ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಪ್ರತ್ಯೇಕ ಪಂಚಾಯಿತಿ ಜಾಗ ಇಲ್ಲದಿರುವುದರಿಂದ ಈ ರೀತಿ ತೊಂದರೆಯಾಗಿದೆ. ತಹಸೀಲ್ದಾರ್ ಜತೆ ಚರ್ಚಿಸಿ ಬೇರೆ ಕಂದಾಯದ ಜಮೀನು ಇದ್ದರೆ ಅಥವಾ ಯಾರಾದರೂ ದಾನವಾಗಿ ಜಮೀನು ನೀಡಿದರೆ ಸಂತೆಕಟ್ಟೆ ನಿರ್ಮಿಸಲಾಗುವುದು.
    ಎಚ್.ವಿ. ರಜಪೂತ್ ಗ್ರಾಪಂ ಪಿಡಿಒ ರೇವತಗಾಂವ

    ಮಳೆಯಾದಾಗ ಪ್ರತಿ ಬಾರಿ ಕೆಸರಲ್ಲಿ ಕುಳಿತು ತರಕಾರಿ ವ್ಯಾಪಾರ ಮಾಡುವುದು ಕಷ್ಟವಾಗುತ್ತಿದೆ. ಗ್ರಾಹಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಬೇರೆಡೆ ಸಂತೆ ಸ್ಥಳಾಂತರಿಸಬೇಕು. ಇಲ್ಲವಾದರೆ ಸಂತೆ ಕಟ್ಟೆ ನಿರ್ಮಿಸಬೇಕು
    ಸುನೀಲ ಮಾಳಿ ತರಕಾರಿ ವ್ಯಾಪಾರಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts