More

    ಹೆರಿಗೆಯಾದ ನಂತರ ಕಳೆದುಕೊಂಡಿದ್ದ ಸ್ವಂತ ಮಗನನ್ನು 28 ವರ್ಷಗಳ ಬಳಿಕ ಮರಳಿ ಪಡೆದ ತಾಯಿ!

    ಬೀಜಿಂಗ್​: ಹೆರಿಗೆ ಸಮಯದಲ್ಲಿ ಆದ ಆಕಸ್ಮಿಕ ಘಟನೆಯಿಂದ ತನ್ನ ಸ್ವಂತ ಮಗುವನ್ನು ಕೆಳದುಕೊಂಡಿದ್ದ ತಾಯಿ 28 ವರ್ಷಗಳ ಬಳಿಕ ಮತ್ತೆ ಮಗನನ್ನು ನೋಡಿದ ವೇಳೆ ತುಂಬಾ ಭಾವುಕರಾದ ಘಟನೆ ಚೀನಾದಲ್ಲಿ ನಡೆದಿದೆ.

    ತಾನು 28 ವರ್ಷಗಳವರೆಗೆ ಬೆಳೆಸಿದ ಮಗ ತನ್ನ ಸ್ವಂತ ಮಗನಲ್ಲ ಎಂಬುದು ಡಿಎನ್​ಎ ಟೆಸ್ಟ್​ ಮೂಲಕ ತಿಳಿದುಬಂದ ಎರಡು ತಿಂಗಳ ನಂತರ ತನ್ನ ಸ್ವಂತ ಮಗನನ್ನು ಮಹಿಳೆ ಮತ್ತೆ ಸೇರಿದ್ದಾಳೆ. ಈ ವೇಳೆ ಅವರಿಬ್ಬರ ಭಾವು ಕ್ಷಣದ ವಿಡಿಯೋ ಕೂಡ ವೈರಲ್​ ಆಗಿದೆ.

    ಜಿಯಾಂಗ್​ ಯಾನ್ಲಿ ಎಂಬ ಮಹಿಳೆ ಕ್ಯಾನ್ಸರ್​ ಪೀಡಿತ ತನ್ನ ಮಗನಿಗೆ ಲಿವರ್​ನ ಒಂದು ಭಾಗವನ್ನು ಕಾಣಿಕೆಯಾಗಿ ನೀಡುವ ಸಮಯದಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಡಿಎನ್​ಎ ಬೇರೆ ಬೇರೆಯಾಗಿರುವುದನ್ನು ಗಮನಿಸಿದ ಮಹಿಳೆ ಮಗುವಿಗೆ ಜನ್ಮ ನೀಡಿದ ಆಸ್ಪತ್ರೆಗೆ ಈ ಬಗ್ಗೆ ತಿಳಿಸಿದಾಗ ಮಗುಗಳು ಅದಲು-ಬದಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

    ಅಂದಹಾಗೆ ಜಿಯಾಂಗ್​ ಮಗ ಝಾಂಗ್​ ಖೀ ಕಳೆದ ಫೆಬ್ರವರಿಯಲ್ಲಿ ಲಿವರ್​ ಕ್ಯಾನ್ಸರ್​ ಪತ್ತೆಯಾಗಿ ಚೀನಾದ ಆಗ್ನೇಯ ರಾಷ್ಟ್ರ ನಾಂಛಾಂಗ್​ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣ ಹೋಗೋ ಸ್ಥಿತಿಯಲ್ಲಿರುವ ಮಗನನ್ನು ಬದುಕಿಸಿಕೊಳ್ಳಲು ಲಿವರ್​ನ ಒಂದು ಭಾಗವನ್ನು ನೀಡಲು ತಾಯಿ ನಿರ್ಧರಿಸಿದ್ದಳು. ಆದರೆ, ಇಬ್ಬರ ರಕ್ತದ ಮಾದರಿ ಹೋಲಿಕೆ ಆಗಲಿಲ್ಲ. ಬಳಿಕ ಡಿಎನ್​ಎ ಟೆಸ್ಟ್​ ಮಾಡಿಸಿದಾಗ 28 ವರ್ಷದ ಮಗ ತನ್ನ ಸ್ವಂತ ಮಗನಲ್ಲ ಎಂಬುದು ತಾಯಿಯ ಗಮನಕ್ಕೆ ಬಂದಿದೆ.

    ಇದನ್ನು ತಿಳಿದು ಸಾಕು ಮಗ ಝಾಂಗ್​ ಖೀ ಲಿವರ್​ ಕಸಿ ಚಿಕಿತ್ಸೆಗಾಗಿ ಆತನ ಮೂಲ ಕುಟುಂಬವನ್ನು ಹೆನಾನ್​ ಯೂನಿವರ್ಸಿಟಿಯ ಹುವಾಯಿ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಮೂಲಕ ಪತ್ತೆಹಚ್ಚಿದ್ದಾರೆ. ಈ ವೇಳೆ ಸತ್ಯಾಂಶ ಗೊತ್ತಾಗಿದ್ದು, 1992 ಜೂನ್​ 15ರಂದು ಜನಸಿದ ಮಗುಗಳನ್ನು ಆಕಸ್ಮಿಕವಾಗಿ ಅದಲು-ಬದಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರ ಸಹಾಯದಿಂದ ಮಹಿಳೆ ಜಿಯಾಂಗ್​ ಕೊನೆಗೂ ತನ್ನ ಸ್ವಂತ ಮಗನನ್ನು ಏಪ್ರಿಲ್​ 17ರಂದು ಸೇರಿದ್ದು, ಆತನ ಹೆಸರು ಗುವೊ ಮಿಂಗ್ ಎಂದು ತಿಳಿದುಬಂದಿದೆ. 28 ವರ್ಷದ ಬಳಿಕ ಮಗನನ್ನು ಸೇರಿದ ಖುಷಿಯಲ್ಲಿ ಜಿಯಾಂಗ್​ ಭಾವುಕರಾದರು.

    ಗುವೊ ಪೊಲೀಸ್​ ಅಧಿಕಾರಿಯಾಗಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಚಿಕ್ಕ ಕುಟುಂಬವನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಗುವೊ ನಾನು ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದೆ. ಈ ರೀತಿ ಆಗುವುದು ಅಸಾಧ್ಯವೆಂದು ನಾನು ಭಾವಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇತ್ತ ಝಾಂಗ್​ ಖೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

    ಕರೊನಾ ರೋಗಿಗಳನ್ನು ಗುಣಪಡಿಸಿದ ವೈದ್ಯೆಗೆ ತಮ್ಮ ರಕ್ಷಣೆ ಸಾಧ್ಯವಾಗಲಿಲ್ವಾ?: ವೈರಲ್​ ಸುದ್ದಿಯ ಸತ್ಯಾಂಶ ನಿಜಕ್ಕೂ ಅಚ್ಚರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts