More

    ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿಕೊಡದ್ದರಿಂದ ಬೇಸತ್ತ ಈ ವ್ಯಕ್ತಿ ಏನು ಮಾಡಿದರು ನೋಡಿ!; ನಿವೃತ್ತ ನೌಕರರಿಗೇ ಹೀಗಾದರೆ ಉಳಿದವರ ಪಾಡೇನು?

    ಹಾವೇರಿ: ಸರ್ಕಾರಿ ಕಚೇರಿಗಳಲ್ಲಿ ಆಗಬೇಕಿರುವ ಕೆಲಸ ಸುಲಭದಲ್ಲಿ ಆಗದ್ದರಿಂದ ಸಾರ್ವಜನಿಕರು ತೀವ್ರ ಸಮಸ್ಯೆಗೆ ಒಳಗಾಗುತ್ತಿರುವುದು ಸರ್ವೇಸಾಮಾನ್ಯ. ಅಂಥ ಪ್ರಕರಣಗಳ ಬಗ್ಗೆ ಆಗಾಗ ಅಸಮಾಧಾನ-ಆಕ್ರೋಶಗಳು ಕೇಳಿಬಂದು, ಒಂದೆರಡು ದಿನ ಕೆಲಸ ಸುಗಮವಾಗಿ ನಡೆದರೂ ಬಳಿಕ ಅಂಥವೇ ಪ್ರಕರಣಗಳು ಪುನರಾವರ್ತನೆ ಆಗುತ್ತಲೇ ಇರುತ್ತವೆ.

    ಆದರೆ ಇಲ್ಲೊಬ್ಬರು ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೇ ಅಂಥ ಸಮಸ್ಯೆ ಆಗಿದ್ದು, ಅಧಿಕಾರಿಗಳ ವಿಳಂಬಧೋರಣೆ-ನಿರ್ಲಕ್ಷ್ಯದಿಂದ ರೋಸಿಹೋಗಿರುವ ಈ ಹಿರಿಯ ವ್ಯಕ್ತಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾವೇರಿ ಜಿಲ್ಲೆ ಸವಣೂರ ಪುರಸಭೆ ಅಧಿಕಾರಿಗಳ ದುರ್ವರ್ತನೆಯಿಂದ ಬೇಸತ್ತ ಜಂಗಮ ಪಾಲಾಕ್ಷಯ್ಯ ಸಾಲಿಮಠ ಎಂಬುವವರು ಪುರಸಭೆ ಮುಖ್ಯದ್ವಾರಕ್ಕೆ ಅಡ್ಡಲಾಗಿ ಮಲಗಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

    ಆರೋಗ್ಯ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದು ನಿವೃತ್ತರಾಗಿರುವ ಇವರು ಇ-ಸ್ವತ್ತು ಯೋಜನೆಯಡಿ ಆಸ್ತಿ ನೋಂದಣಿ, ಉತ್ತಾರ ಹಾಗೂ ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಎರಡು ಮೂರು ಬಾರಿ ಅರ್ಜಿ ಸಲ್ಲಿಸಿ, ಎಲ್ಲ ದಾಖಲೆ ಕೊಟ್ಟು ಶುಲ್ಕ ಪಾವತಿಸಿದ್ದರೂ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಇವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿಕೊಡದ್ದರಿಂದ ಬೇಸತ್ತ ಈ ವ್ಯಕ್ತಿ ಏನು ಮಾಡಿದರು ನೋಡಿ!; ನಿವೃತ್ತ ನೌಕರರಿಗೇ ಹೀಗಾದರೆ ಉಳಿದವರ ಪಾಡೇನು?
    ಪುರಸಭೆ ಕಚೇರಿ ಮುಖ್ಯದ್ವಾರಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ಪಾಲಾಕ್ಷಯ್ಯ

    ತಮ್ಮೊಬ್ಬರದ್ದಷ್ಟೇ ಅಲ್ಲದೆ ಇತರ ಹಲವರಿಗೂ ಅಧಿಕಾರಿಗಳು ಇದೇ ಥರ ಸತಾಯಿಸುತ್ತಿರುವುದನ್ನು ನೋಡಿ ಬೇಸರಕ್ಕೊಳಗಾಗಿರುವ ಇವರು ಮುಖ್ಯದ್ವಾರಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ ಅವರು ಪಾಲಾಕ್ಷಯ್ಯ ಸಾಲಿಮಠ ಅವರಿಗೆ ಸಮಜಾಯಿಷಿ ನೀಡಿ, ಪ್ರತಿಭಟನೆ ಸ್ಥಗಿತಗೊಳಿಸುವಂತೆ ಕೋರಿಕೊಂಡರು.

    ತಮ್ಮ ಕೆಲಸ ಮಾಡಿಕೊಡುವುದಾದರೆ ಮಾತ್ರ ಪ್ರತಿಭಟನೆ ನಿಲ್ಲಿಸುವೆ ಎಂದು ಪಾಲಾಕ್ಷಯ್ಯ ಸಾಲಿಮಠ ಪಟ್ಟು ಹಿಡಿದರು. ಆದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು. ನಂತರ ನೆರದಿದ್ದ ಜನರು ಪುರಸಭೆ ಅಧಿಕಾರಿಗಳಿಗೆ ಛೀಮಾರಿ ಹಾಕಲು ಆರಂಭಿಸಿದರು. ನಿವೃತ್ತ ನೌಕರರಿಗೇ ಹೀಗಾದರೆ ಉಳಿದವರ ಪಾಡೇನು? ಎಂದು ಜನರೆಲ್ಲ ಬಾಯಿಗೆ ಬಂದ ಹಾಗೆ ಬಯ್ಯಲು ಆರಂಭಿಸಿದ ಬಳಿಕ, ಪಾಲಾಕ್ಷಯ್ಯ ಅವರ ಕೆಲಸವನ್ನು ಕೂಡಲೇ ಮಾಡಿಕೊಡಲಾಗುವುದು ಎಂಬ ಭರವಸೆ ಸಿಕ್ಕಿದ್ದರಿಂದ ಅವರು ಪ್ರತಿಭಟನೆ ನಿಲ್ಲಿಸಿದರು. ಸವಣೂರ ಪುರಸಭೆ ಕಚೇರಿ ಬಳಿ ಶುಕ್ರವಾರ ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್​ ಆಗಿದೆ.

    ಚಿತ್ರನಟ ಮಯೂರ್​ ಪಟೇಲ್​ಗೆ​ ಕೊಲೆ ಬೆದರಿಕೆ!; ಸೈಟ್ ಖರೀದಿ ವಿಚಾರ ತಕರಾರು…

    ನಾಯಿ ಹೆಸರಿಗೆ 36 ಕೋಟಿ ರೂ. ಮೌಲ್ಯದ ಆಸ್ತಿ ಬರೆದ ಭೂಪ! ಸಾಕುವವರಿಗೂ ಸಿಗುತ್ತೆ ಲಕ್ಷ ಲಕ್ಷ ಹಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts