More

    ಹೊಟ್ಟೆ ತುಂಬಾ ಊಟ ಮಾಡಿ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ…ಇದೆ ಈ ಹೋಟೆಲ್​​ನ​ ಸ್ಪೆಷಲ್

    ಜಪಾನ್‌: ಪ್ರಪಂಚದಾದ್ಯಂತದ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಆಕರ್ಷಿಸಲು ವಿನೂತನ ಥೀಮ್‌ಗಳನ್ನು ಪ್ರಯೋಗಿಸುತ್ತಿರುವಾಗ, ಜಪಾನ್‌ನ ಒಂದು ಉಪಾಹಾರ ಗೃಹವು ಜನರ ಗಮನವನ್ನು ಸೆಳೆಯಲು ವಿಲಕ್ಷಣ ಅಭ್ಯಾಸವನ್ನು ಅಳವಡಿಸಿಕೊಂಡಿದೆ. ಈ ಕುರಿತಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ನಾವು ಹೋಟೆಲ್‌ಗಳಿಗೆ ಏಕೆ ಹೋಗುತ್ತೇವೆ? ಇದು ಒಳ್ಳೆಯ ಊಟಕ್ಕಾಗಿ ಎಂದು ಹೇಳುತ್ತೇವೆ. ಆದರೆ ನಗೋಯಾದಲ್ಲಿರುವ ಶಚಿಹೊಕೊ-ಯಾ ಎಂಬ ಉಪಾಹಾರ ಗೃಹದಲ್ಲಿ, ಊಟವನ್ನು ಬಡಿಸುವ ಮೊದಲು ಅಲ್ಲಿರುವ ಸಿಬ್ಬಂದಿಗೆ ಕಪಾಳಮೋಕ್ಷ ಮಾಡ ಬಹುದಾಗಿದೆ.  ಇದೆ ಈ ರೆಸ್ಟೋರೆಂಟ್​ನ ವಿಶೇಷವಾಗಿದೆ.

    ಕೇವಲ 300 ಜಪಾನೀಸ್ ಯೆನ್‌ಗೆ (ರೂ. 170)ರೂಪಾಯಿ ನೀಡಿದ್ರೆ ಸಾಕು ನೀವು ಕಪಾಳಮೋಕ್ಷ ಮಾಡಲು ಬಯಸುವ ನಿಲುವಂಗಿಯನ್ನು ಧರಿಸಿರುವ ಸಿಬ್ಬಂದಿ ಸಿದ್ಧರಿರುತ್ತಾರೆ. ಗ್ರಾಹಕರು ಅವರ ಮುಖಕ್ಕೆ ತಮ್ಮ ಅಂಗೈಗಳಿಂದ ಮತ್ತೆ… ಮತ್ತೆ ಕಪಾಳಮೋಕ್ಷ ಮಾಡ ಬಹುದಾಗಿದೆ. ಈ ಸೇವೆಯು ಜಪಾನಿನ ಪುರುಷರು ಮತ್ತು ಮಹಿಳೆಯರು ಮತ್ತು ವಿದೇಶಿ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.

    ಕಪಾಳಮೋಕ್ಷ ಇಷ್ಟ ಪಡುತ್ತಾರಲ್ಲಾ ಅವರು ಜಪಾನ್‌ನಲ್ಲಿರುವ ಈ ರೆಸ್ಟೋರೆಂಟ್‌ಗೆ ಸಾಲುಗಟ್ಟಿ ನಿಂತಿದ್ದಾರೆ. ಹೀಗೆ ಕೆನ್ನೆಗೆ ಹೊಡೆದರೆ ಏನಾಗುತ್ತದೆ? ಎನ್ನುತ್ತಾರೆ ಇಲ್ಲಿಗೆ ಬರುವವರು. ಇದೊಂತರ ಗೇಮ್​ ಹಾಗೆ ಎನ್ನುತ್ತಾರೆ ಇಲ್ಲಿಗೆ ಬರುವ ಗ್ರಾಹಕರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದಷ್ಟೂ ಕೋಪಗೊಳ್ಳದಿರುವುದು ಮಾತ್ರವಲ್ಲ, ಹೊಡೆದ ನಂತರ ಅವರು ಹೆಚ್ಚು ಶಾಂತವಾಗಿರುತ್ತಾರೆ. ತಮ್ಮ ಕೆನ್ನೆಗೆ ಬಾರಿಸಿದ ಗ್ರಾಹಕರಿಗೆ ಈ ರೆಸ್ಟೋರೆಂಟ್‌ ಸಿಬ್ಬಂದಿ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಈ ಸೇವೆಗಳನ್ನು ನಿಲ್ಲಿಸುವಂತೆ ರೆಸ್ಟೋರೆಂಟ್‌ಗೆ ಎಚ್ಚರಿಕೆ ನೀಡಲಾಗಿದೆ.

    ಕಿವಿಯು ದೇಹದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ತಪ್ಪಾಗಿ ಹೊಡೆದರೆ ಅದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಅಂತಹ ವಿಷಯಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಇರಬೇಕು. ರೆಸ್ಟೋರೆಂಟ್ ಇತ್ತೀಚೆಗೆ ಈ ಸೇವೆಗಳನ್ನು ನಿಲ್ಲಿಸಿದೆ ಎಂದು ತೋರುತ್ತಿದೆ. ಅದೇನೇ ಇರಲಿ, ಈ ವೆರೈಟಿಯ ರೆಸ್ಟೋರೆಂಟ್ ಹಾಟ್ ಟಾಪಿಕ್ ಆಗಿಬಿಟ್ಟಿದೆ.

    ವಿಲಕ್ಷಣ ಸೇವೆಯ ಕೆಲವು ವೀಡಿಯೊಗಳು ವೈರಲ್ ಆದ ನಂತರ ಕಪಾಳಮೋಕ್ಷ  ಸೇವೆಯನ್ನು ಸ್ಥಗಿತಗೊಳಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಕಪಾಳಮೋಕ್ಷವಾಗುವ ನಿರೀಕ್ಷೆಯಿಂದ ಜನರು ಬರಬೇಡಿ ಎಂದು ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ತಿಳಿಸಿದೆ.

    ಭವಾನಿ ರೇವಣ್ಣ ಬಳಿಯಿರೋ ಕೋಟಿ ಮೌಲ್ಯದ ಕಾರಿನಲ್ಲಿದೆ ಲಕ್ಷುರಿ ಫೀಚರ್ಸ್​​; ಬೆಂಗಳೂರು ಆನ್ ರೋಡ್​​ಗೆ ಖರ್ಚಾಗುತ್ತೆ ಕೋಟಿ.. ಕೋಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts