More

    ಚತುಷ್ಪಥ ಅವ್ಯವಸ್ಥೆ ಸರಿಪಡಿಸಿ-ಕರವೇ ಮನವಿ

    ಕಾರವಾರ: ಅವ್ಯವಸ್ಥಿತ ಚತುಷ್ಪಥ ಕಾಮಗಾರಿ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
    ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಕಾರವಾರದಿಂದ ಭಟ್ಕಳವರೆಗೆ ರಾಷ್ಟ್ರೀಯ ಹೆದ್ದಾರಿ 66 ನ್ನು ಐಆರ್ ಬಿ ಎಂಬ ಕಂಪನಿ ಸುಮಾರು 9 ವರ್ಷಗಳಿಂದ ಚತುಷ್ಪಥವಾಗಿ ವಿಸ್ತರಿಸುವ ಕಾರ್ಯ ನಡೆಸಿದೆ.

    ಕಾಮಗಾರಿ ಅವೈಜ್ಞಾನಿಕವಾಗಿದೆ. ಸುರಕ್ಷತೆಯ ಪ್ರಮಾಣಪತ್ರ ಪಡೆಯದೇ ಸುರಂಗ ಪ್ರಾರಂಭಿಸಲಾಗಿದೆ‌‌.

    ಜನರನ್ನು ಅಧಿಕಾರಿಗಳು ಮೂರ್ಖರನ್ನಾಗಿಸಿದರು. ಇದರಿಂದ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ:ಟಾಪ್​ಲೆಸ್​ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ವೈರಲ್​ ಆಯ್ತು ನಟಿ ನೀಲಿಮಾ ಕೊಟ್ಟ ಉತ್ತರ
    ಪ್ರತಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ವಾರದಲ್ಲಿ ಒಂದು ದಿನ ಸಾರ್ವಜನಿಕ ಭೇಟಿಗೆ ಅವಕಾಶ ಮಾಡಿಕೊಡಬೇಕು.

    ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ತಪಾಸಣೆಗೆ ಎಕ್ಸರೆಗೆ ಹಣ ಪಡೆಯುತ್ತಿದ್ದಾರೆ ಅದನ್ನು ನಿಲ್ಲಿಸಬೇಕು.
    ಎಲ್ಲ ಅಂಗಡಿ, ಮಳಿಗೆಗಳಿಗೆ ಕನ್ನಡದಲ್ಲೇ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಒತ್ತಾಯಿಸಲಾಗಿದೆ.‌

    ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಕಾರವಾರ ತಾಲೂಕು ಅಧ್ಯಕ್ಷ ನರೇಂದ್ರ ತಳೇಕರ್, ಹೊನ್ನಾವರ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ಕುಮಟಾ ತಾಲೂಕು ಅಧ್ಯಕ್ಷ ತಿಮ್ಮಪ್ಪ ನಾಯ್ಕ, ದಾಂಡೇಲಿ ತಾಲೂಕು ಅಧ್ಯಕ್ಷ ಅಧ್ಯಕ್ಷ ಸಾದಿಕ್ ಮುಲ್ಲಾ, ಕಾರ್ಮಿಕ ಘಟಕದ ಅಧ್ಯಕ್ಷ ಬುದವಂತ ನಾಯ್ಕ, ರಾಹುಲ್ ನಾಯ್ಕ ಕಾರವಾರ, ಗಣಪತಿ ನಾಯ್ಕ ಗೋಕರ್ಣ, ವಿಶಾಲ ಗಾಂವಕರ್, ರಾಜಾ ನಾಯ್ಕ ನಾಗು ಹಳ್ಳೇರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts