More

    ಡಿಸಿ ಕಚೇರಿ ಎದುರು ಮರಾಠಿ ಕ್ಯಾಂಪ್‌ ನಿವಾಸಿಗಳ ಪ್ರತಿಭಟನೆ

    ಶಿವಮೊಗ್ಗ: ತಾಲೂಕಿನ ಹೊಳಲೂರು 2ನೇ ಹೋಬಳಿ ಸದಾಶಿವಪುರ ಗ್ರಾಮ ಲಕ್ಕಿನಕೊಪ್ಪ ಸರ್ಕಲ್ ಹಾಗೂ ಮರಾಠಿ ಕ್ಯಾಂಪ್‌ನಲ್ಲಿ ಹಲವಾರು ವರ್ಷಗಳಿಂದ ಸಮಸ್ಯೆಗಳು ಬಾಕಿ ಇದ್ದು, ತಕ್ಷಣವೇ ಬಗೆಹರಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ತಾಲೂಕು ಶಾಖೆ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಶಿವಪುರ ಗ್ರಾಮದ ಸ.ನಂ.111ರಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಾ ಸ್ವಾಧೀನ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಕುಟುಂಬಗಳು ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಈ ಸಂಬಂಧ ಸರ್ವೇ ಕಾರ್ಯ ನಡೆದು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ಪೂರಕ ಆದೇಶ ಪಡೆದಿವೆ. ಇದೇ ಸರ್ವೆ ನಂಬರ್‌ನಲ್ಲಿ ಸಾಗುವಳಿ ಮಾಡುತ್ತಿರುವ ಶ್ರೀಮಂತ ವರ್ಗದವರಿಗೆ ಹಾಗೂ ಬಂಡವಾಳಶಾಹಿಗಳಿಗೆ ಸಾಗುವಳಿ ಪತ್ರ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ಮರಾಠಿ ಕ್ಯಾಂಪ್ ಸರ್ವೇ ನಂಬರ್ 21ರಲ್ಲಿ ಹಲವಾರು ಕುಟುಂಬಗಳಿಗೆ ಸಾಗುವಳಿ ಮತ್ತು ಹಕ್ಕುಪತ್ರ ನೀಡಲಾಗಿದ್ದು, ಇನ್ನುಳಿದ 25 ಕುಟುಂಬಗಳಿಗೆ ನೀಡಿಲ್ಲ. ಹಾಗೂ ಲಕ್ಕಿನಕೊಪ್ಪ ಸರ್ವೇ ನಂಬರ್ 25ರಲ್ಲಿ ನಿವೇಶನ ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿರುವ ಸುಮಾರು 400 ಕುಟುಂಬಗಳಿಗೆ ತಕ್ಷಣ ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದರು.
    ರಾಜ್ಯ ಸಮಿತಿ ಸದಸ್ಯ ಚೌಡಪ್ಪ, ಜಿಲ್ಲಾ ಸಂಯೋಜಕ ಎಲ್.ರಾಜು, ಪ್ರಮುಖರಾದ ಆರ್. ಜಗದೀಶ್, ವಿರೂಪಾಕ್ಷಪ್ಪ, ಯಶವಂತ್‌ಕುಮಾರ್, ಜಿ.ಗುರಪ್ಪ, ಅಣ್ಣಾದೊರೆ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts