More

    ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಹೋರಾಟ; ನೇತೃತ್ವ ವಹಿಸುವಂತೆ ಶ್ರೀಗಳಲ್ಲಿ ಮನವಿ

    ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿಸುವ ಸಲುವಾದ ಹೋರಾಟದ ನೇತೃತ್ವ ವಹಿಸುವಂತೆ ಆದಿಚುಂಚನಗಿರಿ ಶ್ರೀಗಳನ್ನು ಒಕ್ಕಲಿಗ ನಾಯಕರು ಇಂದು ಭೇಟಿ ಮಾಡಿ ಮನವಿ ಮಾಡಿಕೊಂಡರು.

    ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಕಾಂಗ್ರೆಸ್ ನಾಯಕರು ಇಂದು ಭೇಟಿ ನೀಡಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಜತೆ ಮಾತುಕತೆ ನಡೆಸಿದರು. ಮೀಸಲಾತಿ ವಿಚಾರ ಕುರಿತಂತೆ ಕಾಂಗ್ರೆಸ್ ಒಕ್ಕಲಿಗ ನಾಯಕರ ನಿಲುವು ವ್ಯಕ್ತಪಡಿಸಲು ಕಾಂಗ್ರೆಸ್ ನಾಯಕರಾದ ಚೆಲುವರಾಯಸ್ವಾಮಿ, ಜಿ.ಸಿ ಚಂದ್ರಶೇಖರ್, ಕಿಮ್ಮನೆ ರತ್ನಾಕರ್, ಪ್ರೊ.ರಾಜೀವ್ ಗೌಡ, ಎಸ್.ರವಿ, ವಾಸು, ಕೃಷ್ಣ ಭೈರೇಗೌಡ, ಟಿ.ಬಿ.ಜಯಚಂದ್ರ, ಎಂ. ಕೃಷ್ಣಪ್ಪ ವಿಧಾನ ಪರಿಷತ್ ಸದಸ್ಯ ರವಿ, ದಿನೇಶ್ ಗೂಳಿಗೌಡ, ಮಾಜಿ ಶಾಸಕ ವಾಸು ಸೇರಿದಂತೆ ಹಲವರು ಭೇಟಿ ನೀಡಿದ್ದರು.

    ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಸಲುವಾಗಿ ಮೊನ್ನೆಯಷ್ಟೇ ಕಾಂಗ್ರೆಸ್​ನ ಒಕ್ಕಲಿಗ ನಾಯಕರು ಸಭೆ ಸೇರಿದ್ದರು. ಅದರಂತೆ ಇಂದು ಸ್ವಾಮೀಜಿಯವರನ್ನು ಭೇಟಿ ಮಾಡಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ನಮ್ಮ ಬೆಂಬಲ ಇದೆ. ಶ್ರೀಗಳು ಈ ಹೋರಾಟಕ್ಕೆ ನಾಯಕತ್ವವನ್ನು ವಹಿಸಬೇಕು ಎಂದು ಮನವಿ ಮಾಡಲು ಬಂದಿದ್ದೇವೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ತಿಳಿಸಿದರು.

    ಶ್ರೀಗಳು ಕರೆದ ಒಕ್ಕಲಿಗ ನಾಯಕರ ಸಭೆಗೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, , ಮಾಜಿ ಸಚಿವ ಎಚ್​.ಡಿ.ರೇವಣ್ಣ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ, ಅದನ್ನು ಅವರೇ ತಿಳಿಸಬೇಕು ಎಂಬುದಾಗಿ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

    ಡಬಲ್ ಖುಷಿ: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರ ಗೌರವಧನ ಹೆಚ್ಚಳ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ..

    ಎರಡನೇ ಹೆಂಡ್ತಿಯನ್ನು ಕೊಂದು ಪೀಸ್​ ಪೀಸ್​ ಮಾಡಿ ಎಸೆದ; ಆಕೆಯ ದೇಹದ ತುಂಡು ನಾಯಿ ತಿನ್ನುತ್ತಿದ್ದುದರಿಂದ ಪ್ರಕರಣ ಬಹಿರಂಗ!

    ಯುವತಿಯ ಬ್ಯಾಕ್​ ಮೇಲೆ ಸ್ಕೇಲ್​ನಲ್ಲಿ ಹೊಡೆದಿದ್ದಕ್ಕೆ 90 ಲಕ್ಷ ರೂ. ಕಳೆದುಕೊಂಡ ಬಾಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts