More

    ಸಂಶೋಧನೆಗೆ ದಾವಣಗೆರೆ ವಿವಿ-ಚಿಗಟೇರಿ ಟ್ರಸ್ಟ್ ಒಪ್ಪಂದ

    ದಾವಣಗೆರೆ: ಸಂಶೋಧನೆ, ಶೈಕ್ಷಣಿಕ ಅಧ್ಯಯನ, ಸಾಮಾಜಿಕ ಜವಾಬ್ದಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಶನಿವಾರ ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ ಮತ್ತು ಜಯರತ್ನ ಚಿಗಟೇರಿ ಚಾರಿಟಬಲ್ ಟ್ರಸ್ಟ್‌ನ ಡಾ.ಚಿನ್ಮಯ್ ಸಹಿ ಹಾಕುವ ಮೂಲಕ ಒಡಂಬಡಿಕೆ ಮಾಡಿಕೊಳ್ಳಲಾಯಿತು.

    ನಂತರ ಮಾತನಾಡಿದ ಡಾ.ಚಿನ್ಮಯ್ ಚಿಗಟೇರಿ, ವಿದ್ಯಾರ್ಥಿಗಳಲ್ಲಿ ಜ್ಞಾನಾಸಕ್ತಿ, ಸಾಮಾಜಿಕ ಜವಾಬ್ದಾರಿ ಮತ್ತು ಹೊಸ ಆಲೋಚನೆಗಳನ್ನು ರೂಢಿಸುವ ಜತೆಗೆ ಸಮಾಜಪರ, ಜನಪರ ಕಾಳಜಿಯ ಅರಿವು ಮೂಡಿಸುವುದು ಮುಖ್ಯ. ಸಮಾಜಮುಖಿ ಚಿಂತನೆಯಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ ದೇಶದ ಉನ್ನತಿ ಸಾಧ್ಯ ಎಂದರು.

    ಸಮಾಜದ ಅಭಿವೃದ್ಧಿಗೆ ಸಹಕಾರಿ ಆಗುವಂತಹ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆ ಜತೆಗೆ ಗುಣಮಟ್ಟದ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ. ದುಡಿಮೆ, ಲಾಭ ಗಳಿಕೆಯೊಂದೇ ಜೀವನದ ಸಾಧನೆಯಲ್ಲ. ಗಳಿಸಿದ್ದರಲ್ಲಿ ಒಂದು ಭಾಗವನ್ನು ಸಮಾಜಕ್ಕೆ ವಿನಿಯೋಗಿಸಬೇಕು ಎಂದರು.

    ನಮ್ಮ ಕುಟುಂಬದ ಹಿರಿಯರಾದ ಧರ್ಮಪ್ರಕಾಶ ಮುರಿಗೆಪ್ಪ ಚಿಗಟೇರಿ, ಜಯಣ್ಣ ಚಿಗಟೇರಿ, ವೀರಭದ್ರಪ್ಪ ಚಿಗಟೇರಿ ದಾನ ಧರ್ಮದ ಮೂಲಕ ಸಮಾಜಕ್ಕೆ ಬೆಳಕಾಗಿದ್ದಾರೆ. ಅವರ ಸೇವಾ ಮನೋಭಾವ, ಸಾಮಾಜಿಕ ಸೇವೆ ಮಾದರಿಯಾಗಿವೆ ಎಂದರು.

    ಮುರುಘರಾಜೇಂದ್ರ ಚಿಗಟೇರಿ ಮಾತನಾಡಿ, ಅನುಭವ ಆಧರಿಸಿದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಇಂತಹ ಅನುಭವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಆದರೆ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಜತೆಗೆ ಅನುಭವ ಆಧರಿಸಿದ ಸಮಾಜಮುಖಿ ಕೆಲಸ, ವೃತ್ತಿ ಕೌಶಲಗಳನ್ನು ಕಲಿಸಿದರೆ ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

    ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ, ಜಯಪ್ರಕಾಶ ಚಿಗಟೇರಿ, ಜಯದೇವ ಚಿಗಟೇರಿ, ಸೋಮೇಶ್ವರ ಚಿಗಟೇರಿ, ಶಾಂತಾ ಯಾವಗಲ್, ಸುಧಾ ಚಿಗಟೇರಿ, ಸುರೇಖಾ ಚಿಗಟೇರಿ, ಶುಭಾಂಗಿನಿ ಚಿಗಟೇರಿ, ಪ್ರಮೋದ ಲಕ್ಷ್ಮಿ, ರಾಕೇಶ್, ವರ್ಷಾ ಚಿಗಟೇರಿ, ಪ್ರಶಾಂತ ಬಿದರಿ, ದಾವಣಗೆರೆ ವಿವಿ ಡೀನ್‌ಗಳಾದ ಪ್ರೊ. ಕೆ.ಬಿ.ರಂಗಪ್ಪ, ಪ್ರೊ. ಕೆ.ಲಕ್ಷ್ಮಣ, ಪ್ರೊ. ರಾಮಲಿಂಗಪ್ಪ, ಪ್ರಾಧ್ಯಾಪಕರಾದ ಡಾ.ಸುಚಿತ್ರಾ, ಡಾ. ಶಶಿಧರ, ಡಾ.ಸೆಲ್ವಿ, ಡಾ.ಹುಚ್ಚೇಗೌಡ, ಡಾ.ಶಿವಕುಮಾರ ಕಣಸೋಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts