More

    ಟರ್ಕಿ-ಸಿರಿಯಾ ಭೂಕಂಪ: ಸತ್ತವರ ಸಂಖ್ಯೆ 25 ಸಾವಿರಕ್ಕೂ ಅಧಿಕ

    ಟರ್ಕಿ: ಸಿರಿಯಾ ಹಾಗೂ ಟರ್ಕಿಯಲ್ಲಿ ಭೂಕಂಪ ಸಂಭವಿಸಿ ಐದು ದಿನ ಕಳೆದರೂ ಇನ್ನೂ ರಕ್ಷಣಾ ಕಾರ್ಯಾಚರಣೆ ಮುಗಿಸಲಾಗದ ಮಟ್ಟಿಗೆ ಸಾವು-ನೋವು ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, ಸತ್ತವರ ಸಂಖ್ಯೆ 25 ಸಾವಿರ ದಾಟಿದೆ.

    ಫೆ. 6ರ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಭೂಕಂಪದ ಬೆನ್ನಿಗೇ ಮತ್ತೆರಡು ಭೂಕಂಪ ಸಂಭವಿಸಿದೆ. ಮರುದಿನ ಮತ್ತೊಂದು ಭೂಕಂಪ ಸಂಭವಿಸಿದ್ದು, ಎಲ್ಲ ಭೂಕಂಪನದಲ್ಲೂ ದೊಡ್ಡದೊಡ್ಡ ಕಟ್ಟಡಗಳು ನೆಲಸಮವಾಗಿದ್ದು, ಜನರು ಕ್ಷಣಗಳಲ್ಲೇ ಅವಶೇಷಗಳಡಿ ಸಿಲುಕಿ ಪ್ರಾಣಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

    ಭೂಕಂಪದ ತೀವ್ರತೆ ಎಷ್ಟಿದೆ ಎಂದರೆ ಆ ಬಳಿಕ ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ದಿನವೂ ಅವಶೇಷಗಳಡಿ ಶವಗಳು ಸಿಗುತ್ತಿದ್ದು, ಉಸಿರು ಬಿಗಿಹಿಡಿದುಕೊಂಡವರನ್ನು ರಕ್ಷಣೆ ಮಾಡುವ ಕೆಲಸವೂ ನಡೆಯುತ್ತಿದೆ. ಶನಿವಾರ ಎರಡು ತಿಂಗಳ ಮಗು ಮತ್ತು ವಯಸ್ಕ ಮಹಿಳೆಯೊಬ್ಬಳನ್ನು ಅವಶೇಷಗಳ ನಡುವಿನಿಂದ ರಕ್ಷಣೆ ಮಾಡಲಾಗಿದೆ.

    40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts