More

    ಕಿಟಕಿ ಪೋರಂನಲ್ಲಿ ಸಿಲುಕಿಕೊಂಡಿದ್ದ ಬಾಲಕನ ರಕ್ಷಣೆ

    ಉಡುಪಿ: ಬ್ರಹ್ಮಗಿರಿಯ ಅಪಾರ್ಟ್ಮೆಂಟ್‌ನ ಕಿಟಕಿ ಪೊರಂನಲ್ಲಿ ಸಿಲುಕಿಕೊಂಡಿದ್ದ ವಿಶೇಷಚೇತನ ಬಾಲಕನನ್ನು ಉಡುಪಿ ಅಗ್ನಿಶಾಮಕ ದಳದ ತಂಡ ಮತ್ತು ನಗರ ಠಾಣೆಯ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಆರುಷ್ (೮) ರಕ್ಷಿಸಲ್ಪಟ್ಟ ಬಾಲಕ. ಸೋಮವಾರ ಆಟವಾಡುತ್ತಿದ್ದ ಬಾಲಕ ಖಾಸಗಿ ಫ್ಲ್ಯಾಟ್ ನ 10 ಮಹಡಿಯಿಂದ 11 ಮಹಡಿಯ ಟೆರೇಸ್ ಗೆ ತೆರಳಿದ್ದು, ವಾಪಾಸು ಬರುವಾಗ ೧೦ನೇ ಪ್ಲೋರ್‌ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ. ಇದನ್ನು ನೋಡಿದ ಅಪಾರ್ಟ್ಮೆಂಟ್ ನವರು ನಗರ ಠಾಣೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ತಂಡ ಬಾಲಕನನ್ನು ಕಾಪಾಡಿದ್ದಾರೆ. ಸಿಬ್ಬಂದಿ ವಿನಾಯಕ್ ಆವರು ಮೊದಲಿಗೆ ಹಗ್ಗದ ಸಹಾಯದಿಂದ ಮಹಡಿಯನ್ನು ಏರಿ, ಕಿಟಕಿಯ ಬಳಿಗೆ ತೆರಳಿ ಬಾಲಕನ್ನು ಹಿಡಿದುಕೊಂಡಿದ್ದರು. ನಂತರ ಇತರ ಸಿಬ್ಬಂದಿ ಸಹಕಾರದಲ್ಲಿ ಸುಲಭವಾಗಿ ಕಾರ್ಯಚರಣೆ ನಡೆಸಲು ಸಾಧ್ಯವಾಯಿತು.

    ಉಡುಪಿ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ಎನ್, ಸಿಬ್ಬಂದಿ ಅರುಣ್ ಕುಮಾರ್, ಶಿವಾನಂದ್, ಸತೀಶ್ ಶೆಣೈ, ಪ್ರತಾಪ್, ಚಾಲಕ ಅಲ್ವಿನ್ ಪ್ರಶಾಂತ್, ನಗರ ಠಾಣೆಯ ಸಿಬ್ಬಂದಿ ಚೇತನ್ ಮತ್ತು ಮಹಾಂತೇಶ್ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts