More

    ಪರಿಹಾರ ವಿತರಿಸಲು ರೈತರ ಮನವಿ

    ರಟ್ಟಿಹಳ್ಳಿ: ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ)ಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆ ಹಾಗೂ ಶಿಕಾರಿಪುರ ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತಗೊಳಿಸುವಂತೆ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ, ಭೂಮಿ ಕಳೆದುಕೊಂಡ ರೈತರಿಂದ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಸಮಿತಿಯ ವಿನಯ ಪಾಟೀಲ ಮಾತನಾಡಿ, ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಕ್ಕಿಲ್ಲ. ಶಿಕಾರಿಪುರ ಏತ ನೀರಾವರಿ ಯೋಜನೆಗೆ ಭೂಮಿ ಸ್ವಾಧೀನಕ್ಕಾಗಿ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾನೂನು ವಿರುದ್ಧವಾಗಿ ರೈತರಿಗೆ ಹಣದ ಆಮಿಷದ ಮೂಲಕ ಮುಂದಾಗಿದ್ದಾರೆ. ಈ ಕುರಿತು 14 ದಿನಗಳ ಕಾಲ ಹಿರಿಯ ವಕೀಲ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗಿತ್ತು. ಕಾಮಗಾರಿ ಕುರಿತು ರ್ಚಚಿಸಲು ಎಲ್ಲ ರೈತ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಆದರೆ, ರೈತರನ್ನು ಕರೆಯದೇ ಕಾಮಗಾರಿ ಮುಂದುವರಿಸಿದ್ದಾರೆ. ಮೊದಲು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಅಲ್ಲಿವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

    ಉಜಿನೆಪ್ಪ ಕೋಡಿಹಳ್ಳಿ, ಎಸ್.ಡಿ. ಹಿರೇಮಠ, ವಸಂತ ದ್ಯಾವಕ್ಕಳವರ, ಮಾಲತೇಶಯ್ಯ ಪಾಟೀಲ, ಜೆ.ಎಸ್. ಮಲ್ಲಿಕಾರ್ಜುನ, ರಾಜಶೇಖರ ಪಾಟೀಲ, ಯಲ್ಲಪ್ಪ ಆರೇರ, ಕಾಸೀಮ್ಾಬ್ ಅಂಗಡಿ, ಶಿವಪ್ಪ ಮಲ್ಲೂರ, ಶಿವನಗೌಡ ಪಾಟೀಲ, ಹನುಮಂತಪ್ಪ ಬುಳ್ಳಣ್ಣನವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts