More

    ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಸುವಂತೆ ಮನವಿ

    ಕೋಲಾರ: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಬೇಸಿಗೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಸಕಾಲಕ್ಕೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ರೈತಸಂಘದಿಂದ ನಗರದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಮೃತ್ಯುಂಜಯ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ರೈತ ಮಂಗಸಂದ್ರ ತಿಮ್ಮಣ್ಣ ಮಾತನಾಡಿ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ಸಮರ್ಪಕ ವಿದ್ಯುತ್ ಇಲ್ಲದೆ ಒಣಗಿವೆ. ನಷ್ಟವಾದರೆ ರೈತನ ನಷ್ಟ ಭರಿಸಲು ಇಂಧನ ಸಚಿವರು ಸಂಬಂಧಪಟ್ಟ ಬೆಸ್ಕಾಂ ಅಽಕಾರಿಗಳ ಆಸ್ತಿ ಹರಾಜು ಹಾಕಿ ನೊಂದ ರೈತರಿಗೆ ಪರಿಹಾರ ಕೊಡುವ ಕಾನೂನು ಜಾರಿ ಮಾಡಲಿ ಎಂದರು.
    ಬೇಸಿಗೆ ಆರಂಭಕ್ಕೂ ಮುನ್ನವೇ ಲೋಡ್‌ಶೆಡ್ಡಿಂಗ್ ಹೆಸರಿನಲ್ಲಿ ಬೆಸ್ಕಾಂ ಅಽಕಾರಿಗಳು ರಾತ್ರಿ ವೇಳೆ ಸಂಪೂರ್ಣ ವಿದ್ಯುತ್ ಕಡಿತ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆಗಳು ಸಮೀಪಿಸಿರುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಇಂಧನ ಸಚಿವರು ವಿಫಲವಾಗಿದ್ದು, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಬೆಸ್ಕಾಂ ಅಽಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ವಿಧಾನಸೌಧದಲ್ಲಿ ಇಂಧನ ಸಚಿವರು ರಾಜ್ಯದಲ್ಲಿ ಯಾವುದೇ ಲೋಡ್‌ಶೆಡ್ಡಿಂಗ್ ಇಲ್ಲ.ಎಲ್ಲ್ಲ ಜಿಲ್ಲೆಗಳಲ್ಲೂ ಗುಣಮಟ್ಟದ ೩ -ಫೆಸ್‌ ೧೨ ತಾಸು ರೈತರಿಗೆ ನೀಡುತ್ತಿದ್ದೇವೆ ಎಂದು ಹೇಳುತ್ತಿರುವುದು ಮಾಧ್ಯಮಗಳಲ್ಲಿ ಮಾತ್ರ ಸೀಮಿತವಾಗಿದೆ. ಬೆಸ್ಕಾಂ ಅಽಕಾರಿಗಳನ್ನು ಕೇಳಿದರೆ ಮೇಲಾಧಿಕಾರಿಗಳ ಆಜ್ಞೆಯಂತೆ ನಾವು ನಡೆದುಕೊಳ್ಳುತ್ತೇವೆಂದು ರೈತರಿಗೆ ನೂರೊಂದು ನೆಪ ಹೇಳುತ್ತಾರೆ ಎಂದು ದೂರಿದರು.
    ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯಪಾಲಕ ಅಭಿಯಂತರ ಮೃತ್ಯುಂಜಯ ಅವರು, ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಈಗಾಗಲೇ ಎಲ್ಲ ಸಂಬಂಧಪಟ್ಟ ಬೆಸ್ಕಾಂ ಅಽಕಾರಿಗಳಿಗೆ ಆದೇಶ ಮಾಡಿದ್ದೇವೆ. ಜತೆಗೆ ರೈತರಿಗೆ ತೊಂದರೆಯಾಗದ ರೀತಿ ವಿದ್ಯುತ್ ನೀಡುವ ಭರವಸೆ ನೀಡಿದರು.
    ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುದುವಾಡಿ ಚಂದ್ರಪ್ಪ, ಮಂಗಸAದ್ರ ವೆಂಕಟೇಶಪ್ಪ, ಗಿರೀಶ್, ಯಲ್ಲಣ್ಣ, ಹರೀಶ್, ಶೈಲಜಾ, ರತ್ನಮ್ಮ, ಸುಪ್ರೀಂಚಲ, ಮುನಿರತ್ನಮ್ಮ, ನಾಗರತ್ನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts