More

    ಚಳಿಗಾಲದ ಅಧಿವೇಶನಕ್ಕೂ ಮುನ್ನ ವಿವಿಧ ಪಕ್ಷಗಳ ಸಭಾನಾಯಕರ ಜತೆ ಮಾತುಕತೆ; ಸದನದಲ್ಲಿ ಸಹಕರಿಸಿ ಎಂದು ಮನವಿ

    ದೆಹಲಿ: ಲೋಕಸಭೆಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ವಿವಿಧ ಪಕ್ಷಗಳ ಸಭಾನಾಯಕರ ಜತೆ ಸರ್ಕಾರದ ವತಿಯಿಂದ ಸಭೆ ನಡೆಸಲಾಗಿದ್ದು, ಸದನದಲ್ಲಿ ಸಹಕರಿಸುವಂತೆ ಸರ್ವರನ್ನೂ ಕೋರಲಾಗಿದೆ. ಸಭೆ ಬಳಿಕ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರು ಈ ಕುರಿತು ಮಾಹಿತಿ ನೀಡಿದರು.

    2021ರ ಚಳಿಗಾಲದ ಅಧಿವೇಶನ ನ. 29ರ ಸೋಮವಾರ ಆರಂಭವಾಗಲಿದ್ದು, ಡಿಸೆಂಬರ್ 23ರ ಗುರುವಾರ ಮುಗಿಯುವ ನಿರೀಕ್ಷೆ ಇದೆ. 25 ದಿನಗಳ ಈ ಅವಧಿಯಲ್ಲಿ 19 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನದ ಕುರಿತು ಅ. 5 ಹಾಗೂ 27ರಂದು ಎರಡು ಸಭೆಗಳನ್ನು ನಡೆಸಲಾಗಿದ್ದು, ಸದನದಲ್ಲಿ ಚರ್ಚಿಸಲು ತೆಗೆದುಕೊಳ್ಳಬೇಕಾದ ವಿಚಾರಗಳ ಕುರಿತು ಚರ್ಚಿಸಲಾಗಿತ್ತು. ಒಂದು ಆರ್ಥಿಕ ವಿಷಯ ಹಾಗೂ 36 ಕಾಯ್ದೆಗಳು ಸೇರಿ ಒಟ್ಟು 37 ವಿಷಯಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ ಎಂದು ಜೋಶಿ ತಿಳಿಸಿದ್ದಾರೆ. ಯಾವ್ಯಾವ ಕಾಯ್ದೆಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ ಎಂಬ ಮಾಹಿತಿ ನೀಡಿದ ಅವರು, ಸದನ ಸುಗಮವಾಗಿ ನಡೆಯಲು ಎಲ್ಲ ಪಕ್ಷಗಳ ಸಹಕಾರ ಅಗತ್ಯ ಎಂದು ಮನವಿ ಮಾಡಿಕೊಂಡಿದ್ದಾಗಿಯೂ ಅವರು ತಿಳಿಸಿದರು.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ನಾಯಕರ ವಿಚಾರಗಳನ್ನು ಆಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತುಂಬಾ ಆರೋಗ್ಯಯುತ ಚರ್ಚೆ ನಡೆದಿದ್ದು, ಬಹುಮುಖ್ಯವಾದ ವಿಚಾರಗಳನ್ನು ಗುರುತು ಮಾಡಿಟ್ಟುಕೊಳ್ಳಲಾಗಿದೆ. ಅಲ್ಲದೆ ವಿವಿಧ ಪಕ್ಷಗಳವರು ಅಧಿವೇಶನದಲ್ಲಿ ಹೆಚ್ಚಿನ ಚರ್ಚೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್​, ವಿ. ಮುರಳೀಧರನ್ ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು.

    ಚಳಿಗಾಲದ ಅಧಿವೇಶನಕ್ಕೂ ಮುನ್ನ ವಿವಿಧ ಪಕ್ಷಗಳ ಸಭಾನಾಯಕರ ಜತೆ ಮಾತುಕತೆ; ಸದನದಲ್ಲಿ ಸಹಕರಿಸಿ ಎಂದು ಮನವಿ

    ರಾಜ್ಯದಲ್ಲಿ ಹೆಚ್ಚಾದ ಕರೊನಾ ಆತಂಕ; ಸಿಎಂ ಸಭೆಯಲ್ಲಿ ಹೊರಬಿತ್ತು ಹೊಸ ಗೈಡ್​​ಲೈನ್ಸ್​: ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts