More

    ಕೊಡವರನ್ನು ಎಸ್ಟಿಗೆ ಸೇರಿಸಲು ಆಗ್ರಹ

    ಮಡಿಕೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಶುಕ್ರವಾರ ನಡೆಸಲಾಯಿತು.

    ಕೊಡವ ಬುಡಕಟ್ಟು ಕುಲಕ್ಕೆ ಎಸ್‌ಟಿ ಪಟ್ಟಿಯಲ್ಲಿ ಮಾನ್ಯತೆ ದೊರಕಬೇಕು. ಆ ಮೂಲಕ ವಿನಾಶದಂಚಿನಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಕುಲದ ಹೆಗ್ಗುರುತು, ಚಾರಿತ್ರಿಕ ನಿರಂತರತೆ, ಜನಪದಿಯ ಸಂಸ್ಕೃತಿ, ಸಾಂಪ್ರದಾಯಿಕ ಕಾಯ್ದೆ, ಪೂರ್ವಾರ್ಜಿತ ಭೂಮಿ, ಭಾಷೆ ಇತ್ಯಾದಿಗಳಿಗೆ ರಾಜ್ಯಾಂಗ ಖಾತ್ರಿ ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

    ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಮಾತನಾಡಿ, ಕೊಡವರು ವಿಶೇಷ ಬುಡಕಟ್ಟು ಜನಾಂಗದವರೆಂದು ಮತ್ತು ನಮ್ಮ ಬುಡಕಟ್ಟು ಅನುವಂಶೀಯ ಊರ್ಜಿತ್ವ ಮತ್ತು ಪೂರ್ವಜತೆಯನ್ನು ನಮ್ಮ ವಿಶಿಷ್ಟ ಬದುಕು ಮತ್ತು ಜೀವನ ವಿಧಾನವೇ ಸಾಕ್ಷೀಕರಿಸುತ್ತದೆ. ಕೊಡವರ ಬುಡಕಟ್ಟು ವಂಶವಾಹಿನಿ ನಿರಂತರವಾಗಿ ಅನಾವರಣಗೊಳ್ಳುತ್ತ ಬಂದಿದೆ. ಆದರಿಂದ ಕೊಡವರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

    ಸಿಎನ್‌ಸಿ ಸಂಘಟನೆಯ ಪ್ರಮುಖರು ಉಪ ವಿಭಾಗಾಧಿಕಾರಿ ಜವರೇಗೌಡ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಲಿಯಂಡ ಪ್ರಕಾಶ್, ಪುಲ್ಲೆರ ಕಾಳಪ್ಪ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಚಂಬಂಡ ಜನತ್, ಬೇಪಡಿಯಂಡ ಬಿದ್ದಪ್ಪ, ಚಂಙಂಡ ಚಾಮಿ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ದಿನೇಶ್, ನಂದಿನೆರವಂಡ ಅಯ್ಯಣ್ಣ, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್ ದೇವಯ್ಯ, ಕೊಂಗೆಟ್ಟಿರ ಲೋಕೇಶ್, ಮಣವಟ್ಟಿರ ನಂದ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts