More

    ಭಾರತಕ್ಕೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ : ಪ್ರಧಾನಿ ಮೋದಿ ಅವರೊಂದಿಗೆ ವಿಶೇಷ ಕಾರ್ಯಕ್ರಮ

    ನವದೆಹಲಿ: ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾಗವಹಿಸಲಿದ್ದಾರೆ. ಎರಡು ದಿನಗಳ ಭೇಟಿಯ ಭಾಗವಾಗಿ ಮ್ಯಾಕ್ರನ್ ಇಂದು(ಜ.25) ಭಾರತಕ್ಕೆ ಆಗಮಿಸಲಿದ್ದಾರೆ. ಮ್ಯಾಕ್ರನ್ ಗುರುವಾರ ನೇರವಾಗಿ ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

    ಇದನ್ನೂ ಓದಿ:  ‘ಭಾರತದೊಂದಿಗೆ ವಿವಾಧ ನಮಗೇ ಪ್ರಮಾದ’: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝುಗೆ ಪ್ರತಿಪಕ್ಷಗಳ ಎಚ್ಚರಿಕೆ!

    ವಿವರಗಳ ಪ್ರಕಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇದರ ಸಲುವಾಗಿ ಮ್ಯಾಕ್ರನ್ ಗುರುವಾರ ಭಾರತ ತಲುಪಲಿದ್ದಾರೆ. ಜೈಪುರ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಮತ್ತು ಇತರ ಅಧಿಕಾರಿಗಳು ಫ್ರಾನ್ಸ್ ಅಧ್ಯಕ್ಷರಿಗೆ ಭವ್ಯ ಸ್ವಾಗತ ನೀಡಲಿದ್ದಾರೆ. ಆ ಬಳಿಕ ಮೋದಿ ಅವರೊಂದಿಗೆ ಜೈಪುರದ ವಿವಿಧ ಪ್ರವಾಸಿ ತಾಣಗಳಿಗೆ ಮ್ಯಾಕ್ರನ್ ಭೇಟಿ ನೀಡಲಿದ್ದಾರೆ. ಅಲ್ಲದೆ, ರಾಮ್‌ಬಾಗ್ ಅರಮನೆಯಲ್ಲಿ ಮ್ಯಾಕ್ರನ್‌ಗಾಗಿ ಖಾಸಗಿ ಭೋಜನ ಕೂಟ ಯೋಜಿಸಲಾಗಿದೆ. ಇಬ್ಬರೂ ನಾಯಕರು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ 16 ನೇ ಶತಮಾನದ ಅಮೆರ್ ಫೋರ್ಟ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.

    ರೋಡ್ ಶೋ: ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಅಮೇರ್ ಕೋಟೆಗೆ ಭೇಟಿ ನೀಡಿದ ಬಳಿಕ ಇಬ್ಬರು ನಾಯಕರು ಕಾಲ್ನಡಿಗೆಯಲ್ಲೇ ಟ್ರಿಪೋಲಿಯಾ ಗೇಟ್‌ಗೆ ತೆರಳಲಿದ್ದಾರೆ. ಇಬ್ಬರು ನಾಯಕರು ಜೈಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ. ಈ ಭೇಟಿಯ ನಂತರ ಮ್ಯಾಕ್ರನ್ ಗುರುವಾರ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿ ತಲುಪಲಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆ ಬಳಿಕ ರಾಷ್ಟ್ರಪತಿ ಭವನದಲ್ಲಿ ನಡೆಯುವ ‘ಅಟ್ ಹೋಮ್’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ರಾಜಸ್ಥಾನ ಭೇಟಿಗೆ ಮುನ್ನ ಜೈಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇನ್ನು ಈ ಎರಡು ದಿನಗಳ ಭೇಟಿಯಲ್ಲಿ ಮ್ಯಾಕ್ರನ್ ಭಾರತದೊಂದಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ವಿಶೇಷವಾಗಿ ರಕ್ಷಣಾ ಭದ್ರತೆ, ಶುದ್ಧ ಇಂಧನ, ವ್ಯಾಪಾರ, ಹೂಡಿಕೆ, ಹೊಸ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ. ಫ್ರಾನ್ಸ್ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಎರಡನೇ ಅತಿದೊಡ್ಡ ಮಿತ್ರ ರಾಷ್ಟ್ರವಾಗಿ ಮುಂದುವರೆದಿದೆ.

    ಇಳಿ ವಯಸ್ಸಿನಲ್ಲೂ ಪಿಂಚಣಿ ಹಣಕ್ಕಾಗಿ ವೃದ್ಧರ ಪರದಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts