More

    ‘ಭಾರತದೊಂದಿಗೆ ವಿವಾಧ ನಮಗೇ ಪ್ರಮಾದ’: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝುಗೆ ಪ್ರತಿಪಕ್ಷಗಳ ಎಚ್ಚರಿಕೆ!

    ಮಾಲೆ: ಚೀನಾಕ್ಕೆ ಹತ್ತಿರವಾಗಲು ಭಾರತ ವಿರೋಧಿ ಧೋರಣೆ ತಳೆದಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಸರ್ಕಾರಕ್ಕೆ ಮತ್ತೊಂದು ಶಾಕ್ ತಟ್ಟಿದೆ. ಮುಯಿಝು ವಿರುದ್ಧ ಸ್ವದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಲ್ಡೀವ್ಸ್‌ನಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

    ಇದನ್ನೂ ಓದಿ: ‘ನಾನು ನಿವೃತ್ತಿ ಪಡೆದಿಲ್ಲ…’ ವದಂತಿಗಳಿಗೆ ತೆರೆ ಎಳೆದ ಮೇರಿ ಕೋಮ್

    ಈ ವಿವಾದವು ಮಾಲ್ಡೀವ್ಸ್‌ನ ಅಭಿವೃದ್ಧಿಗೆ ಹಾನಿ ಮಾಡುತ್ತದೆ ಎಂದು ವಿರೋಧ ಪಕ್ಷವು ಮೊಯಿಝುಗೆ ಎಚ್ಚರಿಕೆ ನೀಡಿದೆ. 2 ದಿನಗಳ ಹಿಂದೆ ಮಾಲ್ಡೀವ್ಸ್ ಕರಾವಳಿಯಲ್ಲಿ ಚೀನಾದ ಬೇಹುಗಾರಿಕಾ ಹಡಗು ಪತ್ತೆಯಾಗಿತ್ತು. ಇದಕ್ಕೆ ಅನುಮತಿ ನೀಡಿದ ಸಮಯದಲ್ಲಿಯೇ ವಿರೋಧ ವ್ಯಕ್ತವಾಗಿರುವುದು ಗಮನಾರ್ಹ.

    ಮಾಲ್ಡೀವ್ಸ್‌ನ ಅಭಿವೃದ್ಧಿಯಲ್ಲಿ ದೀರ್ಘಕಾಲ ತೊಡಗಿಸಿಕೊಂಡಿರುವ ಮಿತ್ರರಾಷ್ಟ್ರಗಳನ್ನು ದೂರವಿಡುವುದು ದೇಶಕ್ಕೆ ಹಾನಿಕಾರಕ ಎಂದು ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಮತ್ತು ಡೆಮಾಕ್ರಟ್‌ಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

    ಭಾರತವನ್ನು ಬಹುಕಾಲದ ಸ್ನೇಹಿತ ಎಂದು ಬಣ್ಣಿಸುವ ಮೂಲಕ ಈ ಕಾಮೆಂಟ್‌ಗಳನ್ನು ಮಾಡಲಾಗಿದೆ. ಎಲ್ಲಾ ಬೆಳವಣಿಗೆಗಳು ಮಾಲ್ಡೀವ್ಸ್ ನ ಬದಲಾಗುತ್ತಿರುವ ‘ವಿದೇಶಿ ನೀತಿ ನಿಲುವನ್ನು’ ಎತ್ತಿ ತೋರಿಸಿದೆ.

    ಮಾಲ್ಡೀವ್ಸ್‌ನ ಭದ್ರತೆಗೆ ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆ ಬಹಳ ಮುಖ್ಯ ಎಂದು ಅವರು ನೆನಪಿಸಿದ್ದಾರೆ. ಎಂಡಿಪಿ ಅಧ್ಯಕ್ಷ ಫಯಾಜ್ ಇಸ್ಮಾಯಿಲ್, ಸಂಸತ್ತಿನ ಉಪ ಸ್ಪೀಕರ್ ಅಹ್ಮದ್ ಸಲೀಂ, ಪ್ರಜಾಪ್ರಭುತ್ವವಾದಿಗಳ ನಾಯಕ ಹಸನ್ ಲತೀಫ್, ಸಂಸದೀಯ ಗುಂಪಿನ ನಾಯಕ ಅಲಿ ಅಜೀಮ್ ಇತ್ತೀಚೆಗೆ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಮಾರ್ಚ್ 15 ರೊಳಗೆ ಭಾರತೀಯ ಪಡೆಗಳು ತಮ್ಮ ಪ್ರದೇಶದಿಂದ ಹಿಂದೆ ಸರಿಯಲು ಗಡುವನ್ನು ನಿಗದಿಪಡಿಸಿದಾಗ ವಿವಾದ ಪ್ರಾರಂಭವಾಯಿತು. ನಿರೀಕ್ಷೆಯಂತೆ ಈಗ ಭಾರತೀಯ ಸೇನೆಗೆ ಬದಲಾಗಿ ಚೀನಾ ಪಡೆಗಳು ಪ್ರವೇಶಿಸುತ್ತಿದ್ದು, ಆ ದೇಶದ ವಿರೋಧ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪ ಭೇಟಿಯನ್ನು ಇತ್ತೀಚೆಗೆ ಮಾಲ್ಡೀವ್ಸ್ ನ ಮೂವರು ಸಚಿವರು ಟೀಕಿಸಿದ ನಂತರ ವಿವಾದ ಉಲ್ಬಣಗೊಂಡಿತು. ಚೀನಾದ ಬೇಹುಗಾರಿಕಾ ನೌಕೆಗೆ ಮಾಲ್ಡೀವ್ಸ್‌ನ ಕಡಲತೀರದಲ್ಲಿ ಬಂದಿಳಿಯಲು ಅವಕಾಶ ಕೊಟ್ಟಿದ್ದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

    ಇಳಿ ವಯಸ್ಸಿನಲ್ಲೂ ಪಿಂಚಣಿ ಹಣಕ್ಕಾಗಿ ವೃದ್ಧರ ಪರದಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts