More

    ಭಾರತದ ಮೀರಾಬಾಯಿ ಚಾನುಗೆ ದಕ್ಕಬಹುದೇ ಚಿನ್ನ?!

    ಟೋಕಿಯೋ : ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರಿಗೆ ಚಿನ್ನದ ಪದಕವೇ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ, ವೇಯ್ಟ್​ ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಚಾನು ಅವರನ್ನು ಮೀರಿಸಿ ಮೊದಲ ಸ್ಥಾನ ಪಡೆದಿದ್ದ ಚೀನಾದ ಜಿಹುಯಿ ಹೌ ಅವರನ್ನು ಇಂದು ಎರಡನೇ ಡೋಪಿಂಗ್ ಪರೀಕ್ಷೆಗೆ ಒಡ್ಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

    ಜುಲೈ 24 ರಂದು ನಡೆದ ಮಹಿಳೆಯರ 49 ಕೆಜಿ ವೇಯ್ಟ್​ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚೀನಾದ ಹೌ, 210 ಕೆಜಿ ಭಾರ ಎತ್ತಿ ಮೊದಲ ಸ್ಥಾನ ಪಡೆದಿದ್ದರು. ಕ್ರೀನ್ ಅಂಡ್​ ಜರ್ಕ್​ ವಿಶ್ವ ದಾಖಲೆ ಹೊಂದಿರುವ ಚಾನು, 202 ಕೆಜಿ ಭಾರ ಎತ್ತಿ ಎರಡನೇ ಸ್ಥಾನ ಗಳಿಸಿದ್ದರು. ಇಂಡೋನೇಷಿಯಾದ ವಿಂಡಿ ಕಾಂಟಿಕ ಅವರು 194 ಕೆಜಿ ಭಾರ ಎತ್ತಿ ಕಂಚಿನ ಪದಕ ಗಳಿಸಿದ್ದರು.

    ಇದನ್ನೂ ಓದಿ: ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

    ದೈಹಿಕ ಪರೀಕ್ಷೆಯಲ್ಲಿ ಹೌ ವಿಷಯದಲ್ಲಿ ಕೆಲವು ಅಡ್ಡ ವಿಶ್ಲೇಷಣೆ ಬಂದಿರುವ ಹಿನ್ನೆಲೆಯಲ್ಲಿ ಅವರ ರಕ್ತದ ಸ್ಯಾಂಪಲ್​ಅನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಅವರು ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿರುವ ಬಗ್ಗೆ ಆ್ಯಂಟಿ ಡೋಪಿಂಗ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೇ ಎಂದೂ ಪರಿಶೀಲಿಸಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. (ಏಜೆನ್ಸೀಸ್)

    ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

    ಟ್ರ್ಯಾಕ್ಟರ್ ಏರಿ ಸಂಸತ್ತಿಗೆ ಬಂದ ರಾಹುಲ್ ಗಾಂಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts