More

    ಮಾ. 15ರೊಳಗೆ ಸಾಲ ಮರುಪಾವತಿಸಿ

    ಬ್ಯಾಡಗಿ: ಪಿಕಾರ್ಡ್ (ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ನಲ್ಲಿ ಸಾಲ ಪಡೆದ ಸುಸ್ತಿದಾರರು ಮಾ. 15ರೊಳಗೆ ಸಾಲ ಮರುಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ಸಹಕಾರಿ ಸಂಘಗಳ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಗೂಳೇರ ತಿಳಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3-4 ವರ್ಷಗಳ ಹಿಂದೆ ವಿವಿಧ ಯೋಜನೆಗಳಡಿ ಸಾಲ ಪಡೆದ ಬಹುತೇಕರು ಸಾಲ ಮರುಪಾವತಿ ಮಾಡಿಲ್ಲ. ಇದರಿಂದ ಬ್ಯಾಂಕ್ ನಷ್ಟದ ಹಾದಿಯಲ್ಲಿದೆ. ಸುಸ್ತಿದಾರರ ಪಟ್ಟಿಯಲ್ಲಿ ಕೃಷಿಗಿಂತ ಕೃಷಿಯೇತರ ಹೆಚ್ಚಿನ ಆದಾಯ, ಆದಾಯ ತೆರಿಗೆ ಪಾವತಿ, ಕೃಷಿ ಭೂಮಿ ಗ್ರಾಮೀಣ ಪ್ರದೇಶದಲ್ಲಿದ್ದರೂ ಪಟ್ಟಣಗಳಲ್ಲಿ ಸ್ವಂತ ಮನೆ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು, ನಾಲ್ಕು ಚಕ್ರದ ವಾಹನ ಹೊಂದಿರುವ ಸಾಲಗಾರರು ಕಡ್ಡಾಯವಾಗಿ ಸಾಲ ತುಂಬಬೇಕಿದೆ. ಈ ಕುರಿತು ಎಲ್ಲ ಆಡಳಿತ ಮಂಡಳಿ, ಸಹಕಾರಿ ಸಂಘ, ಬ್ಯಾಂಕ್ ಸಿಬ್ಬಂದಿ, ಸಂಬಂಧಿಸಿದವರಿಗೆ ರಾಜ್ಯ ವ್ಯವಸ್ಥಾಪಕ ಮಂಡಳಿಯು ದಾವೆ ಮತ್ತು ಇ.ಪಿ. ದಾಖಲಿಸಲು ಸೂಚಿಸಿದೆ. ಬ್ಯಾಂಕ್​ಗಳಲ್ಲಿ ವ್ಯವಹಾರ ಮಾಡುವ ರೈತರ ನಡುವೆ ಶಿಸ್ತುಬದ್ಧ ವ್ಯವಹಾರ ನಡೆದಲ್ಲಿ ಅನುಕೂಲವಾಗಲಿದೆ ಎಂದರು.

    ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ನ ಅಭಿವೃದ್ಧಿ, ಬೆಳವಣಿಗೆಯಲ್ಲಿ ರೈತರ ಸಹಕಾರ ಮುಖ್ಯವಾಗಿದೆ. ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲಾಗುತ್ತಿದೆ. ಸಕಾಲದಲ್ಲಿ ಸಾಲದ ಕಂತು ತುಂಬಿದರೆ ಬಡ್ಡಿ ಸಹಾಯಧನದ ಲಾಭ ದೊರಕಲಿದೆ. ಯಾವುದೇ ಆರ್ಥಿಕ ಸಂಸ್ಥೆ, ಸಂಘಗಳು ಸಾಲ ಮರುಪಾವತಿ ಮೇಲೆ ಅವಲಂಬಿತವಾಗಿರುತ್ತವೆ ಎಂದರು.

    ಬ್ಯಾಂಕ್ ಉಪಾಧ್ಯಕ್ಷ ಜಯಪ್ಪ ಎಲಿ, ಮಹಾದೇವಪ್ಪ ಶಿಡೇನೂರು, ಮುರಡೆಪ್ಪ ಹೆಡಿಯಾಲ, ಮಾಜಿ ಸದಸ್ಯರಾದ ಶಿವಯೋಗಿ ಶಿರೂರು, ಕೆಂಪೇಗೌಡ ಪಾಟೀಲ, ವ್ಯವಸ್ಥಾಪಕಿ ಸರ್ವಮಂಗಳಾ ಕೆ., ಎಸ್.ಎಸ್. ಕೋರಿಕೊಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts