More

  ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿ

  ಲಿಂಗಸುಗೂರು: ಪಟ್ಟಣದ ರೇಣುಕಾ ನಗರದ ರೇಣುಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಬನ್ನಿ ಮಂಟಪದಿಂದ ರೇಣುಕಾದೇವಿ ದೇವಸ್ಥಾನದವರೆಗೆ ಕುಂಭ-ಕಳಸ, ವಾದ್ಯಮೇಳದೊಂದಿಗೆ ರೇಣುಕಾದೇವಿಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

  ಶುಕ್ರವಾರ ರಾತ್ರಿ ಮಹಾಗಣಪತಿ ಹಾಗೂ ನಾಗದೇವತೆಗೆ ರುದ್ರಾಭಿಷೇಕ, ಡೊಳ್ಳು ಮತ್ತು ಜೋಗತಿಯರಿಂದ ಗೀತ ಗಾಯನ ಕಾರ್ಯಕ್ರಮ ನಡೆದವು. ಶನಿವಾರ ಬೆಳಗ್ಗೆ ರೇಣುಕಾ ಯಲ್ಲಮ್ಮ ದೇವಿಗೆ ರುದ್ರಾಭಿಷೇಕ, ಷಟ್‌ಸ್ಥಲ ಧ್ವಜಾರೋಹಣ, ಗಂಗಾಸ್ನಾನ, ಕಲಶಾರೋಹಣ, ಕುಂಭಾಭಿಷೇಕ, ಮುತ್ತೈದೆಯರಿಗೆ ಉಡಿ ತುಂಬುವುದು, ಮಹಾಮಂಗಳಾರತಿ, ಮಹಾಪ್ರಸಾದ ಏರ್ಪಡಿಸಲಾಗಿತ್ತು.

  ಪ್ರಮುಖರಾದ ನಾಗರಾಜ ಅಸ್ಕಿಹಾಳ, ಬೀರಪ್ಪ ಜಗ್ಗಲ್, ಬಸವರಾಜ ಮರೋಳ, ನಾಗರಾಜ ಗಸ್ತಿ, ಪರಶುರಾಮ ಕೆಂಭಾವಿ, ಶರಣಬಸವ ಗುತ್ತೇದಾರ, ಮುರಳೀಧರ, ತೇಜಸ್ವಿನಿ ಬಾಳೇಗೌಡ, ವೀಣಾ ಮೇದಿನಾಪುರ, ಭಾರತಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts