More

    ಮಗಳಿಗೆಂದು ಧಾರ್ಮಿಕ ಗುರುವನ್ನು ಮನೆಗೆ ಕರೆತಂದ ಅಮ್ಮ; ಕೆಲವೇ ತಿಂಗಳಲ್ಲಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಕುಟುಂಬ

    ಇಸ್ಲಾಮಾಬಾದ್​: ಮುದ್ದಾಗಿ ಸಾಕಿರುವ ಮಗಳಿಗೆ ಧಾರ್ಮಿಕ ಶಿಕ್ಷಣವೂ ಸಗಲಿ ಎನ್ನುವ ಕಾರಣಕ್ಕೆ ತನ್ನ ಮನೆಗೇ ಧಾರ್ಮಿಕ ಗುರುವನ್ನು ಕರೆ ತಂದ ತಾಯಿಯೊಬ್ಬಳು ಇದೀಗ ಕುಟುಂಬ ಸಮೇತ ಪೊಲೀಸ್​ ಠಾಣೆಯ ಮೆಟ್ಟಿಲೇರುವ ಸ್ಥಿತಿ ಬಂದಿದೆ. ಪಾಕಿಸ್ತಾನದಲ್ಲಿ ಇಂತದ್ದೊಂದು ಘಟನೆ ನಡೆದಿದೆ.

    ಪಾಕಿಸ್ತಾನದ ಗುಲ್ಶನ್ ಇ ಇಕ್ಬಾಲ್​ ಏರಿಯಾದ ಮಹಿಳೆ ತನ್ನ 13 ವರ್ಷದ ಮಗಳಿಗೆ ಧಾರ್ಮಿಕ ಶಿಕ್ಷಣ ಕಲಿಸಲೆಂದು ಓರ್ವ ಧಾರ್ಮಿಕ ಗುರುವಿನೊಂದಿಗೆ ಮಾತನಾಡಿದ್ದಳು. ಆತ ಮನೆಗೆ ಬಂದು ಶಿಕ್ಷಣ ನೀಡಲು ಒಪ್ಪಿದ್ದ. ಅದರಂತೆ ಮನೆಯಲ್ಲಿ ಬಾಲಕಿಯ ಕೊಠಡಿಯಲ್ಲೇ ಧಾರ್ಮಿಕ ಶಿಕ್ಷಣವನ್ನು ಆರಂಭಿಸಲಾಗಿತ್ತು. ಆದರೆ ಈ ಶಿಕ್ಷಣ ಆರಂಭವಾದ ಕೆಲವೇ ದಿನಗಳಲ್ಲಿ ಬಾಲಕಿ ತನ್ನ ಅಮ್ಮನಿಗೆ ದೂರು ನೀಡಿದ್ದಾಳೆ. ಆತ ನನ್ನ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ನನಗೇ ತೋರಿಸುತ್ತಾನೆ ಎಂದು ಹೇಳಿದ್ದಾಳೆ.

    ಇದಾದ ಕೆಲವೇ ದಿನಗಳಲ್ಲಿ ಆ ಧಾರ್ಮಿಕ ಗುರು ಬಾಲಕಿಯ ಅಮ್ಮನ ವಾಟ್ಸ್​ಆ್ಯಪ್​ಗೆ ಬಾಲಕಿಯ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾನೆ. ನನ್ನ ಬಯಕೆಗಳನ್ನು ನೀವು ಪೂರೈಸದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್​ ಮಾಡುವುದಾಗಿ ಬೆದರಿಸಿದ್ದಾನೆ. ಆತನ ಬೆದರಿಕೆಗೆ ಹೆದರಿದ ಕುಟುಂಬ ಸೀದಾ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ಆತನ ವಿರುದ್ಧ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. (ಪಿಟಿಐ​)

    ಮದುವೆಯಾಗೋಕೆ ವರ್ಜಿನಿಟಿ ಟೆಸ್ಟ್ ಮಾಡಿಸಲೇಬೇಕು! ಈ ರಾಷ್ಟ್ರದಲ್ಲಿದೆ ವಿಚಿತ್ರ ರೂಲ್ಸ್​

    ಕೊನೆಯುಸಿರೆಳೆವ ಮುನ್ನ ಐವರಿಗೆ ಹೊಸ ಜೀವನ ಕೊಟ್ಟ 20 ತಿಂಗಳ ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts