More

    ಧಾರ್ಮಿಕ ಕಾರ್ಯಕ್ರಮದಿಂದ ದೊರೆಯಲಿದೆ ಮನಶಾಂತಿ; ಶ್ರೀಹಿರೇಶಾಂತವೀರ ಸ್ವಾಮೀಜಿ ಹೇಳಿಕೆ

    ಅಳವಂಡಿ: ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ನಿಶ್ಚಿತ ಗುರಿಯತ್ತ ಸಾಗಲು ಶ್ರಮಿಸಬೇಕು. ಆಗ ಮಾತ್ರ ಸಾಧನೆಯ ಹಾದಿ ಸುಲಭವಾಗಲಿದೆ ಎಂದು ಹೂವಿನ ಹಡಗಲಿಯ ಶ್ರೀಹಿರೇಶಾಂತವೀರ ಸ್ವಾಮೀಜಿ ತಿಳಿಸಿದರು.

    ಸಮೀಪದ ಬಿಸರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮಹಾಮಂಗಲೋತ್ಸವ, ಧಾರ್ಮಿಕ ಸಭೆ, ಶ್ರೀ ಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ, ಕುಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನಶಾಂತಿಗೆ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದರು.

    ಜೀವನದಲ್ಲಿ ನಮ್ಮ ಶಕ್ತಿಯನ್ನು ಒಳ್ಳೆಯ ಆಲೋಚನೆ ಹಾಗೂ ಕೆಲಸಗಳಿಗೆ ವಿನಿಯೋಗಿಸಿದಾಗ ಸಮಾಜದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯ. ಯಶಸ್ಸು ಸಿಕ್ಕಾಗ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಎಲ್ಲರೊಡನೆ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಸಾಮೂಹಿಕ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದು ಹೇಳಿದರು.

    ಗದಗಿನ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳಿಂದ ಪ್ರವಚನ, ಶ್ರೀಶಿವಕುಮಾರ ಶಾಸ್ತ್ರಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ವೀರೇಶ ಹಿರೇಮಠ ಅವರ ತಬಲಾ ಸಾಥ್‌ನೊಂದಿಗೆ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು.

    ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಇಟಗಿ ಮೇಲುಗದ್ದಿಗೆ ಮಠದ ಶ್ರೀ ಗುರುಶಾಂತವೀರ ಸ್ವಾಮೀಜಿ, ಪ್ರಮುಖರಾದ ಮಂಜುಳಾ ಕರಡಿ, ಪಾರ್ವತಿ ನಾಗಪ್ಪ ಬಿಕನಳ್ಳಿ, ನಾಗರತ್ನಾ ಪಾಟೀಲ್, ನಿರ್ಮಲಾ ತಿಮ್ಮರಡ್ಡಿ, ಪ್ರೇಮಕ್ಕ ಸಸಿ, ಅಂದಪ್ಪ ಶಿಳ್ಳಿನ, ಮಹೇಂದ್ರಗೌಡ, ವೀರಣ್ಣ, ವೆಂಕರಡ್ಡಿ, ರಾಯರಡ್ಡಿ, ಅಜಯ್, ರುದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts