More

    ಕರೊನಾದಿಂದ ಮೃತಪಟ್ಟ 113 ಸಾರಿಗೆ ನೌಕರರ ಕುಟುಂಬಕ್ಕೆ ಪರಿಹಾರ

    ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡುವ ಕುರಿತಂತೆ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಂತೆ ನಾಲ್ಕೂ ನಿಗಮಗಳಿಂದ 113 ನೌಕರರು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಅದರಿಂದ ಸರ್ಕಾರಕ್ಕೆ 34 ಕೋಟಿ ರೂ. ಹೊರೆಬೀಳಲಿದೆ.
    ಕರೊನಾ ಸೋಂಕಿನ ನಡುವೆಯೂ ಕೆಲಸ ಮಾಡಿ ಸೋಂಕು ತಗುಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಳೆದ ಕೆಲದಿನಗಳ ಹಿಂದೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸರ್ಕಾರ ಭರವಸೆ ನೀಡಿತ್ತು. ಹೀಗಾಗಿ ಇದೀಗ ನಾಲ್ಕೂ ನಿಗಮಗಳಲ್ಲಿ ಕರೊನಾದಿಂದ ಮೃತಪಟ್ಟ ನೌಕರರ ಲೆಕ್ಕ ಹಾಕಲಾಗುತ್ತಿದ್ದು, ಈವರೆಗೆ 113 ನೌಕರರು ಸಾವನ್ನಪ್ಪಿರುವ ಕುರಿತು ಲೆಕ್ಕ ಹಾಕಲಾಗಿದೆ.
    34 ಕೋಟಿ ರೂ. ಪರಿಹಾರ:
    ಮೃತಪಟ್ಟ ನೌಕರರ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅದರಂತೆ 113 ನೌಕರರಿಗೆ ಒಟ್ಟು 33.90 ಕೋಟಿ ರೂ. ಪರಿಹಾರ ನೀಡಬೇಕಿದೆ. ಅಲ್ಲದೆ, ಈ ಪಟ್ಟಿಗೆ ಇನ್ನಷ್ಟು ನೌಕರರು ಸೇರ್ಪಡೆಯಾದರೆ, ಪರಿಹಾರದ ಮೊತ್ತ ಹೆಚ್ಚಲಿದೆ. ಅದನ್ನು ಸರ್ಕಾರದಿಂದಲೇ ಭರಿಸಬೇಕಿದ್ದು, ಹೀಗಾಗಿ ಪರಿಹಾರದ ಹಣ ಸರ್ಕಾರಕ್ಕೆ ಹೊರೆಯಾಗಲಿದೆ.
    ಕರೊನಾದಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಪರಿಹಾರ ನೀಡುವುದು ಸೇರಿ ಮುಷ್ಕರದ ವೇಳೆ ನೌಕರರು ಮುಂದಿಟ್ಟಿದ್ದ ಬೇಡಿಕೆಗಳ ಈಡೇರಿಸುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೌಕರ ಮುಖಂಡರ ಜತೆಗೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಮುಂದಿನ ತಿಂಗಳು ನಿಗಮಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನೌಕರ ಮುಖಂಡರಿಗೆ ತಿಳಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts