More

    ಪರಿಹಾರ ನಿಧಿಗೆ ಅರಿಹಂತ ಸಹಕಾರಿಯಿಂದ ನೆರವು

    ಬೋರಗಾಂವ: ಎಲ್ಲರ ಸಹಕಾರದಿಂದ ಮಾತ್ರ ಕರೊನಾ ಸೋಂಕನ್ನು ನಿಯಂತ್ರಿಸಲು ಸಾಧ್ಯ ಎಂದು ಪಿಕೆಪಿಎಸ್ ಚೇರ್ಮನ್, ಮುಖಂಡ ಉತ್ತಮ ಪಾಟೀಲ ಹೇಳಿದ್ದಾರೆ. ಗುರುವಾರ ಪಟ್ಟಣದ ಪಿಕೆಪಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾವಸಾಹೇಬ ಪಾಟೀಲ ಅವರ ಏ. 11ರ ಜನ್ಮದಿನದಂದು ಪ್ರತಿ ವರ್ಷ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಲಾಕ್‌ಡೌನ್ ಆದೇಶದಿಂದ ಈ ವರ್ಷ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕರೊನಾ ವಿರುದ್ಧದ ಹೋರಾಟಕ್ಕೆ ಅರಿಹಂತ ಸಂಸ್ಥೆಯಿಂದ 7,77,777 ರೂ. ನೆರವನ್ನು ಸಿಎಂ ಪರಿಹಾರ ನಿಧಿಗೆ ಶುಕ್ರವಾರ ಸಚಿವ ರಮೇಶ ಜಾರಕಿಹೊಳಿ ಅವರ ಮೂಲಕ ಹಸ್ತಾಂತರಿಸಲಾಗುವುದು ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್‌ಗೆ 1 ಲಕ್ಷ ರೂ., ಬೆಂಗಳೂರಿನ ರಾಜ್ಯ ಸೌಹಾರ್ದ ಫೆಡರೇಷನ್ ಸಂಸ್ಥೆಗೆ 1ಲಕ್ಷ ರೂ. ಹಾಗೂ ದಕ್ಷಿಣ ಭಾರತ ಜೈನ ಸಭೆಗೆ 77 ಸಾವಿರ ರೂ., ಹಾಗೂ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬೆಂಗಳೂರಿನ ಕೆಜೆಎ ಸಂಸ್ಥೆಗೆ 1 ಲಕ್ಷ ರೂ. ಹಾಗೂ ರಾಜ್ಯ ಸಹಕಾರಿ ಮಹಾಮಂಡಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಉತ್ತಮ ಪಾಟೀಲ ತಿಳಿಸಿದರು. ಉದ್ಯಮಿ ಅಭಿನಂದನ ಪಾಟೀಲ, ಸಂಸ್ಥೆ ಸಂಚಾಲಕ ಅಭಯ ಕರೋಲೆ, ಜಿಎಂ ಅಶೋಕ ಬಂಕಾಪುರೆ, ಪಿಕೆಪಿಎಸ್ ಸಿಇಒ ಆರ್.ಟಿ. ಚೌಗುಲೆ, ಉಪಾಧ್ಯಕ್ಷ ಬಾಳಾಸಾಬ ಸಾತಪುತೆ, ಪ್ರದೀಪ ಮಾಳಿ, ಸುಮೀತ ರೊಡ್ಡ, ತೈಮೂರ ಮುಜಾವರ, ಬಾಳಗೊಂಡ ಪಾಟೀಲ, ಸುರೇಶ ಬಂಕಾಪುರೆ, ಅಜೀತ ಕಾಂಬಳೆ, ರಾಜೇಂದ್ರ ಪಾಟೀಲ, ಪ್ರಕಾಶ ಜಂಗಟೆ, ಕಾಕಾಸಾಬ ಬೆಳ್ಳಂಕೆ, ರಾಕೇಶ ಇತರರು ಇದ್ದರು.

    ಆದರೆ, ಲಾಕ್‌ಡೌನ್ ಆದೇಶದಿಂದ ಈ ವರ್ಷ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕರೊನಾ ವಿರುದ್ಧದ ಹೋರಾಟಕ್ಕೆ ಅರಿಹಂತ ಸಂಸ್ಥೆಯಿಂದ 7,77,777 ರೂ. ನೆರವನ್ನು ಸಿಎಂ ಪರಿಹಾರ ನಿಧಿಗೆ ಶುಕ್ರವಾರ ಸಚಿವ ರಮೇಶ ಜಾರಕಿಹೊಳಿ ಅವರ ಮೂಲಕ ಹಸ್ತಾಂತರಿಸಲಾಗುವುದು ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್‌ಗೆ 1 ಲಕ್ಷ ರೂ., ಬೆಂಗಳೂರಿನ ರಾಜ್ಯ ಸೌಹಾರ್ದ ಫೆಡರೇಷನ್ ಸಂಸ್ಥೆಗೆ 1ಲಕ್ಷ ರೂ. ಹಾಗೂ ದಕ್ಷಿಣ ಭಾರತ ಜೈನ ಸಭೆಗೆ 77 ಸಾವಿರ ರೂ., ಹಾಗೂ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬೆಂಗಳೂರಿನ ಕೆಜೆಎ ಸಂಸ್ಥೆಗೆ 1 ಲಕ್ಷ ರೂ. ಹಾಗೂ ರಾಜ್ಯ ಸಹಕಾರಿ ಮಹಾಮಂಡಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಉತ್ತಮ ಪಾಟೀಲ ತಿಳಿಸಿದರು. ಉದ್ಯಮಿ ಅಭಿನಂದನ ಪಾಟೀಲ, ಸಂಸ್ಥೆ ಸಂಚಾಲಕ ಅಭಯ ಕರೋಲೆ, ಜಿಎಂ ಅಶೋಕ ಬಂಕಾಪುರೆ, ಪಿಕೆಪಿಎಸ್ ಸಿಇಒ ಆರ್.ಟಿ. ಚೌಗುಲೆ, ಉಪಾಧ್ಯಕ್ಷ ಬಾಳಾಸಾಬ ಸಾತಪುತೆ, ಪ್ರದೀಪ ಮಾಳಿ, ಸುಮೀತ ರೊಡ್ಡ, ತೈಮೂರ ಮುಜಾವರ, ಬಾಳಗೊಂಡ ಪಾಟೀಲ, ಸುರೇಶ ಬಂಕಾಪುರೆ, ಅಜೀತ ಕಾಂಬಳೆ, ರಾಜೇಂದ್ರ ಪಾಟೀಲ, ಪ್ರಕಾಶ ಜಂಗಟೆ, ಕಾಕಾಸಾಬ ಬೆಳ್ಳಂಕೆ, ರಾಕೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts