More

    ರಿಲಯನ್ಸ್​ಗೆ ಹೊಡೆದಿದೆ ಜಾಕ್​ಪಾಟ್​: ಪಾಲು ಖರೀದಿಗೆ ತಾ ಮುಂದು, ನಾ ಮುಂದು!

    ಮುಂಬೈ: ಎರಡು ವಾರಗಳ ಹಿಂದಷ್ಟೇ ಫೇಸ್​ಬುಕ್ ಸಂಸ್ಥೆ ಜಿಯೋದಲ್ಲಿ ಶೇ. 9.99ರಷ್ಟು ಪಾಲನ್ನು ಖರೀದಿಸುವ ಮೂಲಕ ದೊಡ್ಡ ಸುದ್ದಿ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಅಮೆರಿಕದ ಮತ್ತೊಂದು ಬೃಹತ್ ಕಂಪನಿ ಸಿಲ್ವರ್ ಲೇಕ್ ಕೂಡ ಜಿಯೋದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಈ ಮೂಲಕ ರಿಲಯನ್ಸ್​ ಇಂಡಸ್ಟ್ರಿಗೆ ಜಾಕ್​ಪಾಟ್​ ಹೊಡೆದಿದೆ.

    ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1.15 ರಷ್ಟು ಪಾಲನ್ನು ಖರೀದಿಸಿದೆ. ಶೇ.1 ಎಂದರೆ ಇದು ಸುಮಾರು 5.6 ಸಾವಿರ ಕೋಟಿಯ ಮೊತ್ತವಾಗಿದೆ. ಈ ಹಿಂದೆ ಫೇಸ್​ಬುಕ್​ 5.7 ಬಿಲಿಯನ್​ ಡಾಲರ್​ ಹಣವನ್ನು ಹೂಡಿಕೆ ಮಾಡಿತ್ತು. ಇದಕ್ಕೂ ಮುನ್ನ ಅಂದರೆ 2014ರಲ್ಲಿ ಫೇಸ್​ಬುಕ್​ 22 ಬಿಲಿಯನ್​ ಡಾಲರ್​ ಕೊಟ್ಟು ವಾಟ್ಸ್​ಆ್ಯಪ್​ ಖರೀದಿ ಮಾಡಿತ್ತು. ಇದೇ ಬೃಹತ್​ ದೊಡ್ಡ ಮೊತ್ತ ಎಂದು ಬಿಂಬಿಸಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿಗೆ ಮೊತ್ತವನ್ನು ರಿಲಯನ್ಸ್​ನಲ್ಲಿ ಫೇಸ್​ಬುಕ್​ ಹೂಡಿಕೆ ಮಾಡಿದೆ.

    ಇದನ್ನೂ ಓದಿ: ಮದುವೆಯಾಗುವಂತೆ ಅಪ್ಪ-ಅಮ್ಮ ಚಿತ್ರಹಿಂಸೆ ನೀಡುತ್ತಿದ್ದಾರೆ… ದಯವಿಟ್ಟು ನನ್ನನ್ನು ಕಾಪಾಡಿ…

    ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಭಾರಿ ಮುನ್ನಡೆಯಲ್ಲಿ ಇರುವ ಹಿನ್ನೆಲೆಯಲ್ಲಿ ವಿಶ್ವದ ಪ್ರತಿಷ್ಠಿತ ಕಂಪನಿಗಳ ಕಣ್ಣು ಜಿಯೋದತ್ತ ಹೊರಳುತ್ತಿವೆ.

    ಲಾಕ್​ಡೌನ್​ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಗಳಾಗುತ್ತಿರುವುದು ಗಮನಾರ್ಹ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಅಗತ್ಯವಿದೆ. ದೇಶದ ಮೂಲೆ ಮೂಲೆಯಲ್ಲೂ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ. ಈ ದೃಷ್ಟಿಯಿಂದ ಜಿಯೋದಲ್ಲಿ ವಿದೇಶೀ ಸಂಸ್ಥೆಗಳು ಹೂಡಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ತಜ್ಱರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts