More

    ವೈಫೈ ಮೂಲಕ ವಿಡಿಯೋ, ವಾಯ್ಸ್ ಕಾಲಿಂಗ್ ಸೌಲಭ್ಯ ಅನಾವರಣಗೊಳಿಸಿದ ರಿಲಯನ್ಸ್ ಜಿಯೋ

    ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಟೆಕ್ನಾಲಜಿ ಬಳಕೆ ಕ್ಷಿಪ್ರಗತಿಯಲ್ಲಿ ಆಗುತ್ತಿದ್ದು, ರಿಲಯನ್ಸ್ ಜಿಯೋ ವೈಫೈ ಮೂಲಕ ವಿಡಿಯೋ, ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಬುಧವಾರ ಗ್ರಾಹಕರಿಗೆ ಪರಿಚಯಿಸಿದೆ.

    ಮನೆ ಅಥವಾ ಕಚೇರಿಯಲ್ಲಿ ಇರುವಾಗ ಗ್ರಾಹಕರು ವೈಫೈ ಮೂಲಕ ಕರೆ ಮಾಡಲು ಅವಕಾಶ ನೀಡುವ ಸೌಲಭ್ಯ ಇದಾಗಿದೆ. ಈ ಮೂಲಕ ಗ್ರಾಹಕರು ತಮ್ಮ ಎಲ್​ಟಿಇ ಮೊಬೈಲ್​ನಿಂದ ವೈಫೈಗೆ ಸ್ವಿಚ್​ ಆಗಿ ಕರೆ ಮಾಡಬಹುದಾಗಿದೆ. ಜನವರಿ 7ರಿಂದ 16ರ ಒಳಗಾಗಿ ದೇಶಾದ್ಯಂತ ಇದು ಗ್ರಾಹಕರಿಗೆ ಸಿಗಲಿದೆ.

    ಈ ಸೇವೆಯು ಉಚಿತವಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಇದು ಪ್ರಾಯೋಗಿಕವಾಗಿ ಚಾಲ್ತಿಯಲ್ಲಿತ್ತು. ಗ್ರಾಹಕರು ವೈಫೈ ಸಂಪರ್ಕವನ್ನು ಜಿಯೋ ವೈಫೈ ವಿಡಿಯೋ ಅಥವಾ ವಾಯ್ಸ್ ಕರೆಗೆ ಬಳಸಬಹುದು. ಸದ್ಯ ಜಿಯೋ ಗ್ರಾಹಕರಿಗೆ ಪ್ರತಿ ತಿಂಗಳೂ 900ಕ್ಕೂ ಹೆಚ್ಚು ನಿಮಿಷಗಳನ್ನು ವಾಯ್ಸ್ ಕರೆಗಾಗಿ ನೀಡಲಾಗುತ್ತಿದೆ. ಗ್ರಾಹಕರ ಜಾಲ ಬೆಳೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಾಯ್ಸ್ ಕರೆ ವಿಭಾಗದಲ್ಲಿ ಜಿಯೋ ಒದಗಿಸಿರುವ VoLTE network ದೇಶಕ್ಕೆ ಮೊದಲನೇಯದು ಎಂದು ರಿಲಯನ್ಸ್ ಜಿಯೋದ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ. (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts