More

    ಕರೊನಾ ಸಂಕಷ್ಟ ದೂರ ಮಾಡಲು ಕೈಜೋಡಿಸಿದ ರಿಲಯನ್ಸ್​ ಫೌಂಡೇಶನ್​

    ಮಹಾಮಾರಿ ಕರೊನಾದಂತಹ ಸಂಕಷ್ಟ ಸಮಯದಲ್ಲಿ ದೇಶದ ಒಳಿತಿಗಾಗಿ ತನು, ಮನ, ಧನ ಅರ್ಪಿಸಿದ ಪ್ರತಿಯೊಬ್ಬ ಭಾರತೀಯನ ಉತ್ಸಾಹಕ್ಕೆ ನೀತಾ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್​ ಫೌಂಡೇಶನ್​ ಕೂಡ ತನ್ನ ಹಲವು ಉಪಕ್ರಮಗಳ ಮೂಲಕ ಕೈಜೋಡಿಸಿದೆ.

    ಹಾಡಿನ ಸಂದೇಶ ಹೊತ್ತ ವಿಡಿಯೋವೊಂದನ್ನು ರಿಲಯನ್ಸ್​ ಫೌಂಡೇಶನ್ ಬಿಡುಗಡೆ ಮಾಡಿದ್ದು,​ ವಿಶಾಲ್​ ಮಿಶ್ರಾ ಎಂಬುವರು ಸಂಗೀತದ ಜತೆಗೆ ಧ್ವನಿಯನ್ನು ನೀಡಿದ್ದಾರೆ. ಗಾಯನದ ಮೂಲಕ ವಿಡಿಯೋದಲ್ಲಿ ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ರಿಲಯನ್ಸ್​ ಫೌಂಡೇಶನ್​ ಜನತೆಯ ಬೆನ್ನಿಗೆ ನಿಂತಿದ್ದನ್ನು ಕಣ್ಣಿಗೆ ಕಟ್ಟಿಕೊಡಲಾಗಿದೆ.

    ಕೋವಿಡ್​-19 ಭಾರತವನ್ನು ಸ್ತಬ್ಧವಾಗಿಸಿದೆ ಹೊರತು ನಮ್ಮ ಉತ್ಸಾಹವನ್ನಲ್ಲ ಎಂದು ಸಂದೇಶದೊಂದಿಗೆ ಆರಂಭವಾಗುವ ಹಾಡಿನಲ್ಲಿ ರಿಲಯನ್ಸ್​ ಫೌಂಡೇಶನ್​ ಮಾನವೀಯ ಕಾರ್ಯಗಳನ್ನು ವಿವರಿಸಲಾಗಿದೆ.

    ತಾಯ್ನಾಡಿಗಾಗಿ ರಿಯಲನ್ಸ್​ ತಂಡವು ಏನೇನು ಸಾಧ್ಯವೋ ಎಲ್ಲವನ್ನು ಮಾಡುತ್ತಿದೆ. ರಿಲಯನ್ಸ್​ ಸೈನ್ಸ್​ ಟೀಮ್​ ಭಾರತದ ಅತಿದೊಡ್ಡ ಟೆಸ್ಟಿಂಗ್​ ಲ್ಯಾಬ್​ ಅಳವಡಿಸಿದ್ದು, ದಿನವೊಂದಕ್ಕೆ 3500 ಪರೀಕ್ಷೆಗಳನ್ನು ನಡೆಸುತ್ತಿದೆ. ಭಾರತದ ಮೊದಲ ಕೋವಿಡ್​ 19 ವಿಶೇಷ ಆಸ್ಪತ್ರೆಯನ್ನು ಅಳವಡಿಸಿದ್ದೇವೆ. ಹೆಚ್ಚುವರಿ ಸೌಲಭ್ಯವಾಗಿ 2000 ಬೆಡ್​ಗಳನ್ನು ಅಳವಡಿಸಲಾಗಿದೆ. ಗುಣಮುಖರಾದ ರೋಗಿಗಳ ಹಾಗೂ ಅವರ ಕುಟುಂಬದ ಕೃತಜ್ಞತೆಗಳಿಂದ ನಮ್ಮ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕದೆ. ವಿಶೇಷ ಕಾರ್ಖಾನೆಯಲ್ಲಿ 100,000 ಪಿಪಿಇ ಮತ್ತು ಮಾಸ್ಕ್​ಗಳನ್ನು ತಯಾರಿಸಲಾಗುತ್ತಿದೆ ಎಂದು ದೃಶ್ಯ ಸಹಿತ ತಿಳಿಸಲಾಗಿದೆ.

    ಇಷ್ಟೇ ಅಲ್ಲದೆ, ಕರೊನಾ ವಾರಿಯರ್ಸ್​ಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ಶ್ರಮಿಕ ವರ್ಗದವರಿಗೆ ರೇಷನ್ ಹಾಗೂ ರಿಮೋಟ್​ ಕಂಟ್ರೋಲ್​ ಏರಿಯಾಗಳಿಗೂ ಅಗತ್ಯ ಸೌಲಭ್ಯ​ ಮತ್ತು ಜಾನುವಾರುಗಳಿಗೆ ಮೇವು ಸೇರಿದಂತೆ ಅನೇಕ ಸೌಲಭ್ಯಗಳನ್ನು ರಿಲಯನ್ಸ್​ ಫೌಂಡೇಶನ್​ ಒದಗಿಸುವ ಮೂಲ ಕೋವಿಡ್​ ಹೋರಾಟದಲ್ಲಿ ಭಾರತೀಯರ ಬೆನ್ನಿಗೆ ನಿಂತಿದೆ.

    ಕರೊನಾ ಸಂಕಷ್ಟ ದೂರ ಮಾಡಲು ಕೈಜೋಡಿಸಿದ ರಿಲಯನ್ಸ್​ ಫೌಂಡೇಶನ್​

    ಮಹಾಮಾರಿ ಕರೊನಾದಂತಹ ಸಂಕಷ್ಟ ಸಮಯದಲ್ಲಿ ದೇಶದ ಒಳಿತಿಗಾಗಿ ತನು, ಮನ, ಧನ ಅರ್ಪಿಸಿದ ಪ್ರತಿಯೊಬ್ಬ ಭಾರತೀಯನ ಉತ್ಸಾಹಕ್ಕೆ ನೀತಾ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್​ ಫೌಂಡೇಶನ್​ ಕೂಡ ತನ್ನ ಹಲವು ಉಪಕ್ರಮಗಳ ಮೂಲಕ ಕೈಜೋಡಿಸಿದೆ. ಅದರ ವಿವರಗಳನ್ನುಳ್ಳ ವಿಡಿಯೋ ಇಲ್ಲಿದೆ.#RelianceFoundation #MukeshAmbani #NitaAmbani #Coronavirus #Pandemic

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 16, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts