More

    ‘ಪವರ್​ಫುಲ್​ ವುಮೆನ್​​ 2021’ ಪಟ್ಟಿಯಲ್ಲಿ ನೀತಾ ಅಂಬಾನಿ ಹೆಸರು; ಕರೊನಾ ಸಂಕಷ್ಟಕ್ಕೆ ಮಿಡಿದ ಹೃದಯಕ್ಕೆ ಸಂದ ಗೌರವ

    ನವದೆಹಲಿ: ಸದಾ ಒಂದಿಲ್ಲೊಂದು ಸಾಮಾಜಿಕ ಕಳಕಳಿಯುಳ್ಳ ಮಹತ್ತರ ಕೆಲಸಗಳಲ್ಲಿ ತೊಡಗಿಕೊಂಡಿರುವ ರಿಲಯನ್ಸ್​ ಫೌಂಡೇಶನ್​ನ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರ ಹೆಸರು ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

    ಫಾರ್ಚೂನ್​ ಇಂಡಿಯಾದ ’50 ಮೋಸ್ಟ್​ ಪವರ್​ಫುಲ್​ ವುಮೆನ್​​ 2021′ ಪಟ್ಟಿಯಲ್ಲಿ ನೀತಾ ಅಂಬಾನಿ ಅವರ ಹೆಸರು ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಕೋವಿಡ್​ನಿಂದ ದೇಶದಲ್ಲಿ ಸಂಭವಿಸಿದ ಆರೋಗ್ಯ ತುರ್ತುಪರಿಸ್ಥಿತಿಯ ವೇಳೆ ರಿಲಯನ್ಸ್ ಪ್ರತಿಷ್ಠಾನದ ಮೂಲಕ ಬಡವರ ಹಸಿವು ನೀಗಿಸಿದ್ದು ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಸೂಕ್ತ ಕಾಲಕ್ಕೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ ಅವರನ್ನು ‘ರಿಲಯನ್ಸ್​​ನ ಗುಡ್​ವಿಲ್ ಅಂಬಾಸಿಡರ್​’ ಎಂದು ವರ್ಣಿಸಲಾಗಿದೆ.

    ಏಪ್ರಿಲ್​ 2020ರಲ್ಲಿ ಭಾರತ ಕರೊನಾ ಮಹಾಮಾರಿಯ ಹೊಡೆತಕ್ಕೆ ಸಿಕ್ಕಾಗ, ಬಡಜನರಿಗೆ ಮುಂಬೈನಲ್ಲಿ ಎಚ್​.ಎನ್​. ರಿಲಯನ್ಸ್​ ಫೌಂಡೇಶನ್ ಹಾಸ್ಪಿಟಲ್​ನ ಮೂಲಕ ಬೃಹನ್​ಮುಂಬೈ ನಗರ ಪಾಲಿಕೆ ಸಹಯೋಗದಲ್ಲಿ ಕೋವಿಡ್​ 19 ಚಿಕಿತ್ಸೆಗೇ ಮೀಸಲಾದ ಮೊದಲ 250-ಬೆಡ್ ಆಸ್ಪತ್ರೆಯನ್ನು ಆರಂಭಿಸಿದರು. ಕ್ರಮೇಣ ಇಲ್ಲಿ ಅಬಾಧಿತ ಆಕ್ಸಿಜನ್​ ಪೂರೈಕೆಯುಳ್ಳ 2000 ಬೆಡ್​​ಗಳ ವ್ಯವಸ್ಥೆ ಮಾಡಿದರು. ಇನ್ನು, ನಿತ್ಯ 15,000 ಪರೀಕ್ಷೆಗಳ ಸಾಮರ್ಥ್ಯ ಹೊಂದಿದ ಕರೊನಾ ಪರೀಕ್ಷಾ ಕೇಂದ್ರದ ಸ್ಥಾಪನೆ, ಜಾಮ್​ನಗರದಲ್ಲಿ ದೇಶದ ಅತಿದೊಡ್ಡ ಮೆಡಿಕಲ್ ಗ್ರೇಡ್​ ಲಿಕ್ವಿಡ್ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಮತ್ತು ಪ್ರತಿದಿನ 1 ಲಕ್ಷ ಪಿಪಿಇ ಮತ್ತು ಎನ್​95 ಮಾಸ್ಕ್​ಗಳ ಉತ್ಪಾದನಾ ಘಟಕ ಮುಂತಾದ ಕಾರ್ಯಗಳ ಮೂಲಕ ಅನಿಶ್ಚಿತತೆಯ ಸಮಯದಲ್ಲಿ ದೃಢ ನಿರ್ಧಾರಗಳ ಮೂಲಕ ದೇಶಕ್ಕೆ ಬೆಂಬಲವಾಗಿ ನಿಂತರು. ಇದೇ ವರ್ಷ 20 ಪ್ರಾಣಿಗಳ ಆಂಬುಲೆನ್ಸ್​​​ಗಳಿಗೂ ಚಾಲನೆ ನೀಡಿ ದನಕರುಗಳಿಗೆ ಮೇವು ಮತ್ತು ಚಿಕಿತ್ಸೆಯ ಅಗತ್ಯವಿದ್ದ ಪ್ರಾಣಿಗಳಿಗೆ ಆರೈಕೆ ಒದಗಿಸಿದರು.

    ರಿಲಯನ್ಸ್​ ಫೌಂಡೇಶನ್​ನಿಂದ ಈವರೆಗೆ 25 ಲಕ್ಷ ಜನರಿಗೆ ಕರೊನಾ ಲಸಿಕೆ ನೀಡಲಾಗಿದ್ದು, ದೇಶದ 100 ಜಿಲ್ಲೆಗಳ ಮುಂಚೂಣಿ ಕಾರ್ಯಕರ್ತರು ಮತ್ತು ದಿನಗೂಲಿ ನೌಕರರಿಗೆ 8.5 ಕೋಟಿಗೂ ಹೆಚ್ಚು ಫ್ರೀ ಮೀಲ್​ಗಳನ್ನು ಒದಗಿಸಲಾಗಿದೆ. ಮಹಿಳೆಯರಿಗೇ ಮೀಸಲಾದ ಹರ್​ಸರ್ಕಲ್​ ಆ್ಯಪ್​ನ ಆರಂಭ ಸೇರಿದಂತೆ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ತ್ರೀಸಮೂಹಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿರುವ ನೀತಾ ಅಂಬಾನಿ ಅವರ ಸಾಧನೆಗೆ ಸೂಕ್ತ ಮನ್ನಣೆ ಸಿಕ್ಕಿದೆ.

    ವಿವಾದಿತ ಕೃಷಿ ಕಾಯ್ದೆಗಳು ರದ್ದು; ಗದ್ದಲದ ನಡುವೆ ಮಸೂದೆ ಅಂಗೀಕರಿಸಿದ ಸರ್ಕಾರ

    ಮಹಿಳಾ ಸದಸ್ಯರೊಂದಿಗೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೆಲ್ಫಿ! ಶೀರ್ಷಿಕೆ ನೋಡಿ ಸಿಟ್ಟಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts