More

    ರೆಗ್ಯುಲರ್ ಆಗಲಿ ಯಶವಂತಪುರ ರೈಲು, ರಾಜ್ಯ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರ ಸ್ವಾಮಿ ಒತ್ತಾಯ

    ಕೊಟ್ಟೂರು: ವಿಜಯಪುರ-ಕೊಟ್ಟೂರು-ಯಶವಂತಪುರ ರೈಲನ್ನು ರೆಗ್ಯುಲರ್ ರೈಲನ್ನಾಗಿ ಪರಿವರ್ತಿಸಬೇಕು. ಹೊಸಪೇಟೆಯಿಂದ ರೈಲು ರಾತ್ರಿ 9ಕ್ಕೆ ಬಿಟ್ಟರೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರ ಸ್ವಾಮಿ ಒತ್ತಾಯಿಸಿದರು.

    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ರೈಲ್ವೆ ಇಲಾಖೆ ತತ್ಕಾಲ್ ರೈಲು ಬಿಡುವ ಮೂಲಕ ಪ್ರಯಾಣಿಕರಿಗೆ ಮೋಸ ಮಾಡುತ್ತಿದೆ. ರೆಗ್ಯುಲರ್ ರೈಲಿಗಿಂತ ತತ್ಕಾಲ್ ರೈಲಿನ ದರ 150-200 ರೂ.ಗೆ ಹೆಚ್ಚಿದೆ. ಈ ರೈಲನ್ನು ಯಾವಾಗಬೇಕಾದರೂ ನಿಲ್ಲಿಸಬಹುದು. ರೆಗ್ಯುಲರ್ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯವಿದೆ. ಆದ್ದರಿಂದ ರಾಜ್ಯದಲ್ಲಿ ಸಂಚರಿಸುವ ಎಲ್ಲ ತತ್ಕ್ಕಾಲ್ ರೈಲುಗಳನ್ನು ರೆಗ್ಯುಲರ್ ಮಾಡಬೇಕು ಎಂದರು.

    ವಿಜಯಪುರ-ಕೊಟ್ಟೂರು-ಯಶವಂತಪುರ ನೂತನ ರೈಲಿಗೆ ಚಾಲನೆ ನೀಡಿದ ದಿನವೇ ಬಳ್ಳಾರಿವರೆಗೆ ರೈಲು ಸಂಚಾರ ವಿಸ್ತರಿಸಲು ಮನವಿ ಮಾಡಲಾಗಿತ್ತು. ಇನ್ನೂ ಬೇಡಿಕೆ ಈಡೇರಿಲ್ಲ. ಈ ರೈಲನ್ನು ಗುಂತಕಲ್‌ವರೆಗೆ ವಿಸ್ತರಿಸಿದರೆ ಇಲ್ಲಿಂದ ಹೈದರಾಬಾದ್, ಚೆನ್ನೈ, ದೆಹಲಿ, ಮುಂಬೈಗೆ ಹೋಗಲು ಅನುಕೂಲವಾಗಲಿದೆ. ಯಶವಂತಪುರದಿಂದ ಮೆಜೆಸ್ಟಿಕ್ ಹೋಗಲು ಪ್ರಯಾಣಿಕರು ಬಸ್‌ಗೆ 18 ರೂ. ನೀಡಬೇಕು. ರೈಲನ್ನು ಮೈಸೂರಿಗೆ ವಿಸ್ತರಿಸಿದರೆ, ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಲಿದ್ದಾರೆ. ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ, ಬಳ್ಳಾರಿ ಜಿಲ್ಲಾ ರೈಲ್ವೆ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts