More

    ಪಿಎಲ್‌ಡಿ ಬ್ಯಾಂಕ್‌ಗಳನ್ನು ಸುಧಾರಣೆ ಮಾಡಿ

    ಕೋಲಾರ: ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ಪರಿಸ್ಥಿತಿಯನ್ನು ಸರಿಪಡಿಸಿಕೊಂಡು ಸುಧಾರಣೆಯಾಗದಿದ್ದರೆ ಮುಂದಿನ 10 ವರ್ಷಗಳಲ್ಲಿ ಮುಚ್ಚುವ ಸಾಧ್ಯತೆಗಳಿವೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ ಬ್ಯಾಂಕ್‌ಗಳ ಉಳಿವಿಗೆ ಕ್ರಮವಹಿಸಬೇಕು ಎಂದು ಪಿಎಲ್‌ಡಿ ಬ್ಯಾಂಕ್ ರಾಜ್ಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹೇಳಿದರು.

    ನಗರದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪಿಎಲ್‌ಡಿ ಬ್ಯಾಂಕ್ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಹುತೇಕ ಪಿಎಲ್‌ಡಿ ಬ್ಯಾಂಕ್‌ಗಳು ಆಕ್ಸಿಜನ್ ಹಾಕಿಕೊಂಡು ಉಸಿರಾಡುತ್ತಿವೆ. ಉಳಿವಿಗೆ ಶ್ರಮಿಸದಿದ್ದರೆ ತೊಂದರೆ ತಪ್ಪಿದಲ್ಲ ಎಂದರು.
    ಮಂಗಳೂರು ಭಾಗದಲ್ಲಿ ಪಿಎಲ್‌ಡಿ ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಸ್ಕಾರ್ಡ್ ಬ್ಯಾಂಕ್ ನೀಡುವ ಹಣಕ್ಕೆ ಕಾಯದೆ, ಸ್ವಂತ ಹಣದಲ್ಲಿ 3040 ಕೋಟಿ ರೂ. ಸಾಲ ನೀಡುತ್ತಿವೆ. ಅದೇ ವಾದರಿಯಲ್ಲಿ ಈ ಭಾಗದಲ್ಲಿಯೂ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕಿದೆ ಎಂದು ತಾಕೀತು ಮಾಡಿದರು.
    ಪಿಎಲ್‌ಡಿ ಬ್ಯಾಂಕಿನಲ್ಲಿ ಕೇವಲ ಸಾಲ ಕೊಡುವುದಕ್ಕೆ, ಮರುಪಾವತಿಗೆ ಸೀಮಿತವಾಗದೆ ಬಹುಪಯೋಗಿ ಕೇಂದ್ರವಾಗಿ ಕಾರ್ಯನಿರ್ವಹಿಸಬೇಕಿದ್ದು, ಅದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ರಾಜ್ಯದಲ್ಲೇ ಶ್ರಮಜೀವಿಗಳಾಗಿದ್ದಾರೆ. ಹೆಚ್ಚಿನ ಮಳೆಯಿಲ್ಲದಿದ್ದರೂ ಸ್ವಾಭಿವಾನಿಗಳಾಗಿ ದುಡಿಯುತ್ತಾರೆ. ವಾರುಕಟ್ಟೆಗೆ ಅನುಗುಣವಾಗಿ ವ್ಯವಸಾಯ ವಾಡುತ್ತಾರೆ. ವಾಣಿಜ್ಯ ಬೆಳೆಗಳಲ್ಲಿ ನಷ್ಟವಾದರೆ ಹೈನುಗಾರಿಕೆ, ಕುರಿಕೋಳಿ ಸಾಕಣೆ ಹೀಗೆ ಬೇರೆ ಬೇರೆ ಕೆಲಸಗಳಿಗೆ ಮುಂದಾಗುತ್ತಾರೆ. ಆದರೂ ಸಾಲ ಮರುಪಾವತಿಯಲ್ಲಿ ಹಿನ್ನಡೆ ಕಂಡುಬರುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಕೂಡಲೇ ವಸೂಲಾತಿಗೆ ಮುಂದಾಗಬೇಕು ಎಂದು ಸತೀಶ್ ಸೂಚಿಸಿದರು.

    ಚುನಾವಣೆಗಳ ಸಂದರ್ಭದಲ್ಲಿ ಸಾಲಮನ್ನಾ ವಿಚಾರವು ಹರಿದಾಡುವುದರಿಂದಾಗಿ ಅನೇಕರು ಸಾಲ ಮರುಪಾವತಿಸಲು ಹಿಂದೇಟು ಹಾಕುವುದು ಸಹಜ. ಹೀಗಾಗಿ ಸ್ಥಿತಿವಂತ ರೈತರನ್ನು ಮನವೊಲಿಸಿ ಆದಷ್ಟು ಬೇಗನೆ ಸಾಲ ಕಟ್ಟುವಂತೆ ವಾಡುವುದು ಬ್ಯಾಂಕ್ ಅಧಿಕಾರಿಗಳ ಜವಾಬ್ದಾರಿ ಎಂದು ಸತೀಶ್ ತಿಳಿಸಿದರು.

    ಆಡಳಿತ ಮಂಡಳಿಯವರು ಕೆಲವು ವರ್ಷಗಳು ವಾತ್ರ ಅಧಿಕಾರದಲ್ಲಿ ಇರುತ್ತಾರೆ. ಆದರೆ, ನಿರಂತರವಾಗಿ ರೈತರೊಂದಿಗೆ ಸಂಪರ್ಕದಲ್ಲಿರುವುದು ಅಧಿಕಾರಿಗಳು. ನಮ್ಮಲ್ಲಿಯೂ ಸಿಬ್ಬಂದಿ ಕೊರತೆ, ಗಣಕೀಕರಣ, ಸ್ಕಿಲ್ ಸಮಸ್ಯೆಗಳಿರುವುದು ನಿಜ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
    ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ವಾತನಾಡಿ, ಸರ್ಕಾರ, ನಬಾರ್ಡ್ ಹಣವನ್ನು ಕೊಡಲಿ, ಬಿಡಲಿ ನೀವು ಸ್ವಂತವಾಗಿ ಸಾಲ ನೀಡುವ ಮಟ್ಟಕ್ಕೆ ಅಭಿವೃದ್ಧಿಯಾಗಬೇಕು ಎಂದು ಸಲಹೆ ನೀಡಿದರು. ರಾಜ್ಯ ಕಾಸ್ಕಾರ್ಡ್ ಬ್ಯಾಂಕ್ ಕಾರ್ಯದರ್ಶಿ ಕುವಾರ್, ಕೋಲಾರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣೇಗೌಡ, ವಾಜಿ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಇದ್ದರು.

    ಕೋಟ್…
    ರಾಜ್ಯದಲ್ಲಿ ಕೆಲ ಪಿಎಲ್‌ಡಿ ಬ್ಯಾಂಕ್‌ಗಳು ಆಕ್ಸಿಜನ್ ಹಂತದಲ್ಲಿ ಉಸಿರಾಡುತ್ತಿವೆ. ಇದಕ್ಕೆ ಅಧಿಕಾರಿಗಳೇ ಕಾರಣವಾಗಿದ್ದು ಉಳಿಸಿ, ಬೆಳೆಸದಿದ್ದರೆ ಅಧಿಕಾರಿ, ಸಿಬ್ಬಂದಿ ಬೀದಿಪಾಲಾಗಬೇಕಾಗುತ್ತದೆ.
    ಸತೀಶ್, ಪಿಎಲ್‌ಡಿ ಬ್ಯಾಂಕ್ ರಾಜ್ಯ ವ್ಯವಸ್ಥಾಪಕ ನಿರ್ದೇಶಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts