More

    ಬಿಡದಿ ತ್ಯಾಜ್ಯ ವಿದ್ಯುತ್ ಘಟಕಕ್ಕೆ ಶಿಲಾನ್ಯಾಸ: ವರ್ಚುವಲ್ ವೇದಿಕೆ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ

    ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ಬಿಡದಿಯಲ್ಲಿ ನಿರ್ವಿುಸುತ್ತಿರುವ ಉದ್ದೇಶಿತ ತ್ಯಾಜ್ಯ ಆಧಾರಿತ ವಿದ್ಯುತ್ ಘಟಕಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

    ಗೃಹ ಕಚೇರಿ ‘ಕೃಷ್ಣಾ’ದಲ್ಲಿ ವರ್ಚುವಲ್ ವೇದಿಕೆ ಮೂಲಕ ಈ ಘಟಕ ನಿರ್ವಣಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿದ ಅವರು. ರಾಜಧಾನಿಯನ್ನು ಕಸ ಮುಕ್ತವಾಗಿಸುವುದಕ್ಕೆ ಈ ಸ್ಥಾವರ ಮಹತ್ತರ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಪ್ರತಿದಿನ 5 ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ವೈಜ್ಞಾನಿಕ ವಿಲೇವಾರಿಗಾಗಿ ಈ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿದಿನ ಉತ್ಪಾದನೆಯಲ್ಲಿ ಶೇ.25 ತ್ಯಾಜ್ಯ ಸಂಸ್ಕರಿಸಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ ಎಂದು ವಿವರಿಸಿದರು.

    ಈ ಘಟಕ ನಿರ್ವಣದಿಂದ ತ್ಯಾಜ್ಯ ವಿಲೇವಾರಿ ಜತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಪ್ರಧಾನಿ ಮೋದಿ ಪರಿಕಲ್ಪನೆಯ ‘ಸ್ವಾವಲಂಬಿ ಭಾರತ’ ಯೋಜನೆಯಂತೆ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಘಟಕದ ಕಾಮಗಾರಿಗೆ ಬಳಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಗಡಿ ಶಾಸಕ ಎ. ಮಂಜುನಾಥ್ ಮಾತನಾಡಿ, ಈ ಯೋಜನೆಯಡಿ ರಾಮನಗರ ಜಿಲ್ಲೆಯ ತ್ಯಾಜ್ಯವನ್ನೂ ಪೂರೈಸಲು ಅವಕಾಶ ಕಲ್ಪಿಸಬೇಕು. ಬೆಂಗಳೂರು ನಗರದ ಸುತ್ತಲಿನ ತಾಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ನೀಡಬೇಕು ಎಂದು ಕೋರಿದರು.

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಿಎಂ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಮಂಜುನಾಥ ಪ್ರಸಾದ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜು ಇದ್ದರು.

    ಬಿಡದಿಯಲ್ಲಿ ಕೆಪಿಸಿಎಲ್ ನಿರ್ವಿುಸಲಿರುವ ತ್ಯಾಜ್ಯ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಕ್ಕೆ ವರ್ಚುವಲ್ ವೇದಿಕೆ ಮೂಲಕ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಬುಧವಾರ ಶಿಲಾನ್ಯಾಸ ನೆರವೇರಿಸಿ, ಯೋಜನೆ ಕುರಿತು ಕಿರು ಹೊತ್ತಗೆ ಬಿಡುಗಡೆ ಮಾಡಿದರು. ಮಾಗಡಿ ಶಾಸಕ ಎ.ಮಂಜುನಾಥ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜು ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಯೋಜನೆಯ ರೂಪರೇಷೆ

    · 11.5 ಮೆಗಾವಾಟ್- ವಿದ್ಯುತ್ ಉತ್ಪಾದನಾ ಸಾಮರ್ಥ್ಯ

    · 600 ಟನ್- ಪ್ರತಿದಿನ ಸಂಸ್ಕರಿತ ತ್ಯಾಜ್ಯ ಬಳಕೆ

    · 260 ಕೋಟಿ ರೂ.- ಯೋಜನಾ ಅಂದಾಜು ವೆಚ್ಚ

    · ಕೆಪಿಸಿಎಲ್, ಬಿಬಿಎಂಪಿ ತಲಾ 130 ಕೋಟಿ ರೂ. ಭರಿಸಲಿವೆ

    · 24 ತಿಂಗಳು- ಘಟಕ ನಿರ್ವಣಕ್ಕೆ ನಿಗದಿತ ಕಾಲಮಿತಿ

    · ಕಾಮಗಾರಿ ಗುತ್ತಿಗೆ- ಐಎಸ್​ಜಿಇಸಿ ಹೆವಿ ಇಂಜಿನಿಯರಿಂಗ್ ಲಿ., ನೊಯಿಡಾ ಹಾಗೂ ಹಿಟಾಚಿ ಜೋಸ್ ಇಂಡಿಯಾ ಪ್ರೖೆ.ಲಿ. ಸಹಭಾಗಿತ್ವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts