More

    ತಗ್ಗಿದ ಎಲ್ ನಿನೋ ಪ್ರಭಾವ: ರಾಜ್ಯದಲ್ಲಿ ಈ ಬಾರಿ ಆಶಾದಾಯಕ ಮುಂಗಾರು

    ಬೆಂಗಳೂರು: ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ತಾಂಡವಾಡುತ್ತಿರುವ ನಡುವೆಯೂ ಈ ಬಾರಿ ಮುಂಗಾರು ಆಶಾದಾಯಕವಾಗಿದೆ.

    ಫೆಸಿಫಿಕ್ ಸಮುದ್ರದ ಪೂರ್ವ ಭಾಗದಲ್ಲಿ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್‌ನಿಂದ 1.5 ಡಿಗ್ರಿವರೆಗೆ ದಾಖಲಾದರೆ ಎಲ್ ನಿನೋ ಉಂಟಾಗುತ್ತದೆ. ಕಳೆದ ವರ್ಷ ಎಲ್ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಆದರೆ, ಜಾಗತಿಕ ನಿಯಂತ್ರಕ ಸೂಚ್ಯಂಕದ ಪ್ರಕಾರ ಕಳೆದ ಫೆಬ್ರವರಿಯಿಂದ ಎಲ್ ನಿನೋ ಮಧ್ಯಮ ಹಂತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ ಲಾ-ನಿನಾ ಎಂದು ಕರೆಯಲಾಗುತ್ತಿದೆ. ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮಳೆ ಮೇಲೆ ಪರಿಣಾಮ ಬೀರಲಿದೆ. ಈ ವರ್ಷ ಇವೆರಡೂ ಸಾಧಾರಣ ಮಟ್ಟದಲ್ಲಿ ಇರುವುದರಿಂದ ಮುಂಗಾರು, ಹಿಂಗಾರಿನಲ್ಲಿ ಉತ್ತಮ ವರ್ಷಧಾರೆಯಾಗಲಿದೆ ಎಂದು ಮಾಹಿತಿ ನೀಡಿದರು.

    ದೇಶಾದ್ಯಂತ ಹಿಟ್ ವೇವ್:
    ಏಪ್ರಿಲ್ ಮೇನಲ್ಲಿ ದೇಶಾದ್ಯಂತ ಉಷ್ಣ ಮಾರುತ (ಹಿಟ್ ವೇವ್) ಇರಲಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಗದಗ, ಬಾಗಲಕೋಟೆ, ಬಳ್ಳಾರಿ ಸೇರಿ ಉ.ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ. ಗರಿಷ್ಠ ತಾಪಮಾನದಲ್ಲಿ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾದರೆ ಶಾಖಾ ಅಲೆ ಉಂಟಾಗಲಿದೆ. ಈ ಭಾಗದಲ್ಲಿ ವಾಡಿಕೆಯಂತೆ 40-42 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ದಾಖಲಾಗುತ್ತದೆ. ಅದಕ್ಕಿಂತ ಹೆಚ್ಚು ದಾಖಲಾದರೆ ಉಷ್ಣ ಮಾರುತ ಉಂಟಾಗಲಿದೆ. ಕೆಲವೊಮ್ಮೆ 2, 3 ಅಥವಾ 10 ದಿನದವರೆಗೆ ಇರುತ್ತದೆ ಎಂದು ಪ್ರಸಾದ್ ಹೇಳಿದರು. ಉಡುಪಿ, ದ.ಕನ್ನಡ, ಉ.ಕನ್ನಡದಲ್ಲಿ ವಾಡಿಕೆಯಂತೆ ಗರಿಷ್ಠ ತಾಪಮಾನ 36-37 ಡಿಗ್ರಿವರೆಗೆ ದಾಖಲಾಗುತ್ತದೆ. ವಾಡಿಕೆಗಿಂತ ಹೆಚ್ಚು ದಾಖಲಾದರೆ ಬಿಸಿ ಗಾಳಿ ಕಾಣಿಸಿಕೊಳ್ಳಲಿದೆ ಎಂದರು. ದ.ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ದಾಖಲಾಗುತ್ತದೆ. ಮೈಸೂರು, ಮಂಡ್ಯ ಸೇರಿ ದ.ಕರ್ನಾಟಕದ ಒಂದೆರೆಡು ಜಿಲ್ಲೆಗಳಲ್ಲಿ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಆದರೆ, ಬಿಸಿ ಗಾಳಿ ಆತಂಕ ಇರುವುದಿಲ್ಲ. ರಾಜ್ಯದಲ್ಲಿ ತಾಪಮಾನ ಹೆಚ್ಚಿದಂತೆ ಗುಡುಗು, ಮಿಂಚುಸಹಿತ ಪೂರ್ವ ಮುಂಗಾರು ಬೀಳಲಿದೆ. ಏಪ್ರಿಲ್ ಮೊದಲ ವಾರದಿಂದ ಕೆಲವೆಡೆ ವರ್ಷಧಾರೆಯಾಗಲಿದೆ ಎಂದರು.

    ಮಾಜಿ ಸಿಎಂ ಎಸ್.ಎಂ.ಕೃಷ್ಣ, ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿ ನಾಲ್ವರಿಗೆ ಗೌರವ ಡಾಕ್ಟರೇಟ್

    ಬೆಂಗಳೂರು ಸೇಫ್​​:
    ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳು ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಆದರೆ, ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ವಾಡಿಕೆಯಷ್ಟೇ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಸಮುದ್ರ ಮುಟ್ಟದಿಂದ 900 ಮೀಟರ್ ಎತ್ತರದಲ್ಲಿ ಇರುವುದರಿಂದ ಹೆಚ್ಚು ಉಷ್ಣಾಂಶ ದಾಖಲಾಗುವುದಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಮುಂಗಾರು ಸಂಬಂಧಿಸಿದ ಮೊದಲ ವರದಿ ಹಾಗೂ ಮೇ ನಾಲ್ಕನೇ ವಾರದಲ್ಲಿ 2ನೇ ವರದಿಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಲಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts