More

    ರೆಡ್​ ಕ್ರಾಸ್​ ನಿಂದ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ

    ಗದಗ: ಭಾರತೀಯ ರೆಡ್​ ಕ್ರಾಸ್​ ಭವನದಲ್ಲಿ ಸೋಮವಾರ ವಿಕಲಚೇತನರಿಗೆ ಸ್ಯಾಂಡಲ್​ ಹಾಗೂ ಕೃತಕ ಕಾಲು ವಿತರಣೆ ಮತ್ತು ವಿಶ್ವ ಏಡ್ಸ್​ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್​ ಸದಸ್ಯ ಪ್ರೊ. ಎಸ್​. ವಿ. ಸಂಕನೂರ ಮಾತನಾಡಿ, ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯು ವಿಕಲಚೇತನರು ಬದುಕಲು ಸಾಧನ ಸಲಕರಣೆ ವಿತರಿಸುತ್ತಿರುವರುವುದು ಶ್ಲಾನೀಯ. ಈ ಸಂಸ್ಥೆಯು ಪ್ರಕೃತಿ ವಿಕೋಪಕ್ಕೊಳಗಾದ ಬಡವರಿಗೆ ಬದುಕನ್ನು ಕಟ್ಟಿಕೊಳ್ಳಲು ಹಲವು ರೀತಿ ಸಹಾಯ ಮಾಡುತ್ತಿದೆ. ಕೋವಿಡ್​ ಮಹಾಮಾರಿ ಖಾಯಿಲೆಗೆ ಭಾರತ ದೇಶದ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಔಷಧಿ ಕಂಡು ಹಿಡಿದಿರುವುದು ನಮ್ಮೆಲ್ಲರಿಗೆ ಹೆಮ್ಮೆ. ವಿಕಲಚೇತನರಿಗೆ ಧೈರ್ಯ, ಸ್ಥೆರ್ಯ, ಆತ್ಮ ವಿಶ್ವಾಸ ತುಂಬಿ ಉತ್ತಮ ಬದುಕನ್ನು ನಡೆಸುವ ಮನೋಬಾವ ಬೆಳೆಸಬೇಕಾಗಿದೆ. ಪುಟ್ಟರಾಜ ಕವಿ ಗವಾಯಿಗಳು ವಿಕಲಚೇತನರಿಗೆ ಸ್ಪೂತಿರ್ ಹಾಗೂ ಮಾದರಿ. ವಿಕಲಚೇತನರಿಗೆ ಮಾಡುವ ಸೇವೆ ನಿಜವಾದ ಸೇವೆ ಎಂದು ಹೇಳಿದರು.
    ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಸಂಸ್ಥೆಯ ಸಭಾಪತಿ ಡಾ. ಆರ್​ ಎನ್​ ಗೋಡಬೋಲೆ ಮಾತನಾಡಿ, ಸಂಸ್ಥೆಯು ದಾನಿಗಳಿಂದ ಹಣ ಸ್ವೀಕರಿಸಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸುತ್ತಿದೆ, ಇದಕ್ಕೆ ಪ್ರತಿಯೊಬ್ಬರ ಸಹಾಯ ಸಹಕಾರ ಇರಬೇಕೆಂದು ತಿಳಿಸಿದರು.
    ಎಂ. ಡಿ. ಸಮುದ್ರಿ, ಮಂಜುನಾಥ ಕೆ, ವಿಜಯಕುಮಾರ ಹಿರೇಮಠ, ದ್ರಾಾಯಿಣಿ ಮೂರುಶಿಳ್ಳಿನ, ಎಂ. ಬಿ. ಮೆಣಸಗಿ, ಗಣೇಶಸಿಂಗ್​ ಬ್ಯಾಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts